ತಾಳಿಕೋಟಿ

ತಾಳಿಕೋಟಿ ಆಸ್ಪತ್ರೆಗೆ ನೂತನ ಅಂಬುಲೆನ್ಸ್‌

ತಾಳಿಕೋಟಿ ಆಸ್ಪತ್ರೆಗೆ ನೂತನ ಅಂಬುಲೆನ್ಸ್‌
Tāḷikōṭi āspatrege nūtana āmbulen

ತಾಳಿಕೋಟಿ ಆಸ್ಪತ್ರೆಗೆ ನೂತನ ಅಂಬುಲೆನ್ಸ್‌  

ತಾಳಿಕೋಟಿ 12: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ವತಿಯಿಂದ ನೀಡಲಾದ ನೂತನ ಅಂಬುಲೆನ್ಸ್‌ ಅನ್ನು ಶಾಸಕ ಅಪ್ಪಾಜಿ ನಾಡಗೌಡ ಅವರು ಮಂಗಳವಾರ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಳಿಕೋಟಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಅಂಬುಲೆನ್ಸ್‌ ಅಗತ್ಯವಾಗಿದೆ. ವಿಶೇಷವಾಗಿ ಅಪಘಾತ ಕ್ಕೊಳಗಾದವರು ಹಾಗೂ ಗರ್ಭಿಣಿಯರನ್ನು ದೂರದ ಆಸ್ಪತ್ರೆಗೆ ತುರ್ತಾಗಿ ಸಾಗಿಸಲು ಇದು ಸಹಕಾರಿಯಾಗಲಿದೆ. ಕೆಎಸ್ಡಿಎಲ್ ವತಿಯಿಂದ ನೀಡಿರುವ ಅಂಬುಲೆನ್ಸ್‌ ಅನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ, ರೋಗಿಗಳ ಸಾಗಣೆಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ಆಡಳಿತ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಎ.ಜಿ. ಬಿರಾದಾರ, ತಾಲೂಕು ಆರೋಗ್ಯಾಧಿಕಾರಿ ಸತೀಶ ತಿವಾರಿ, ಶಸ್ತ್ರಚಿಕಿತ್ಸಕ ಡಾ. ಸಾಗರ ಸಿದ್ದನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ಚೋರಗಸ್ತಿ, ಬಿ.ಎಸ್‌. ಪಾಟೀಲ ಯಾಳಗಿ, ಎಂ.ಜಿ. ಪಾಟೀಲ, ಪ್ರಭುಗೌಡ ಮದರಕಲ್, ಸಿದ್ದನಗೌಡ ಪಾಟೀಲ ನಾವದಗಿ, ಮುಸ್ಲಿಂ ಬ್ಯಾಂಕ್ ಅಧ್ಯಕ್ಷ ಮಹಿಬೂಬ ಕೆಂಭಾವಿ, ಜೈಭೀಮ ಮುತ್ತಗಿ, ಶಿವರಾಜ ಗುಂಡಕನಾಳ, ವೀರೇಶಗೌಡ ಬಾಗೇವಾಡಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ