ಟಿಸಿ ದುರಸ್ಥಿ ನಿರ್ವಹಣಾ ಕಾರ್ಯ ಪೂರ್ಣ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ.ಮೇ.09 : ವಿದ್ಯುತ್ ಪರಿವರ್ತಕಗಳ ಅಭಿಯಾನದಡಿ ಜೆಸ್ಕಾಂ ಇಲಾಖೆಯ ಲೈನ್ಮೆನ್ಗಳು ನಗರದ ವಿದ್ಯುತ್ ಪರಿವರ್ತಕಗಳ ದುರಸ್ಥಿ ಕಾರ್ಯ ಮಾಡಿದರು.
ವಿದ್ಯುತ್ ಪರಿವರ್ತಕಗಳು ಪದೇ ಪದೇ ಸುಟ್ಟು ಕೆಟ್ಟು ದುರಸ್ಥಿ ಕಾರ್ಯಕ್ಕೆ ಬಾರದಂತೆ ಸಂಪೂರ್ಣ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಸರಕಾರದ ಆದೇಶದಂತೆ ಎಲ್ಲಾ ಟಿಸಿಗಳ ನಿರ್ವಹಣಾ ಕಾರ್ಯ ಮಾಡಲಾಗುತ್ತಿದೆ, ಕೊಟ್ಟೂರು ವೃತ್ತದಲ್ಲಿನ ಟಿಸಿಗೆ ಸುತ್ತಲು ಬೈಂಡಿಂಗ್ ಮಾಡಲಾಗುವುದು, ಇನ್ನು ಮುಖ್ಯ ರಸ್ತೆಯಲ್ಲಿನ ಟಿಸಿಗಳನ್ನು ಕೈಗೆಟುಕದಂತೆ ಎತ್ತರಕ್ಕೆ ಅಳವಡಿಸುವುದು, ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುವುದು.
ಹಗರಿಬೊಮ್ಮನಹಳ್ಳಿ ಉಪವಿಭಾಗದಲ್ಲಿ ಒಟ್ಟು ನಿರಂತರ ಜ್ಯೋತಿಗೆ ಸಂಬಂಧಪಟ್ಟ 786 ಪರಿವರ್ತಕಗಳ ಪೈಕಿ ಮೇ 5ರಿಂದ 9ರವರೆಗೆ ಒಟ್ಟು 165 ಪರಿವರ್ತಕಗಳ ನಿರ್ವಹಣಾ ಕಾರ್ಯ ಸಂಪೂರ್ಣವಾಗಿದೆ, ಇಲಾಖೆಯಲ್ಲಿನ ಸಿಬ್ಬಂದಿಗಳನ್ನು ತಂಡಗಳಾಗಿ ರೂಪಿಸಿ ಅಭಿಯಾನದ ನಿಗದಿತ ದಿನಾಂಕದೊಳಗೆ ಉಳಿದ ಟಿಸಿಗಳ ನಿರ್ವಹಣಾ ಕಾರ್ಯ ಪೂರ್ಣ ಮಾಡಲಾಗುವುದು ಎಂದು ಎಇಇ ತೇಜಾನಾಯ್ಕ್ ತಿಳಿಸಿದರು.
ಈ ಸಂದರ್ಭದಲ್ಲಿ ಜೆಸ್ಕಾಂ ಇಲಾಖೆಯ ಲೈನ್ಮೆನ್ಗಳು ಶಾಖಾಧಿಕಾರಿ ಪರಿವರ್ತಕಗಳ ದುರಸ್ಥಿ ಕಾರ್ಯದಲ್ಲಿ ಭಾವಹಿಸಿದ್ದರು.