ಗಡಿಭಾಗದ ಕಬ್ಬು ಬೆಳಗಾರರ ಚಿತ್ತ ಈಗ ಮಹಾರಾಷ್ಟ್ರದ ಕಾರಖಾನೆಗಳತ್ತ : ಮಹಾರಾಷ್ಟ್ರದಲ್ಲಿ ಕಬ್ಬು ದರಕ್ಕೆ ಪೈಪೋಟಿ

ಗಡಿಭಾಗದ ಕಬ್ಬು ಬೆಳಗಾರರ ಚಿತ್ತ ಈಗ ಮಹಾರಾಷ್ಟ್ರದ ಕಾರಖಾನೆಗಳತ್ತ : ಮಹಾರಾಷ್ಟ್ರದಲ್ಲಿ ಕಬ್ಬು ದರಕ್ಕೆ ಪೈಪೋಟಿ
Sugarcane growers on the border are now turning their attention to factories in Maharashtra: Competi

ಪಾರೇಶ ಭೋಸಲೆ  

ಬೆಳಗಾವಿ : ಸಕ್ಕರೆ ಜಿಲ್ಲೆ ಎಂದು ಕರೆಯಿಸಿಕೊಳ್ಳುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ರೈತರು ಬೆಳೆದ ಕಬ್ಬಿನ ಬೆಳೆಗೆ ಯೋಗ್ಯ ಬೆಲೆ ಸಿಗದೆ ಕಂಗಾಲಾಗಿದ್ದು, ಕಬ್ಬು ಬೆಳೆಗಾರರಿಗೆ ಹೆಚ್ವಿನ ದರ ನೀಡುತ್ತಿರುವ ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳತ್ತ ಈಗ ರೈತರು ಮುಖ ಮಾಡಿದ್ದಾರೆ. ಅತ್ತ ನೆರೆಯ ಮಹಾರಾಷ್ಟ್ರದಲ್ಲಿ ರೈತರ ಕಬ್ಬಿನ ಬೆಳೆಗೆ ದರ ನೀಡುವಲ್ಲಿ ಸಕ್ಕರೆ ಕಾರಖಾನೆಗಳು ಪೈಪೋಟಿ ನಡೆಸುತ್ತಿದ್ದರೆ, ಇತ್ತ ಬೆಳಗಾವಿ ಜಿಲ್ಲೆಯಲ್ಲಿ 3500 ದರ ನೀಡಲು ಸಕ್ಕರೆ ಕಾರಖಾನೆಗಳು ಹಿಂದೇಟು ಹಾಕುತ್ತಿರುವದರಿಂದ ಗಡಿ ಭಾಗದಲ್ಲಿನ ರೈತರ ಚಿತ್ತ ಈಗ ಮಹಾರಾಷ್ಟ್ರದತ್ತ ನೆಟ್ಟಿದೆ. 

     ಹೌದು ಒದುಗರೇ.... ಉತ್ತರ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚಾಗಿ ಕಬ್ಬು ಬೆಳೆಯನ್ನು ರೈತರು ಬೆಳೆಯುತ್ತಿದ್ದು, ಈ ಭಾಗದ ಸಕ್ಕರೆ ಕಾರ್ಖಾನೆಗಳು ರೈತರು ಬೆಳೆದ ಕಬ್ಬಿಗೆ ಯೋಗ್ಯ ದರ ನೀಡುತ್ತಿಲ್ಲ ಎಂದು ದೂರಿ ಒಂದು ವಾರಗಳ ಕಾಲ ಬೆಳಗಾವಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಧರಣಿ, ರಸ್ತೆ ತಡೆದು ಹೋರಾಟ ನಡೆಸಿದ್ದರು.

    ಅಲ್ಲದೆ ತಮ್ಮ ಕಬ್ಬಿನ ಬೆಳೆಗೆ ಸಕ್ಕರೆ ಕಾರ್ಖಾನೆಗಳು ಬೆಂಬಲ ಬೆಲೆ ನೀಡುತ್ತಿಲ್ಲ ಎಂದು ರಸ್ತೆಗೆ ಇಳಿದು ಸರಕಾರದ ವಿರುದ್ದ ಹಾಗೂ ಕಾರಖಾನೆಗಳ ವಿರುದ್ದ ತಮ್ಮ ಅಸಮಾಧಾನ ಹೊರ ಹಾಕಿದ್ದರು. ಇವೆಲ್ಲ ಬೆಳವಣಿಗೆಗಳಿಂದ ಸರಕಾರ ಪೇಚಿಗೆ ಸಿಲುಕಿಕೊಂಡಿತ್ತು. ಸರಕಾರ ರೈತರು ಬಿಸುವ ದೊಣ್ಷೆಯಿಂದ ತಪ್ಪಿಸಿಕೊಳ್ಳಲು ಸಕ್ಕರೆ ಕಾರ್ಖಾನೆಗಳ ಮಾಲಿಕರ ಹಾಗೂ ರೈತರ ಪ್ರತ್ಯೇಕ ಸಭೆ ಕರೆದು ರೈತರ ಕಬ್ಬಿನ ಬೆಳೆಗೆ 3300 ರೂ. ದರ ನೀಡುವ ನಿರ್ಧಾರ ಕೈಗೊಂಡಿತು.  

   ಸರಕಾರದ ಈ ಕ್ರಮಕ್ಕೆ ಕೆಲ ರೈತರು ವಿಜಯೋತ್ಸವ ಆಚರಣೆ ಮಾಡಿದ್ದರೆ ಇನ್ನೂ ಕೆಲ ಕಬ್ಬು ಬೆಳೆಗಾರರು ಕಬ್ಬಿನ ದರ ಕಡಿಮೆಯಾಗಿದೆ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದರು. ಮಹಾರಾಷ್ಟ್ರದ ಬಿದರಿ ಸಕ್ಕರೆ ಕಾರಖಾನೆಯು 3614 ರೂ ಪ್ರತಿ ಮೇ. ಟನ್ ಕಬ್ಬಿಗೆ ದರ ಘೋಷಣೆ ಮಾಡಿದರೇ, ದಾಲ್ಮೀಯಾ ಭಾರತ ಶುಗರ್ ಇ. ಸಕ್ಕರೆ ಕಾರಖಾನೆಯು 3525 ರೂ ಪ್ರತಿ ಟನ್ ಕಬ್ಬಿನ ದರ ನಿಗದಿ ಮಾಡಿದೆ. ಭೋಗಾವತಿ ಸಕ್ಕರೆ ಕಾರಖಾನೆಯು ಸದ್ಯ ಪ್ರತಿ ಮೇ. ಟನ್ ಕಬ್ಬಿಗೆ 3653 ರೂ. ದರ ನೀಡುವದಾಗಿ ಘೊಷಣೆ ಮಾಡಿದೆ. ಮಹಾರಾಷ್ಟ್ರದ ಸಕ್ಕರೆ ಕಾರಖಾನೆಗಳು ಕಬ್ಬಿಗೆ ದರ ನೀಡುವದರಲ್ಲಿ ಕೂಡಾ ಸ್ಪರ್ಧೆಯಲ್ಲಿ ತೋಡಗಿವೆ. ಆದರೆ ಇವೆಲ್ಲಕ್ಕೂ ಕಬ್ಬು ರಿಕವರಿ ಮೇಲೆ ದರ ಆಕರಣೆ ಆಗುತ್ತದೆ ಎನ್ನುವದು ಇಲ್ಲಿ ರೈತರಿಗೆ ಕಂಟಕವಾಗಿ ಪರಿಣಮಿಸಿದೆ. 

   ಮರಾಷ್ಟ್ರದಲ್ಲಿ ಪ್ರತಿ ಮೇ. ಟನ್ ಕಬ್ಬಿನ ಬೆಳೆಗೆ ಕಾರಖಾನೆಗಳು 3653ರ ವರೆಗೆ ದರ ನೀಡುತ್ತಿದ್ದರೂ ಮಹಾರಾಷ್ಟ್ರದಲ್ಲಿನ ರೈತರು ಮಾತ್ರ ತಮ್ಮ ಪ್ರತಿ ಮೇ. ಟನ್ ಕಬ್ಬಿನ ಬೆಳೆಗೆ 3700 ದರ ನೀಡುವಂತೆ ಅಲ್ಲಿನ ರೈತರು ಒತ್ತಾಯಿಸುತ್ತಿದ್ದಾರೆ.

     ಇದರಿಂದ ಬೆಳಗಾವಿ ಜಿಲ್ಲೆಯಲ್ಲಿ ಯೋಗ್ಯ ಬೆಲೆ ಸಿಗದ ಹಿನ್ನೆಯಲ್ಲಿ ಬೆಳಗಾವಿ ಜಿಲ್ಲೆಯ ಕೆಲ ರೈತರು ಕಬ್ಬಿನ ದರ ಹೆಚ್ಚಿಗೆ ನೀಡುತ್ತಿರುವ ಮಹಾರಾಷ್ಟ್ರದ ಸಕ್ಕರೆ ಕಾರಖಾನೆಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಮತ್ತೆ ರೈತರ ಕಬ್ಬು ದರ ನಿಗದಿಯ ಹೋರಾಟವು ಮುನ್ನೇಲೆಗೆ ಬರುವ ಲಕ್ಷಣಗಳು ಕಂಡು ಬರುತ್ತಿವೆ. 

ಮಹಾರಾಷ್ಟ್ರದಲ್ಲಿ ರಿಕವರಿ ಹೆಚ್ವಿಗೆ ಇರುವುದರಿಂದ ಬೆಲೆ ಜಾಸ್ತಿ : ಪೂಜೇರಿ

   ಮಹಾರಾಷ್ಟ್ರದಲ್ಲಿ ರೈತರು ಬೆಳೆಯುವ ಕಬ್ಬಿಗೆ ಪ್ರತಿಶತ 13 ರಿಕವರಿ ಬರುವದರಿಂದ ಕಬ್ಬಿಗೆ ಹೆಚ್ಚಿಗೆ ಬೆಲೆ ನೀಡಲು ಸಾದ್ಯವಾಗುತ್ತದೆ. ಅಲ್ಲದೆ ಮಹಾರಾಷ್ಟ್ರದಲ್ಲಿ 14 ತಿಂಗಳು ಕಾಲ ಕಬ್ಬು ಪೂರೈಕೆ ಮಾಡಲಾಗುತ್ತದೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಶತ 11 ರಿಕವರಿ ಬರುವದರಿಂದ ಇಲ್ಲಿ ಕಾರಖಾನೆಗಳು ಹೆಚ್ಚಿಗೆ ಬೆಲೆ ನೀಡಲು ಮುಂದೆ ಬರತಾ ಇಲ್ಲ. ಅಲ್ಲದೆ ಬೆಳಗಾವಿ ಜಿಲ್ಲೆಯಲ್ಲಿ 8 ತಿಂಗಳ ವರೆಗೆ ಕಬ್ಬು ಪೊರೈಕೆ ಮಾಡಲಾಗುತ್ತದೆ.  ಇದರಿಂದ ಮಹಾರಾಷ್ಟç ಕಾರಖಾನೆಗಳತ್ತ ರೈತರು ಮುಖ ಮಾಡುವದು ಸಹಜ ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ಮುಖಂಡ ಚೂನಪ್ಪ ಪೂಜಾರಿ ಹೇಳಿದ್ದಾರೆ


ಸುದ್ದಿ ಓದಿ