ಬೆಳಗಾವಿ

ಟೇಕ್ವಾಂಡೋ: ಜಿಲ್ಲಾ ಮಟ್ಟದಲ್ಲಿ ಚಿನ್ನ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆ

ಟೇಕ್ವಾಂಡೋ: ಜಿಲ್ಲಾ ಮಟ್ಟದಲ್ಲಿ ಚಿನ್ನ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆ


ಘಟಪ್ರಭಾ 25 : ಜಿಲ್ಲಾ ಪಂಚಾಯಿತಿ ಬೆಳಗಾವಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ರಾಯಬಾಗ ತಾಲ್ಲೂಕಿನ ಚಿಂಚಲಿಯಲ್ಲಿ ನಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಟೇಕ್ವಾಂಡೋ ಸ್ಪರ್ಧೆಯಲ್ಲಿ ಘಟಪ್ರಭಾದ ಕ್ರೈಸ್ಟ್‌ ಕಾನ್ವೆಂಟ್ ವಿದ್ಯಾರ್ಥಿನಿ ಸಲೋನಿ ಬಸವರಾಜ ಮೇತ್ರಿ ಚಿನ್ನದ ಪದಕ ಗೆದ್ದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.  

ಇದೇ ಸ್ಪರ್ಧೆಯಲ್ಲಿ ಡಾ. ಗಂಗಾಧರ ಆಂಗ್ಲ ಮಾಧ್ಯಮ ಶಾಲೆ, ಶಿರಢಾಣದ ಕುಮಾರ್ ಉತ್ತಮ ಬಸವರಾಜ ಕುಂಟೋಜಿ ಬೆಳ್ಳಿ ಪದಕ ಹಾಗೂ ಸಾಧನಾ ಎ. ಹಾಲುಕಿ ಕಂಚಿನ ಪದಕ ಗಳಿಸಿದ್ದಾರೆ.  ಮೂವರು ಕ್ರೀಡಾಪಟುಗಳಿಗೆ ಘಟಪ್ರಭಾದ ಶಿವಯೋಗಿ ಟೇಕ್ವಾಂಡೋ ಕೋಚಿಂಗ್ ಸೆಂಟರ್ನ ತರಬೇತುದಾರ ಲಕ್ಷ್ಮಣ ಮೇತ್ರಿ ತರಬೇತಿ ನೀಡಿದ್ದಾರೆ.  

ವಿಜೇತ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕೆಂಪಯ್ಯಸ್ವಾಮಿ ಮಠದ ಪರಮಪೂಜ್ಯ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಕ್ರೈಸ್ಟ್‌ ಕಾನ್ವೆಂಟ್ ಶಾಲೆಯ ಅಧ್ಯಕ್ಷ ರಾಜು ಆರ್‌. ಬೆಂಗಳೂರು, ಪ್ರಾಂಶುಪಾಲೆ ವೀಣಾ ಬೆಂಗಳೂರು, ಘಟಪ್ರಭಾ ಹಾಗೂ ಶಿರಢಾಣದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಪ್ರಾಂಶುಪಾಲರು, ಶಿಕ್ಷಕರು, ಪಾಲಕರು ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ. ಮಹಾಜನ ಅಭಿನಂದಿಸಿದ್ದಾರೆ. 


ಸುದ್ದಿ ಓದಿ