ಸೂರ್ಯವಂಶ ಕಲಾಲ - ಕಾಟಿಕ್ ಸಮಾಜವನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿಸಿ
ತಾಳಿಕೋಟೆ 19: ಸೂರ್ಯವಂಶ ಕಲಾಲ - ಕಾಟಿಕ್ ಸಮಾಜವನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿಸುವಂತೆ ಒತ್ತಾಯಿಸಿ ತಾಲೂಕು ಸೂರ್ಯವಂಶ ಕ್ಷತ್ರಿಯ ಕಲಾಲ ಕಾಟಿಕ್ ಸಮಾಜದ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಸೂರ್ಯವಂಶ ಕಾಟಿಕ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ನಮ್ಮ ಸಮಾಜಕ್ಕೆ ಸರಕಾರದಿಂದ ಯಾವುದೇ ರೀತಿಯ ಮೂಲಭೂತ ಸೌಲಭ್ಯವಾಗಲಿ ಮತ್ತು ಶಿಕ್ಷಣಕ್ಕೆ ಆಗಲಿ ಯಾವುದೇ ರೀತಿಯಲ್ಲಿ ಸೌಲಭ್ಯವಿರುವುದಿಲ್ಲ. ಕಾಟಿಕ ಸಮುದಾಯವು ಆರ್ಥಿಕವಾಗಿ ಮತ್ತು ಶಿಕ್ಷಣದಿಂದ ವಂಚಿತರು ಆಗಿರುವುದಲ್ಲದೆ ಉದ್ಯೋಗ ವಂಚಿತರಾಗಿದ್ದಾರೆ. ನಮ್ಮ ಸಮಾಜದ ಕುರಿತು 2011-12 ರಲ್ಲಿ ಪ್ರೊಫೆಸರ್ ಎಂ.ಗುರುಲಿಂಗಪ್ಪನ ನೇತೃತ್ವದಲ್ಲಿ ಕುಲಶಾಸ್ತ್ರದ ಅಧ್ಯಯನ ನಡೆಸಲಾಗಿದೆ. ಪ್ರೋ. ಎಂ.ಗುರಲಿಂಗಪ್ಪನವರು ಕಲಾಲ, ಕಾಟಿಕ್ ಸಮುದಾಯ ಅತಿ ಹಿಂದುಳಿದ ಸಮಾಜ ಆಗಿದ್ದು, ಕಾಟಿಕ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಅಧ್ಯಯನ ವರದಿಯನ್ನು ನೀಡಲಾಗಿದೆ. ಅಲ್ಲದೆ ಈಗಾಗಲೇ ದೇಶದ 13 ರಾಜ್ಯಗಳಲ್ಲಿ ನಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸಲಾಗಿದೆ. ಆದ್ದರಿಂದ ನಮ್ಮ ರಾಜ್ಯದಲ್ಲಿಯೂ ಕಾಟಿಕ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ನಮ್ಮ ಸಮಾಜವನ್ನು ಬೆಳಕಿಗೆ ತರಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ತಾಲೂಕು ಸೂರ್ಯವಂಶ ಕ್ಷತ್ರಿಯ ಕಲಾಲ - ಕಾಟಿಕ್ ಸಮಾಜದ ಅಧ್ಯಕ್ಷ ಶಂಕರ ಅಂಕುಶಖಾನಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕಲಾಲ, ಉಪಾದ್ಯಕ್ಷ ದಶರಥ ಕಲಾಲ್, ರಾಮಕೃಷ್ಣ ಚಂದೂಕರ, ಬಾಳಪ್ಪ ಮೋಟೆಕರ, ಸುನೀಲ ರಾಜಾಪೂರಿ, ಅರ್ಜುನ ಕಲಾಲ, ರಾಜು ರಾಜಾಪೂರಿ, ಉಮೇಶ ಕಲಾಕ, ಸಿದ್ದಪ್ಪ ಕಲಾಲ, ಬಾಬು ಕಾಂಬಳೇಕರ, ಸಿದ್ರಾಮ ಕಲಾಲ, ಗುರು ಕಲಾಲ, ಕೃಷ್ಣಾ ರಾಜಾಪೂರಿ, ಸಂಜೀವ ರಾಜಾಪೂರಿ ಸೇರಿದಂತೆ ಇತರರು ಇದ್ದರು.