ತಾಳಿಕೋಟಿ

ಕರ್ತವ್ಯ ನಿರತ ಯೋಧ ನೇಣಿಗೆ ಶರಣು

ಕರ್ತವ್ಯ ನಿರತ ಯೋಧ ನೇಣಿಗೆ ಶರಣು

ತಾಳಿಕೋಟೆ 08: ತಾಲೂಕಿನ ಕೊಣ್ಣೂರ ಗ್ರಾಮದ ಕರ್ತವ್ಯ ನಿರತ ಯೋಧ ನೇಣಿಗೆ ಶರಣಾದ ಘಟನೆ ಹೊಸದಿಲ್ಲಿಯ ಮಥುರಾ ಕ್ಯಾಂಪ್ ನಿವಾಸದಲ್ಲಿ ನಡೆದಿದೆ. ತಾಳಿಕೋಟೆ ತಾಲೂಕಿನ ಕೊಣ್ಣೂರು ಗ್ರಾಮದ ಯೋಧ ಪರಶುರಾಮ ಬಸಪ್ಪ ಚಿರಕನಳ್ಳಿ (25) ನೇಣಿಗೆ ಶರಣಾದ ಯೋಧನಾಗಿದ್ದಾನೆ. ಕಳೆದ 7ವರ್ಷಗಳಿಂದ 20ನೇಯ ಇಂಜಿನಿಯರಿಂಗ್ ರೇಜಿಮೆಂಟ್‍ನಲ್ಲಿ ಸಿಪಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ದೆಹಲಿಯ ಮಥುರಾ ಕ್ಯಾಂಪ್‍ನಲ್ಲಿ ಕರ್ತವ್ಯದಲ್ಲಿದ್ದ. ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ಯೋಧ ಪರಶುರಾಮ, ಒಂದು ವರ್ಷಗಳಿಂದ ಪತ್ನಿ ಜಯಶ್ರೀ ಸಮೇತರಾಗಿ ಮುಥುರಾ ಕ್ಯಾಂಪನಲ್ಲಿ ಕ್ವಾಟರ್ಸದಲ್ಲಿ ವಾಸವಾಗಿದ್ದರು. ಆದರೆ ಕಳೆದ ರಾತ್ರಿ ಮಥುರಾ ಕ್ಯಾಂಪ್‍ನ ಮನೆಯಲ್ಲಿಯೇ ಯೋಧ ನೇಣಿಗೆ ಶರಣಾಗಿದ್ದಾನೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯೋಧನಿಗೆ ತಂದೆ, ತಾಯಿ, ಸಹೋದರ ಹಾಗೂ ಇಬ್ಬರು ಸಹೋದರಿಯರಿದ್ದಾರೆ.

ಸುದ್ದಿ ಓದಿ