ಮುದ್ದೆಬಿಹಾಲ್

ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಮುದ್ದೇಬಿಹಾಳ 17 : ಮಗುವಿನ ಮೊದಲನೇ ಪಾಠಶಾಲೆ ಎಂದರೆ ಅದು ತಾಯಿಯ ಮಡಿಲು.ಅಲ್ಲಿ ಕಲಿಯುವ ಮಗು ಮುಂದೆ ಸಮಾಜಕ್ಕೆ ಆಸ್ತಿಯಾಗಿ ಬದಲಾಗುವಂತೆ ಪಾಲಕರು ಅವರ ಶಿಕ್ಷಣದ ಜವಾಬ್ದಾರಿ ನಿಭಾಯಿಸಬೇಕು ಎಂದು ಮುಸ್ಲಿಂ ಸಮಾಜದ ಹಿರಿಯ ಮುಖಂಡ ಅಬ್ದುಲಗಫೂರ ಮಕಾನದಾರ ಹೇಳಿದರು.ಪಟ್ಟಣದ ಮಹೆಬೂಬ ನಗರದ ಮೆಕ್ಕಾ ಶಾದಿ ಹಾಲ್ನಲ್ಲಿ ಭಾನುವಾರ  ಉಮ್ಮೀದ್ ಫೌಂಡೇಶನ್ ನೇತೃತ್ವದಲ್ಲಿ ಏರಿ​‍್ಡಸಿದ್ದ ನಗರದ ಮುಸ್ಲಿಂ ಸಮಾಜದ ಪ್ರತಿಭಾವಂತ ಎಸ್‌.ಎಸ್‌.ಎಲ್‌.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.  

ಶಿಕ್ಷಣದಲ್ಲಿ ಹಿಂದುಳಿಯುತ್ತಿರುವ ಸಮಾಜದ ಮಕ್ಕಳಿಗೆ  ಪ್ರೋತ್ಸಾಹ, ಅಗತ್ಯ  ಮಾರ್ಗದರ್ಶನ ಮಾಡುವ ಇಂತಹ ಕಾರ್ಯಕ್ರಮಗಳು ಹೆಚ್ಚಬೇಕಿದೆ.ಜ್ಞಾನ ಮನುಷ್ಯನ ಜೀವನವನ್ನು ರೂಪಿಸುವ ಶಕ್ತಿಯಾಗಿದ್ದು ಅಲ್ಲಾಹನು ಭೂಮಿಯ ಮೇಲೆ ಜೀವಿಸುವ ಎಲ್ಲ ಪ್ರಾಣಿಗಳಲ್ಲಿ ಮನುಷ್ಯನಿಗೆ ಮಾತ್ರ ಬುದ್ದಿ,ವಿವೇಕ ಮತ್ತು ಯೋಚನೆ ಮಾಡುವ ಸಾಮರ್ಥ್ಯ ಕರುಣಿಸಿದ್ದಾನೆ. ಇದನ್ನು ಅರಿತು ಸಮಾಜದ ಮಕ್ಕಳು ಸಾಧನೆ ತೋರಿದಾಗ ಅವರನ್ನು ಅಭಿನಂದಿಸುವ ಕಾರ್ಯಕ್ರಮಗಳಿಗೆ ಸಾಕ್ಷಿಕರಿಸುವ ಮೂಲಕ ಅವರ ಪ್ರತಿಭೆಗೆ ಪ್ರೋತ್ಸಾಹಿಸುವ ಕಾರ್ಯ ಸಮಾಜದವರಿಂದ ಆಗಬೇಕು ಎಂದು ಹೇಳಿದರು. ಸಿಪಿಐ ಮೊಹ್ಮದ ಫಸಿವುದ್ದೀನ ಮಾತನಾಡಿ, ಮುಸ್ಲಿಂ ಸಮಾಜದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾತಿನಿಧ್ಯ ದೊರೆತಿದೆ.ಆದರೆ ಈ ವಿಷಯದಲ್ಲಿ ಸಮಾಜದ ಗಂಡು ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ.ಪಾಲಕರು ಮಕ್ಕಳನ್ನು ಸಣ್ಣವರಿದ್ದಾಗಲೇ ದುಡಿಯಲು ಕಳಿಸದೇ ಅವರಿಗೆ ಶಿಕ್ಷಣ ಕೊಡಿಸಿ ಅವರ ಭವಿಷ್ಯ ರೂಪಿಸಬೇಕು ಎಂದು ಹೇಳಿದರು.  


ಸುದ್ದಿ ಓದಿ