ಮಹಲಿಂಗಪುರ

ಸ್ವಚ್ಛ ಸರ್ವೇಕ್ಷಣ ಜಾಗೃತಿ ಕಾರ್ಯಕ್ರಮ

ಸ್ವಚ್ಛ ಸರ್ವೇಕ್ಷಣ ಜಾಗೃತಿ ಕಾರ್ಯಕ್ರಮ

ಮಹಾಲಿಂಗಪುರ: ಪ್ರತಿಯೊಬ್ಬರೂ ಬಯಲು ಶೌಚವನ್ನು ವರ್ಜಿಸಿ, ಶೌಚಾಲಯ ಬಳಸಿ ಮತ್ತು ಹಸಿ ಹಾಗೂ ಒಣ ಕಸವನ್ನು ವಿಂಗಡಿಸಿ ಹಾಕುವುದರಿಂದ ಸ್ವಚ್ಛ ಭಾರತದ ಕನಸು ನನಸಾದಂತೆ ಎಂದು ಪುರಸಭಾ ಅಧ್ಯಕ್ಷೆ ಸ್ನೇಹಲ್ ಅಂಗಡಿ ಹೇಳಿದರು. 

ಸ್ಥಳೀಯ ಪುರಸಭೆ ಹಾಗೂ ಮೈಸೂರಿನ ಅರಿವು ಸಾಂಸ್ಕೃತಿಕ ಸಂಘ ಇವುಗಳ ಸಹಯೋಗದಲ್ಲಿ ಗುರುವಾರ ನಡೆದ ಸ್ವಚ್ಛ ಸರ್ವೇಕ್ಷಣ ಜಾಗೃತಿ ಕಾರ್ಯಕ್ರಮದ ಬೀದಿ ನಾಟಕವನ್ನು ತಮಟೆ ಹೊಡೆಯುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು. 

 ಬಯಲು ಶೌಚ ಜಗತ್ತಿನ ದೊಡ್ಡ ದೌರ್ಭಾಗ್ಯ ಅದು ಇಂದಿಗೂ ನಮ್ಮ ಹಳ್ಳಿಗಳಲ್ಲಿ ಮತ್ತು ಪಟ್ಟಣದ ಕೆಲ ಪ್ರದೇಶಗಳಲ್ಲಿ ಜೀವಂತವಾಗಿರುವುದು ನಾಚಿಕೆಗೇಡಿನ ಸಂಗತಿ, ಇದರಿಂದ ನೀರು, ವಾಯು, ಮಣ್ಣು ಮಾಲಿನ್ಯ ಹೊಂದುವುದರಿಂದ ಸಾಂಕ್ರಾಮಿಕ ರೋಗಗಳ ರೂಪವಾಗಿ ಜೀವನ ನರಕವಾಗುತ್ತದೆ ಆದ್ದರಿಂದ ಪಟ್ಟಣದ ನೈರ್ಮಲೀಕರಣ ಕ್ಕೆ ನಾವೆಲ್ಲಾ ಸಹಕರಿಸಿ ಸ್ವಚ್ಛ ಪಟ್ಟಣ ಸುಂದರ ಪಟ್ಟಣವನ್ನಾಗಿ ಮಾಡೋಣ ಎಂದರು.  

ಬಯಲು ಶೌಚ ಬಗ್ಗೆ ಮತ್ತು ಸಾರ್ವಜನಿಕರು ನೆರೆಹೊರೆಯವರಿಗೆ ತೊಂದರೆಯಾಗದಂತೆ ತಮ್ಮ ಮನೆಯ ಮುಂದಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗೆಗೆ ಮೈಸೂರಿನ ಕಲಾತಂಡದ ಕಲಾವಿದರಾದ ಆರ್‌. ಚಕ್ರಪಾಣಿ, ರಮೇಶ, ಕೇಶವ, ಪ್ರಕಾಶ, ಅಸ್ಮಾಬಾನು ಬೀದಿ ನಾಟಕವಾಡುವ ಮೂಲಕ ಸಾರ್ವಜನಿಕರ ಗಮನಸೆಳೆದರು. 

ಉಪಾಧ್ಯಕ್ಷೆ ಗೋದಾವರಿ ಬಾಟ್, ಪುರಸಭಾ ಸದಸ್ಯರಾದ ಶೇಖರ್ ಅಂಗಡಿ, ರವಿ ಜವಳಗಿ, ಬಸವರಾಜ ಹಿಟ್ಟಿನಮಠ, ರಾಜು ಚಮಕೇರಿ ಮುಖಂಡರಾದ ಶಿವಾನಂದ ಅಂಗಡಿ, ಜಿ.ಎಸ್ ಗೊಂಬಿ, ನಟರಾಜ್ ಸಬಕಾಳೆ, ವಿರುಪಾಕ್ಷಿ ಬಾಟ್, ಮುಖ್ಯಾಧಿಕಾರಿ ಹೆಚ್‌.ಎಸ್‌. ಚಿತ್ತರಗಿ ಅಧಿಕಾರಿಗಳಾದ ಆರ್‌.ಡಿ.ನಡುವಿನಮನಿ, ವಿ.ಜಿ. ಕುಲ್ಕರ್ಣಿ, ಬಿ.ವಾಯ್‌.ಮರ್ದಿ, ಎಸ್‌.ಎನ್‌.ಪಾಟೀಲ್, ನಾಮದೇವ ಲಮಾಣಿ, ಎಂ.ಜಿ. ದಳವಾಯಿ ಸಿಬ್ಬಂದಿಗಳಾದ ರಾಜೇಶ್ವರಿ ಸೋರಗಾವಿ ಹಾಗೂ  ಪರಿಟ್, ಸಿಪಾಯಿ ರಾಮು, ಮಹಾಲಿಂಗ ಮಾಂಗ ಇನ್ನೂ ಅನೇಕರಿದ್ದರು. 


ಸುದ್ದಿ ಓದಿ