ಕಬ್ಬು ಬೆಲೆಯ ಕಿಚ್ಚು : ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಧರಣಿ ಕುಳಿತ ರೈತರು
ಬೆಳಗಾವಿ : ಜಿಲ್ಲೆಯಲ್ಲಿ ಸಕ್ಕರೆ ಕಾರಖಾನೆಗಳು ಕಬ್ಬು ಪೂರೈಸಿದ ರೈತರಿಗೆ 3500 ರೂ. ಬೆಲೆ ನಿಗದಿ ಮಾಡದಿರುವದನ್ನು ಖಂಡಿಸಿ ರೈತರ ಕಿಚ್ವು ಹೆಚ್ಚಾಗಿದ್ದು, ಶುಕ್ರವಾರ ಮಧ್ಯಾಹ್ನ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿಯ ಟೋಲ್ ನಾಕಾ ಬಳಿಯ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆಹಿಡಿಯುವ ಮೂಲಕ ಅಹೋರಾತ್ರಿ ಧರಣಿಯನ್ನು ಆರಂಭಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಹತ್ತರಗಿಯ ಟೋಲ್ ನಾಕಾ ಬಳಿಯಲ್ಲಿ ಜಮಾವಣೆಗೊಂಡ ರೈತರು ಮೊದಲು ಸರ್ವೀಸ್ ರಸ್ತೆಗಳನ್ನು ಬಂದು ಮಾಡಿದರು. ಇದರಿಂದ ರೈತ ಮನವೊಲಿಸಲು ಯಮಕನಮರಡಿ ಸಿಪಿಐ ಜಾವೀದ್ ಮುಶಾಪೂರೆ ಹಾಗೂ ಸಿಬ್ಬಂದಿಗಳು ಪ್ರಯತ್ನ ಮಾಡಿದರು.
ಈ ಸಂದರ್ಭದಲ್ಲಿ ಪೊಲೀಸರು ಮತ್ತು ರೈತರ ನಡುವೆ ಸ್ವಲ್ಪ ಹೊತ್ತು ವಾಗ್ವಾದ ನಡೆಯಿತು. ಬಳಿಕ ಪೊಲೀಸರು ರೈತರನ್ನು ಅಲ್ಲಿ ಕಳಿಸಿದರು ರೈತರು ಮಾತ್ರ ಸ್ವಲ್ಪ ದೂರದಲ್ಲಿ ಹೋಗಿ ಮತ್ತೆ ರಾಷ್ಟ್ರೀಯ ಹೆದ್ದಾರಿ ತಡೆಯುವ ಮೂಲಕ ಧರಣಿಯನ್ನು ಪ್ರಾರಂಭಿಸಿದರು.
ಈಗ ಸದ್ಯ ರಾಷ್ಟ್ರೀಯ ಹೆದ್ದಾರಿ ಕಳೆದ ಒಂದು ಒಂದು ವರೆ ಗಂಟೆಯಿಂದ ಬಂದ್ ಆಗಿದ್ದು, ರೈತರು ಸಾವಿರಾರು ಸಂಖ್ಯೆಯಲ್ಲಿ ತಂಡ ತಂಡವಾಗಿ ಹತ್ತರಗಿಯ ಟೋಲ್ ನಾಕಾ ಬಳಿ ಆಗಮಿಸುತ್ತಿದ್ದಾರೆ.