ಬ್ಯಾಡ್ಗಿ

ಹಾವೇರಿ ಜಿಲ್ಲಾ ಓ ಬಿ ಸಿ ಮೋರ್ಚಾದ ಉಪಾಧ್ಯಕ್ಷರಾಗಿ ಸುಣಗಾರ ಆಯ್ಕೆ

ಹಾವೇರಿ ಜಿಲ್ಲಾ ಓ ಬಿ ಸಿ ಮೋರ್ಚಾದ ಉಪಾಧ್ಯಕ್ಷರಾಗಿ ಸುಣಗಾರ ಆಯ್ಕೆ

ಬ್ಯಾಡಗಿ 09:  ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಕರ್ತ ಹಾಗೂ ಮಾಜಿ ಅಂಬಿಗರ ಚೌಡಯ್ಯನವರ ನಿಗಮದ ನಿರ್ದೇಶಕ ಜಿತೇಂದ್ರ ಸುಣಗಾರ ಇವರನ್ನು ಇಂದು ಹಾವೇರಿ ಜಿಲ್ಲಾ ಬಿಜೆಪಿ ಓಬಿಸಿ ಮೊರ್ಚಾ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಮತ್ತು ಬಿಜೆಪಿ ಜಿಲ್ಲಾ ಓಬಿಸಿ ಮೊರ್ಚಾ ಕಾರ್ಯದರ್ಶಿಯನ್ನಾಗಿ ನಿಂಗಪ್ಪ ಆಡಿನವರ ಅವರನ್ನು  3 ವರ್ಷಗಳ ಅವಧಿಗೆ ಆಯ್ಕೆ ಮಾಡಿ ಆದೇಶ ಪತ್ರವನ್ನು ಜಿಲ್ಲಾ ಬಿಜೆಪಿ ಓಬಿಸಿ ಮೊರ್ಚಾದ ಅಧ್ಯಕ್ಷ ಬಸವರಾಜ ಕಳಸೂರ. ಭಾಜಪಾ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಹಾಗೂ ಪಕ್ಷದ ಹಿರಿಯ ಮುಖಂಡ ಶಿವರಾಜ್ ಸಜ್ಜನವರು ಇಂದು ಹಾವೇರಿ ಭಾಜಪಾ ಕಛೇರಿಯಲ್ಲಿ ಆದೇಶ ಪತ್ರ ನೀಡಿ ಅಭಿನಂದಿಸಿದರು. .ಈ ವೇಳೆ ನೂತನ ಉಪಾಧ್ಯಕ್ಷ ಜಿತೇಂದ್ರ ಸುಣಗಾರ ಮಾತನಾಡಿ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಅವುಗಳನ್ನು ಅಳವಡಿಸಿಕೊಂಡು ಪಕ್ಷ ಸಂಘಟನೆಯತ್ತ ಹೆಚ್ಚಿನ ಗಮನಹರಿಸಿ ಕಾರ್ಯಕರ್ತರಿಗೆ ಸ್ಪೂರ್ತಿಯಾಗಿ ಶಕ್ತಿಯಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಪಕ್ಷದ ಹಿತ ದೃಷ್ಟಿಯಿಂದ ಸಂಘಟನೆಯನ್ನು ಒಳಿತಿಗಾಗಿ ಪಕ್ಷದ ಸರ್ವತೋಮುಖ ಅಭಿವೃದ್ಧಿಗಾಗಿ ನಾವು ಪ್ರಾಮಾಣಿಕವಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತೆನೆ ಎಂದು ಹೇಳಿದರು. 


ಸುದ್ದಿ ಓದಿ