10ರಿಂದ ಬೇಸಿಗೆ ಲೆದರ್ ಬಾಲ್ ಕ್ರಿಕೆಟ್ ತರಬೇತಿ ಶಿಬಿರ
ಸದುಪಯೋಗ ಪಡೆದುಕ್ಕೊಳ್ಳಲು ಹಿರಿಯ ಆಟಗಾರರ ಕರೆ
ಮಹಾಲಿಂಗಪುರ 06: ಸದೃಢ ಮನಸ್ಸು, ದೈನಂದಿನ ಸಕಾರಾತ್ಮಕ ಚಟುವಟಿಕೆಗಳಿಗೆ ಪ್ರತಿಯೊಬ್ಬನೂ ಉತ್ತಮ ಶಾರೀರ್ಯ ಭಾಗ್ಯವನ್ನು ಕೂಡ ಹೊಂದಿರಲೆಬೇಕಾಗಿರುವುದು ಅನಿವಾರ್ಯ.
ಈ ಕಾರಣದಿಂದ ಮಹಾಲಿಂಗಪುರ ಪಟ್ಟದಿಂದ ಕೂಗಳತೆಯಲ್ಲಿರುವ ಕೆಸರಗೊಪ್ಪ ಗ್ರಾಮದಲ್ಲಿ ಯುವಕ/ತಿಯರಿಗೆ ಎಪ್ರಿಲ್ 10 ರಿಂದ ಬೇಸಿಗೆ ಕಾಲದ ಲೆದರ್ ಬಾಲ್ ಕ್ರಿಕೆಟ್ ತರಬೇತಿ ಶಿಬಿರವನ್ನು ಹಮ್ಮಿಕ್ಕೊಳ್ಳಲಾಗಿದೆ ಎಂದು ರಾಯಚೂರು ವಲಯದ ಆಯ್ಕೆ ಸಮಿತಿ ಸದಸ್ಯ ರವಿ ಬಿದರಿ ಈ ಮೂಲಕ ತಿಳಿಸಿದ್ದಾರೆ.
ಗ್ರಾಮದ ಸರ್ಕಾರಿ ಪ್ರೌಢ ಮತ್ತು ಪದವಿಪೂರ್ವ ಶಾಲೆ ಸಹಯೋಗದಲ್ಲಿ ನೇತಾಜಿ ಕ್ರಿಕೆಟ್ ಕ್ಲಬ್ ಸಮಿತಿ ಹಮ್ಮಿಕೊಂಡಿರುವ ಈ ಶಿಬಿರದಲ್ಲಿ 8 ರಿಂದ 22 ವಯೋಮಿತಿಯೊಳಗಿನ ಯುವಕರು ಭಾಗವಹಿಸುವರು. ಈಗಾಗಲೇ ಉತ್ತಮ ಮೈದಾನದೊಂದಿಗೆ ನೆಟ್ ಇನ್ನಿತರ ಕ್ರಿಕೆಟ್ ಗೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳನ್ನು ಆಯೋಜಕರು ಸಿದ್ಧಗೊಳಿಸಿದ್ದಾರೆ.
ಶಿಬಿರಾರ್ಥಿಗಳಿಗೆ ನುರಿತ ಆಟಗಾರರಿಂದ ತರಬೇತಿ ನೀಡಲಾಗುತ್ತದೆ. ಸ್ಥಳೀಯ ಕ್ರಿಕೆಟ್ ಆಡುವ ಆಸಕ್ತರಿಗೆ ಉತ್ತಮ ಅವಕಾಶವಿದೆ. ಎಲ್ಲೋ ದೂರದ ಪಟ್ಟಣಗಳಿಗೆ ಹೋಗಿ ದುಬಾರಿ ವೆಚ್ಚದಲ್ಲಿ ತರಬೇತಿ ಪಡೆಯಬೇಕಾಗಿತ್ತು.ಇದೊಂದು ಸುವರ್ಣ ಅವಕಾಶ ಲಭಿಸಿದೆ ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯ ಆಟಗಾರ ಬಸವರಾಜ ರಾಯರ್ ಹೇಳುತ್ತಾರೆ.
ವಿಶೇಷ ತರಬೇತುದಾರರಾಗಿ ರಾಜ್ಯ 16/19 ವಯೋಮಿತಿ ಬಿಸಿಸಿಐ ತರಬೇತುದಾರ ಪ್ರಶಾಂತ್ ಹಜೇರಿ, ಸೌಥ್ ಝೇನ್ ಆಟಗಾರ ಷಪೀಕ್ ಅತ್ತಾರ ಮತ್ತು ಹಿರಿಯ ಆಟಗಾರ ಶಿವಶಂಕರ ಗುಜ್ಜರ ಉಪಸ್ಥಿತರಿರುವರು.
ಹೆಚ್ಚಿನ ಮಾಹಿತಿಗಾಗಿ ರವಿಂದ್ರ ಬಿದರಿ -9880411777, ಮಹಾದೇವ ಕಡಬಲ್ಲವರ-9845491516, ಸದಾ ಕುರಿ- 8123652800 ಸಂಪರ್ಕಿಸಲು ಕಾರ್ಯದರ್ಶಿ ಶ್ರೀಕಾಂತ್ ಮಾಗಿ ತಿಳಿಸಿದ್ದಾರೆ.