ಹೋಮಿಯೋಪತಿ ಔಷಧ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ: ಶಕೀನಾ
ಬಳ್ಳಾರಿ 18: ರೋಗ ನಿರೋಧಕ ಶಕ್ತಿ ವರ್ಧಕ ಹೋಮಿಯೋಪತಿ ಓಷಧಿಯನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಶಕೀನಾ ಅವರು ಹೇಳಿದರು.
ಕೋವಿಡ್-19 ಮೂರನೇ ಅಲೆ ಮುಂಜಾಗೃತ ಕ್ರಮವಾಗಿ ಕೇಂದ್ರ ಆಯುಷ್ ಮಂತ್ರಾಲಯ ಅನುಮೋದಿತ ರೋಗ ನಿರೋಧಕ ಶಕ್ತಿ ವರ್ಧಕ ಹೋಮಿಯೋಪತಿ ಓಷಧಿಯನ್ನು (ಆರೆ್ಸನಿಕ್ ಆಲ್ಬಮ್ 30) ಆಯುಷ್ ಇಲಾಖೆ ವತಿಯಿಂದ ನಗರದ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ ಸಿಬ್ಬಂದಿಗೆ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಆಯುಷ್ ಇಲಾಖೆಯ ಡಾ.ಶಶಿಧರ ರಾಮದುರ್ಗ ಅವರು ಮಾತನಾಡಿ, ಸರ್ಕಾರ ಸೂಚಿಸಿರುವ ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡುತ್ತಾ ಕೇಂದ್ರ ಆಯುಷ್ ಮಂತ್ರಾಲಯ ಅನುಮೋದಿತ ರೋಗ ನಿರೋಧಕ ಶಕ್ತಿ ವರ್ಧಕ ಹೊಮಿಯೋಪತಿ ಓಷಧಿ ಆರೆ್ಸನಿಕ್ ಆಲ್ಬಂ 30 ಪೊಟೆನ್ಸಿ ಓಷಧಿ ಸೇವನೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಕೋವಿಡ್ ವಿರುದ್ದ ಹೋರಾಡಲು ನಮ್ಮ ದೇಹಕ್ಕೆ ಅದು ಶಕ್ತಿ ನೀಡುತ್ತದೆ ಎಂದರು.
ಓಷಧಿ ಸೇವನಾ ವಿಧಾನವನ್ನು ಅವರು ವಿವರಿಸಿದರು.
ವೈದ್ಯಾಧಿಕಾರಿ ಡಾ.ಉಮೇಶ ಕಾಖಂಡಕಿ ಅವರು ಆಯುಷ್ ಓಷಧಿಗಳನ್ನು ಸೇವನೆಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕರೆ ನೀಡಿದರು. ಜೀವನ ಶೈಲಿ ಮತ್ತು ಆಹಾರ ಪದ್ದತಿಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಆಯುಷ್ ವೈದ್ಯಾಧಿಕಾರಿ ಡಾ.ಟಿ.ಫಣೀಂದರ, ಓಷಧಿ ವಿತರಕರಾಧ ರತ್ನಮ್ಮ ಮತ್ತು ಗೋವಿಂದರಾಜು ಮತ್ತಿತರರು ಇದ್ದರು. 50 ಮಂದಿಗೆ ಓಷಧಿಗಳ ವಿತರಣೆ ಮಾಡಲಾಯಿತು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಓಷಧಿಗಳನ್ನು ವಿತರಿಸಲಾಯಿತು.