ಮೀನುಗಾರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರಾಗಿ ಟಿ.ರಾಘವೇಂದ್ರ
ಬಳ್ಳಾರಿ 14: ಭಾರತೀಯ ಜನತಾ ಪಾರ್ಟಿಯ ಮೀನುಗಾರರ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯರನ್ನಾಗಿ, ಇಲ್ಲಿನ ರಾಘವೇಂದ್ರ ತಳವಾರರನ್ನು ಮೀನುಗಾರ ಪ್ರಕೋಷ್ಠದ ರಾಜ್ಯ ಸಂಚಾಲಕ ನಾಗಪ್ಪ ಎಸ್.ಅಂಬಿ ನೇಮಕಗೊಳಿಸಿದ್ದಾರೆ.
ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತ, ಪಕ್ಷವನ್ನು ಸಂಘಟಿಸುವಲ್ಲಿ ಮುಂದಾಗಬೇಕು ಎಂದು ರಾಜ್ಯ ಸಂಚಾಲಕರು ನೇಮಕ ಪತ್ರದಲ್ಲಿ ಸೂಚಿಸಿದ್ದಾರೆ.