ಸನ್ಮಾನದಿಂದ ಬಂದ ಹಣ ಬಡರೋಗಿ ಚಿಕಿತ್ಸೆಗೆ ಧಾರೆ ಎರೆದ ದರೆಕರ : ಬಡವನ ಬದುಕಿಗೆ ಫೇಸ್‌ಬುಕ್ ಫ್ರೆಂಡ್ಸ್ ನ ಅಧ್ಯಕ್ಷನ ನೆರವು

ಸನ್ಮಾನದಿಂದ ಬಂದ ಹಣ ಬಡರೋಗಿ ಚಿಕಿತ್ಸೆಗೆ ಧಾರೆ ಎರೆದ ದರೆಕರ : ಬಡವನ ಬದುಕಿಗೆ ಫೇಸ್‌ಬುಕ್ ಫ್ರೆಂಡ್ಸ್ ನ ಅಧ್ಯಕ್ಷನ ನೆರವು

ಬಡಪಾಯಿಗಳ ಪಾಲಿನ ಆಪತ್ಭಾಂದವ ಈ ಸಂತೋಷ ದರೆಕರ್

ಪಾರೇಶ ಭೋಸಲೆ 

ಬೆಳಗಾವಿ : ಹಣ ಎಂದಾಕ್ಷಣ ಹೆಣ ಕೂಡಾ ಬಾಯಿ ಬಿಡುವ ಇಂದಿನ ದಿನಗಳಲ್ಲಿ ಬೇರೆ ಸಂಸ್ಥೆಯವರು ತನಗೆ ನೀಡಿದ ಪ್ರಶಸ್ತಿ ಜೊತೆಗೆ ನಗದು ಹಣವನ್ನು ಬಡರೋಗಿಯ ಚಿಕಿತ್ಸೆಗಾಗಿ ನೀಡುವ ಮೂಲಕ ಸಾಮಾಜಿಕ ಕಾರ್ಯಕರ್ತರೊಬ್ಬರು ಮಾನವೀಯತೆ ಎತ್ತಿ ಹಿಡಿದಿರುವ ಘಟನೆಯೊಂದು ವರದಿಯಾಗಿದ್ದು, ಲೀವರ್ ಕೈಕೊಟ್ಟ ಹಿನ್ನೆಲೆಯಲ್ಲಿ ಲೀವರ್ ಕಸಿಗಾಗಿ ಆಸ್ಪತ್ರೆಗೆ ದಾಖಲಾದ ಬಡರೋಗಿಯ ಪಾಲಿಕೆಗೆ ಆಪತ್ಭಾಂದವ ವನಾಗಿರುವದು ಬೆಳಗಾವಿ ನಗರದಲ್ಲಿ ನಡೆದಿದೆ. 

    ಹೌದು ಓದುಗರೇ ಇಂತಹ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ಸದಾ ಬಡವರಿಗಾಗಿ ಹಗಲೀರುಳ ಹವನಿಸುವ ಹಾಗೂ ಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಬೆಳಗಾವಿಯ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್‌ನ ಅಧ್ಯಕ್ಷ ಸಂತೋಷ ದಾರೇಕರ ಅವರ ನಿಸ್ವಾರ್ಥ ಕಾರ್ಯವನ್ನು ಫ್ರೀಮ್ಸನ್ಸ್ ಲಾಡ್ಜ್ ವಿಕ್ಟೋರಿಯಾ ನಂ. ೯ ಸಂಸ್ಥೆಯು ಗಮನಕ್ಕೆ ತಂದಿದೆ. ಈ ಸಂಸ್ಥೆಯು ಸಂತೋಷ ದರೆಕರ್ ಅವರ ಸಮಾಜ ಸೇವೆಗಾಗಿ ಸನ್ಮಾನಿಸಿತು. ಸಂತೋಷ ದರೇಕರ್ ಅವರನ್ನು ಫ್ರೀಮ್ಸನ್ಸ್ ಲಾಡ್ಜ್ ವಿಕ್ಟೋರಿಯಾದ ಪದಾಧಿಕಾರಿಗಳು ರೂ.೧೦,೦೦೦ ನಗದು, ಶಾಲು ಮತ್ತು ತುಳಸಿ ಗಿಡವನ್ನು ನೀಡಿ ಗೌರವಿಸಿದ್ದರು. 

    ಆದರೆ ಸದಾ ಬಡವರಿಗಾಗಿ ಚಡಪಡಿಸುವ ಸಂತೋಷ ದರೇಕರ್ ಅವರು ಸಹಾಯ ಹಸ್ತೆ ನೀಡಿದ್ದು, ಚಿಕ್ಕೋಡಿ ತಾಲೂಕಿನ ಕರೋಶಿಯ ಯುವಕ ಬಾಜಿರಾವ್ ಸುಳಕುಡೆ ಅವರ ಲೀವರ್ ಕಸಿ ಮಾಡಲು ಸಂತೋಷ ದಾರೆಕರ ಅವರು ತಮಗೆ ಸನ್ಮಾನ ಸಂದರ್ಭದಲ್ಲಿ ಫ್ರೀಮ್ಸನ್ಸ್ ಲಾಡ್ಜ್ ವಿಕ್ಟೋರಿಯಾ ಸಂಸ್ಥೆ ಅವರು ನೀಡಿದ್ದ ಹತ್ತು ಸಾವಿರ ರೂಪಾಯಿ ಮೊತ್ತವನ್ನು ನೀಡಲು ಮುಂದಾಗುವ ಮೂಲಕ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ. 

   ಬೆಳಗಾವಿಯ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್‌ನ ಅಧ್ಯಕ್ಷ ಸಂತೋಷ ದರೇಕರ್ ಅವರು ಈ ಹಿಂದೆ ಅನೇಕ ರೋಗಿಗಳಿಗೆ ರಕ್ತದಾನ ಮಾಡಲು ಸಹಾಯ ಮಾಡಿದ್ದಾರೆ. ಅನೇಕ ನಿರ್ಗತಿಕರಿಗೆ ಆಶ್ರಯ ನೀಡಲು ಉಪಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಸಂತೋಷ ಅವರು ಅನೇಕ ಪರೋಪಕಾರಿಗಳು ಮತ್ತು ಸ್ನೇಹಿತರ ಸಹಾಯದಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡ ಅನೇಕ ಕುಟುಂಬಗಳಿಗೆ ನಿಯಮಿತವಾಗಿ ಸಹಾಯ ಮಾಡುತ್ತಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ. ಅವರು ಗಾಯಗೊಂಡ ಪಕ್ಷಿಗಳು ಮತ್ತು ಪ್ರಾಣ ಗಳನ್ನು ಸಹ ಉಳಿಸಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಮತ್ತಷ್ಟು ಸಹಾಯ ಮಾಡಲು ನಿರ್ಧರಿಸಿದ್ದಾರೆ. 

   ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಾಜಿರಾವ ಸುಳಕೂಡೆ ೩೨ ವರ್ಷದ ಲೀವರ್ ಕಸಿ ಮಾಡಿಸಲು ಆರ್ಥಿಕ ಸಹಾಯ ಬೇಕಾಗಿದ್ದು, ಬಡತನ ಮತ್ತು ಮನೆಯಲ್ಲಿನ ದುಸ್ಥಿತಿ ಇದ್ದು, ಸ್ವಂತ ಜಮೀನು ಇಲ್ಲ, ಹೆಂಡತಿ, ಇಬ್ಬರು ಪುಟ್ಟ ಮಕ್ಕಳು ಹೊಂದಿದ್ದಾರೆ. ಬಾಜಿರಾವ್ ಇವರಿಗೆ ಲಿವರ್ ಸಿರೋಸಿಸ್ ಇದ್ದು ಲಿವರ್ ಕಸಿ ಮಾಡಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ೨೨ ಲಕ್ಷ ರೂ ಅವಶ್ಯಕತೆ ಇದೆ. ಬಾಜಿರಾವ ಸುಳಕೂಡೆ ೩೨ ವರ್ಷದ ಯುವಕ ಪಾನ್ ಶಾಪ್ ನಡೆಸುತ್ತಿದ್ದು, ಪತ್ನಿ, ತಾಯಿ ಮತ್ತು ಇಬ್ಬರು ಪುತ್ರರ ಕುಟುಂಬವಿದೆ. 

    ಅದೇ ರೀತಿ ಬಾಜಿರಾವ್ ಕಳೆದ ಎರಡು ವರ್ಷಗಳಿಂದ ಲಿವರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ಸಹೋದರ ಕೆ.ಎಸ್. ಸುಲ್ಕುಡೆ ಅವರು ಚಿಕ್ಕೋಡಿ, ನಿಪಾಣ  ಮತ್ತು ಬೆಳಗಾವಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದರು. ಆದರೆ ತಾತ್ಕಾಲಿಕ ಚೇತರಿಕೆಯ ನಂತರ, ಆರೋಗ್ಯವು ಮತ್ತೆ ಹದಗೆಡುತ್ತದೆ. ಪ್ರಸ್ತುತ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭವಾಗಿದೆ. ಬಾಜಿರಾವ್ ಸುಳಕುಡೆ ಅವರ ಲಿವರ್ ವಿಫಲವಾಗಿದ್ದು, ಲಿವರ್ ಕಸಿ ಮಾಡಬೇಕಾಗಿದೆ ಎಂದು ಅಲ್ಲಿನ ಹಿರಿಯ ವೈದ್ಯರು ಹೇಳಿದ್ದಾರೆ. 

  ಈ ಚಿಕಿತ್ಸೆ ಗೆ ಸುಮಾರು 22 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಆದರೆ ಕುಟುಂಬವು ತಮ್ಮ ಬಳಿ ಇದ್ದ ಹಣವನ್ನು ಆಸ್ಪತ್ರೆಗೆ ಖರ್ಚು ಮಾಡಿರುವುದರಿಂದ ಈಗ ಲಿವರ್ ಕಸಿ ಮತ್ತಿತರ ಚಿಕಿತ್ಸೆಗೆ ಹಣವಿಲ್ಲದಂತಾಗಿದೆ. ಬಾಜಿರಾವ್ ಸೂಳಕುಡೆ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಆದಷ್ಟು ಬೇಗ ಲಿವರ್ ಕಸಿ ಮಾಡಬೇಕಾಗಿದೆ. ಆದ್ದರಿಂದ ಜನಪ್ರತಿನಿಧಿಗಳು, ರಾಜಕೀಯ ವ್ಯಕ್ತಿಗಳು, ಸಂಘ ಸಂಸ್ಥೆಗಳು, ದಾನಿ ನಾಗರಿಕರಿಂದ ಆರ್ಥಿಕ ನೆರವು ನೀಡುವ ಅಗತ್ಯವಿದೆ. 

    ದಾನ ಮಾಡಲು ಇಚ್ಚಿಸುವ ದಾನಿಗಳು ಫೆಡರಲ್ ಬ್ಯಾಂಕ್ ಖಾತೆ ಸಂಖ್ಯೆ : 19390100033095, ifc ಕೋಡ್: ಈಆಖಐ 0001939 ಅಥವಾ ೯೬೩೨೭೩೧೮೦೬ ಇಲ್ಲಿ ಆರ್ಥಿಕ ಸಹಾಯ ಮಾಡಲು ವಿನಂತಿಸಲಾಗಿದೆ.


ಸುದ್ದಿ ಓದಿ