ಪ್ರತಿ ದಿನ ಒಂಬತ್ತು ಟ್ಯಾಂಕರ್ ನೀರು ಪೂರೈಕೆ: ಸಂತಿ
ಸಂಬರಗಿ 19: ಶಿರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪಾಂಡೆಗಾಂವ ಖೋತವಾಡಿ ಶಿರೂರು ಗ್ರಾಮಗಳಲ್ಲಿ ಪ್ರತಿ ದಿನ ಒಂಬತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪಿಡಿಒ ಅನಿಲಕುಮಾರ ಸಂತಿ ತಿಳಿಸಿದರು.
ಶಿರೂರು ಗ್ರಾಮದಲ್ಲಿ ಆರು ಟ್ರಿಪ್ ಪಾಂಡೆಗಾವ್ ಖೋತವಾಡಿ ಗ್ರಾಮಕ್ಕೆ ಸೇರಿ ಮೂರ್ ಟ್ರಿಪ್ ನೀರು ಪೂರೈಕೆ ಮಾಡ್ತಾ ಇದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ತೋಟಪಟ್ಟಿಗೆ ನೇರ ಮಾತ್ರ ಪೂರೈಕೆ ಮಾಡುತ್ತಿದ್ದೇವೆ. ಗ್ರಾಮದಲ್ಲಿ ಯಾವ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇದೆ ಎಂಬುದನ್ನು ಪರೀಶೀಲನೆ ಮಾಡಿ ಟ್ಯಾಂಕರ್ ಪ್ರಾರಂಭ ಮಾಡುತ್ತೇವೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೂಡ ಯಾವ ಗ್ರಾಮಕ್ಕೆ ನೀರಿನ ಸಮಸ್ಯೆ ಇದೆ ಪರೀಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ.
ಸಮಸ್ಯೆ ಇರುವ ಬಡಾವಣೆ ಜವರು ನೇರವಾಗಿ ಗ್ರಾಮ್ ಪಂಚಾಯ್ತಿಗೆ ಸಂಪರ್ಕಿಸಬೇಕು. ಬರ ಕಾಮಗಾರಿ ಪ್ರಾರಂಭ ಇದ್ದು ಸುಮಾರು 200 ಕೂಲಿಗಾರರಗೆ ಕೆಲಸ ನೀಡಲಾಗಿದೆ ಎಂದು ಸಂತಿ ಹೇಳಿದರು.
ಈ ವೇಳೆ ಗ್ರಾಮ ಲೆಕ್ಕಾಧಿಕಾರಿ ಎಂ ಬಿ ಪಾಟೀಲ್, ವಿನಾಯಕ್ ಗಡದೆ ಇನ್ನಿತರರು ಉಪಸ್ಥಿತರಿದ್ದರು.