ಯಾಜ್ಞವಲ್ಕ್ಯಮಹರ್ಷಿ ಗ್ರಂಥ ಪಾರಾಯಣದಿಂದ ಪಾಪ ನಾಶ : ಶಂಭುನಾಥ ಸ್ವಾಮೀಜಿ
ಬನಶಂಕರಿ ದೇವಸ್ಥಾನದಲ್ಲಿ ಸುವರ್ಣ ವೇದಾಂತ ಪರಿಷತ ಕಾರ್ಯಕ್ರಮ
ಮಹಾಲಿಂಗಪುರ 01: ವೈಶಂಪಾಯನರು ಶಿಷ್ಯರನ್ನು ತಿರಸ್ಕರಿಸಿದ್ದರಿಂದ ಯಾಜ್ಞವಲ್ಕ್ಯರು ಶಾಪಕ್ಕೊಳಗಾದರಂತೆ. ಅವರಿಂದ ಕಲಿತ ವೇದಗಳನ್ನು ಈತ ವಮನ ಮಾಡಲು ಉಳಿದ ಮುನಿಗಳು ಅದನ್ನು ತಿತ್ತಿರಿಪಕ್ಷಿಯ ರೂಪದಿಂದ ಸ್ವೀಕರಿಸಿದರು. ಬಳಿಕ ಯಾಜ್ಞವಲ್ಕ್ಯರು ಸೂರ್ಯನಿಂದ ಶುಕ್ಲಯಜುರ್ವೇದವನ್ನು ಕಲಿತರಂತೆ.ಆವರು ಬರೆದ ಗ್ರಂಥ ಪಾರಾಯಣದಿಂದ ನಮ್ಮ ಪಾಪ ಕರ್ಮಗಳು ನಾಶವಾಗುತ್ತವೆ ಎಂದು ರಂಭಾಪುರಿ ಹಾಸನಶಾಖಾ ಮಠದ ಪ ಪೂ, ಸದ್ಗುರು ಶ್ರೀ ಶಂಭುನಾಥ ಮಹಾಸ್ವಾಮಿಗಳು ಹೇಳಿದರು.
ನಗರದ ಬನಶಂಕರಿ ದೇವಸ್ಥಾನದ ಸಾಂಸ್ಕೃತಿಕ ಭವನದಲ್ಲಿ ನಡೆಯುತ್ತಿರುವ ಬಸವಾನಂದರ 50 ನೇ ಪುಣ್ಯಾರಾಧನೆ ನಿಮಿತ್ಯವಾಗಿ ಸುವರ್ಣ ವೇದಾಂತ ಪರಿಷತ್ ಹಾಗೂ ಶ್ರೀ ಸಹಜಯೋಗಿ ಸಹಜಾನಂದ ಮಹಾಸ್ವಾಮಿಗಳವರ 80 ನೇ ಹುಟ್ಟುಹಬ್ಬದ ವಧಂರ್ತಿ ಮಹೋತ್ಸವ 3 ನೇ ದಿನದ ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿ ಮಾತನಾಡಿ ವೈದಿಕ ಋಷಿ ಮುನಿಗಳಲ್ಲಿ ಈ ಯಾಜ್ಞವಲ್ಕ್ಯ ಮಹರ್ಷಿಗಳು ಅಗ್ರಗಣ್ಯರು, ಇವರು ಶುಕ್ಲ ಯಜುರ್ವೇದದ ಪ್ರಥಮ ಪ್ರವರ್ತಕರು. ಮಹಾಭಾರತದಲ್ಲಿ ಉಲ್ಲೇಖವಾಗಿರುವಂತೆ ಇವರು ವೈಶಂಪಾಯನರ ಶಿಷ್ಯರು, ಇವರು ಬರಿದಿರುವ ಗ್ರಂಥದಲ್ಲಿ 1000 ಶ್ಲೋಕಗಳು ಇವೆ.ಇವುಗಳಲ್ಲಿ ಬ್ರಹ್ಮಚಾರಿ ಪ್ರಕರಣ, ವಿವಾಹ ಪ್ರಕರಣ, ಧರ್ಮಪ್ರಕರಣ, ರಾಜ್ಯ ಪ್ರಕರಣ, ಗಣಪತಿ ಕಲ್ಪ ಪ್ರಕರಣ, ಗ್ರಹ ಶಾಂತಿ ಪ್ರಕರಣ, ರಾಜಧರ್ಮ ಪ್ರಕರಣ, ತಿಳಿಸಿದ್ದಾರೆ. ಯಾರು ಗುರು ಹಿರಿಯರನ್ನು ತಂದೆ ತಾಯಿಯನ್ನು ಗೌರವದಿಂದ ನೋಡುತ್ತಾರೋ ಆವರ ಮನೆಯಲ್ಲಿ ದೇವರು ನೆಲ್ಲೇಸುತ್ತಾನೆ ಎಂದು ಹೇಳಿದರು.
ನಂತರ ಮಾತನಾಡಿದ ನಿಜಶರಣ ಅಂಬಿಗರ ಚೌಡಯ್ಯನವರ ಪೀಠ ಸುಕ್ಷೇತ್ರ ನರೀಸೀಪುರದ ಜಗದ್ಗುರು ಶ್ರೀ ಶಾಂತಂಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಮಹಾ ವಿದ್ವಾಂಸರಾದ ಯಾಜ್ಞವಲ್ಕ್ಯರು ವಾದದಲ್ಲಿ ಅಸಾಮಾನ್ಯರಾಗಿದ್ದರಂತೆ. ಹೀಗೆ ಅವರು ಅಪಾರ ಸಂಪತ್ತು ಮತ್ತು ಕೀರ್ತಿಯನ್ನೂ ಗಳಿಸಿದ್ದರು. ಇವರು ಜನಕರಾಜನ ಯಜ್ಞಸಭೆಯಲ್ಲಿ ವಾದದಲ್ಲಿ ಪ್ರಾಣಪಣ ಒಡ್ಡಿ ತರ್ಕಮಾಡಿದ ಸಂದರ್ಭದಲ್ಲಿ ಶಾಕಲ್ಯಮುನಿಯ ಸಾವು ಸಂಭವಿಸುತ್ತದೆ. ಬ್ರಹ್ಮವಿದ್ಯೆಯ ವಿಷಯವಾಗಿ ಜನಕರಾಜನೊಂದಿಗೆ ಚರ್ಚಿಸಿ ವಿಶೇಷವಾಗಿ ಮನ್ನಣೆಪಡೆದರು. ವಿಶ್ವಾವಸು ಎಂಬ ಗಂಧರ್ವನೊಂದಿಗೆ ಸಂವಾದ ನಡೆಸಿದರು.
ಯಾಜ್ಞವಲ್ಕ್ಯರಿಗೆ ಕಾತ್ಯಾಯಿನಿ ಮತ್ತು ಮೈತ್ರೇಯಿ ಎಂಬ ಇಬ್ಬರು ಪತ್ನಿಯರಿದ್ದರು. ಅವರ ಮಡದಿ ಮೈತ್ರೇಯಿ ಆ ಕಾಲದ ಪ್ರಖ್ಯಾತ ಬ್ರಹ್ಮವಾದಿನಿಯಾಗಿದ್ದರು. ಆಕೆ ಪತಿಯೊಡನೆ ಆತ್ಮತತ್ತ್ವ ಜಿಜ್ಞಾಸೆಗೆ ಉಪಕ್ರಮಿಸಿದ್ದು ಬೃಹದಾರಣ್ಯಕೋಪನಿಷತ್ತಿನಲ್ಲಿ ಮೂಡಿದೆ. ಇದರಲ್ಲಿ ಯಾಜ್ಞವಲ್ಕ್ಯರ ಆತ್ಮತತ್ತ್ವ ಬೋಧೆ ಹೃದಯಂಗಮವಾಗಿ ಪ್ರಕಟಗೊಂಡಿದೆ ಎಂದರು.
ನಂತರ ಮಾತನಾಡಿದ ಮಂದ್ರುಪದ ಪ ಪೂ ಸದ್ಗುರು ರಾಮಚಂದ್ರಣ್ಣ ಯಾಜ್ಞವಲ್ಕ್ಯರು ತಮ್ಮ ಜೀವನದ ಉತ್ತರಾರ್ಧದಲ್ಲಿ ಐಹಿಕ ಜೀವನ ಅರ್ಥಹೀನವೆಂದು ಬಗೆದು ಎಲ್ಲವನ್ನೂ ತ್ಯಜಿಸಿ ಕೊನೆಗೆ ಪರಿವ್ರಾಜಕರಾದರು. ವಾಯು, ವಿಷ್ಣುಪುರಾಣಗಳಲ್ಲಿ ಮತ್ತು ಭಾರತ, ಭಾಗವತಗಳಲ್ಲಿ ಯಾಜ್ಞವಲ್ಕ್ಯರ ಬಗ್ಗೆ ಪ್ರಸ್ತಾಪವಿದೆ.ಯಾಜ್ಞವಲ್ಕ್ಯರು ಅಂದರೆ ಕನ್ನಡಿಗರಿಗೆ ಮೂಡುವ ವಿಶಿಷ್ಟ ಸ್ಮೃತಿ ದೇವುಡು ಅವರದ್ದು. ದೇವುಡರವರ ‘ಮಹಾದರ್ಶನ’ ಅಲೌಕಿಕತೆಯನ್ನು ಅತಿಶಯವಾಗಿ ಸಾಕ್ಷಾತ್ಕರಿಸಿಕೊಂಡು ಅದ್ಭುತ ಶೈಲಿಯಲ್ಲಿ ಅರಳಿದ ಅವರ ಕಡೆಯ ಬೃಹತ್ಕಾದಂಬರಿ. ಋಷಿ ಯಾಜ್ಞವಲ್ಕ್ಯರು ಬ್ರಹ್ಮವಿದ್ಯೆ ಸಾಧಿಸಿದ ಮಹಾನ್ ಕಥೆ ಇದಾಗಿದೆ. ಎಂದರು.
ಈ ಸಂಧರ್ಭದಲ್ಲಿ ಪ ಪೂ, ಶ್ರೀ ಪುರುಷೋತ್ತಮಾನಂದಪುರಿ,ನೀಲಮ್ಮತಾಯಿ, ಆತ್ಯಾನಂದ ಮಹಾಸ್ವಾಮಿಗಳು, ಶಿವಲಿಂಗಾನಂದ ಮಹಾಸ್ವಾಮಿಗಳು,ಮಾತನಾಡಿದರು. ಪಾವನ ಸಾನಿಧ್ಯವನ್ನು ಬೀದರದ ಚಿದಂಬರಾಶ್ರಮದ ಪ ಪೂ, ಸದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳು ವಹಿಸಿದರು, ದಿವ್ಯ ಸಾನಿಧ್ಯವನ್ನು ಕಬಿರಾನಂದ ಆಶ್ರಮ ಚಿತ್ರದುರ್ಗದ ಶಿವಲಿಂಗಾನಂದ ಮಹಾಸ್ವಾಮಿಗಳು ವಹಿಸಿದ್ದರು,ಪ ಪೂ ಮಾತಾಶ್ರೀ ಲಕ್ಷ್ಮೀದೇವಿ, ಯೋಗಿರಾಜ ಶ್ರೀ ಸದಾಶಿವ ಗುರೂಜಿ, ಮಾತಾಶ್ರೀ ಮೈತ್ರಾದೇವಿ,ದಯಾನಂದ ಸರಸ್ವತಿ,ಶಾಮಾನಂದ ಪೂಜಾರಿ ಸೇರಿ ಇನ್ನು ಅನೇಕ ಮಹಾತ್ಮರು ಬ್ರಹ್ಮ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸನ್ಮಾನ : 80 ವಸಂತಗಳನ್ನು ಪೂರ್ತಿಗೊಳಿಸಿ ಸಹಸ್ರ ಚಂದ್ರ ದರ್ಶನ ಕಂಡ ಮಹಾತ್ಮಾರಾದ ಬಿದರಿನ ಪ ಪೂ ಸದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಸ್ಥಳೀಯ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದ ಪ ಪೂ ಸದ್ಗುರು ಶ್ರೀ ಸಹಜಯೋಗಿ ಸಹಜಾನಂದ ಮಹಾಸ್ವಾಮಿಗಳಿಗೆ ವಿಶೇಷ ಅಲಂಕಾರ ಹಾಗೂ ಕೀರೀಟ ತೊಡಿಸಿ ಸನ್ಮಾನಿಸಿದರು ಮತ್ತು ವೇದಿಕೆಯ ಮೇಲಿದ್ದ ಎಲ್ಲ ಮಹಾತ್ಮಾರನ್ನು, ಹಲವು ಸಾಧಕರನ್ನು,ದಾನಿಗಳನ್ನು,ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನ ಕೊಡುಗೆ ನೀಡಿದ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ .ಮುಖಂಡರಾದ ಸಿದ್ದು ಕೊಣ್ಣೂರ, ಶ್ರೀಕಾಂತ್ ಮಾಗಿ, ಸಿದ್ದಗಿರೆಪ್ಪ ಕಾಗಿ, ಚನ್ನಬಸು ಹುರಕಡ್ಲಿ,ಡಾ ಬಿ ಡಿ ಸೊರಾಗಾಂವಿ. ಅಲ್ಲಪ್ಪಾ ಗುಂಜಿಗಾಂವಿ, ಅಶೋಕ ಅಂಗಡಿ, ಶ್ರೀಶೈಲ ನುಚ್ಚಿ, ಗೊಲೇಶ ಅಮ್ಮಣಗಿ,ಶಂಕರೆಪ್ಪ ಹಣಗಂಡಿ, ಎಸ್ ಕೆ ಗಿಂಡೆ, ಅಶೋಕ ಬಾಣಕಾರ, ಮಲ್ಲಪ್ಪಾ ಭಾವಿಕಟ್ಟಿ, ಮೆಹಬೂಬ ಸನದಿ, ಚನ್ನಪ್ಪ ಬಿ ಪಟ್ಟಣಶೆಟ್ಟಿ, ಪ್ರಭು ಬೆಳಗಲಿ, ಲಕ್ಕಪ್ಪ ಚೆಮಕೇರಿ,ಬಸವರಾಜ ಢಪಳಾಪುರ, ಮಾರುತಿ ಶರಣರು,ಕಲ್ಲಪ್ಪ ಚಿಂಚಲಿ, ಸಿ ಎಂ ಕಟಗಿ ಎಂ ಎಂ ಕಟಗಿ, ಮಲ್ಲಪ್ಪ ಮುದಕಪ್ಪಾಗೋಳ, ಮಲ್ಲಪ್ಪ ನುಚ್ಚಿ,ಸೇರಿ ಹಲವರು ಇದ್ದರು ಚಿಕ್ಕೋಡಿ, ಚಿಮ್ಮಡ ರಬಕವಿ ಬನಹಟ್ಟಿ, ಕೆಸರಗೋಪ್ಪ, ಮಾಧಭಾವಿ ಸೇರಿ ಹಲವರು ಭಾಗವಹಿಸಿದರು.ಇಂದಿನ ಮಹಾ ಪ್ರಸಾದವನ್ನು ಡಾ ಬಿ ಡಿ ಸೊರಾಗಾಂವಿ ಮಾಡಿಸಿದ್ದರು,ಕಾರ್ಯಕ್ರಮವನ್ನು ಬಿದರಿನ ಗಣೇಶಾನಂದ ಸ್ವಾಮೀಜಿ ನಿರೂಪಿಸಿ ವಂದಿಸಿದರು.