ಬಳ್ಳಾರಿ

ಸುಕೋ ಬ್ಯಾಂಕ್ ರಾಷ್ಟ್ರಮಟ್ಟಕ್ಕೆ ಬೆಳೆಯಲಿದೆ: ಮೋಹಿತ್ ಮಸ್ಕಿ

ಸುಕೋ ಬ್ಯಾಂಕ್ ರಾಷ್ಟ್ರಮಟ್ಟಕ್ಕೆ ಬೆಳೆಯಲಿದೆ: ಮೋಹಿತ್ ಮಸ್ಕಿ

ಬಳ್ಳಾರಿ 13: ಸುಕೋ ಬ್ಯಾಂಕ್ ಕಲ್ಯಾಣ ಕರ್ನಾಟಕ ಭಾಗದಿಂದ ರಾಷ್ಟ್ರಮಟ್ಟಕ್ಕೆ ತನ್ನ ವ್ಯವಹಾರವನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ಏಕೈಕ ಬ್ಯಾಂಕ್ ಎಂದು ಸುಕೋ ಬ್ಯಾಂಕ್‌ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ತಿಳಿಸಿದ್ದಾರೆ. 

ಜ್ಞಾನಾಮೃತ ಪಿ.ಯು. ಕಾಲೇಜಿನಲ್ಲಿ ಸುಕೋ ಬ್ಯಾಂಕ್ ತನ್ನ ಸಿಬ್ಬಂದಿಗಳಿಗಾಗಿ ಏರಿ​‍್ಡಸಿರುವ ‘ಎರೆಡು ದಿನಗಳ ತರಬೇತಿ' ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಅವರು ಶನಿವಾರ ಮಾತನಾಡಿದರು. ಸುಕೋ ಬ್ಯಾಂಕ್ ಪ್ರಸ್ತುತ 28 ಶಾಖೆಗಳನ್ನು ಹೊಂದಿದೆ. ಕಾರಟಗಿಯ ಶ್ರೀ ಶರಣಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್‌ನ ವೀಲೀನ ಕಾರ್ಯ ಶೀಘ್ರದಲ್ಲಿ ಪೂರ್ಣಗೊಂಡು 29 ಶಾಖೆಗಳನ್ನು ಹೊಂದಲಿದೆ. ಸಿಬ್ಬಂದಿಯ ಪಾಲ್ಗೊಳ್ಳುವಿಕೆ, ಸ್ವ - ಆಸಕ್ತಿ ಮತ್ತು ಗ್ರಾಹಕಸ್ನೇಹಿ ಚಟುವಟಿಕೆಗಳಿಂದ ಸುಕೋ ಬ್ಯಾಂಕ್ ಯಶಸ್ಸನ್ನು ಸಾಧಿಸುತ್ತಿದೆ ಎಂದರು.  

ಸುಕೋ ಬ್ಯಾಂಕ್‌ನ ಸಂಸ್ಥಾಪಕ ಅಧ್ಯಕ್ಷ ಮನೋಹರ ಮಸ್ಕಿ ಅವರು ಕಾರ್ಯಾಗಾರ ಉದ್ಘಾಟಿಸಿ, ಪ್ರತಿಯೊಬ್ಬರಲ್ಲಿರುವ ಸಾಮರ್ಥ್ಯ, ಅಂತಃಶಕ್ತಿ, ಜ್ಞಾನವನ್ನು ಹೆಚ್ಚಿಸಿ, ಕರ್ತವ್ಯ ಪಾಲನೆಯ ಜವಾಬ್ದಾರಿ, ಬದ್ಧತೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರಗಳು ಪೂರಕವಾಗಿವೆ. ಪ್ರತಿಯೊಬ್ಬರೂ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.  

ಜ್ಞಾನಾಮೃತ ಪಿ.ಯು. ಕಾಲೇಜಿನ ಪ್ರಾಂಶುಪಾಲ ಯಶವಂತ ಶೆಟ್ಟಿ ಅವರು ಮಾತನಾಡಿ, ಸುಕೋ ಬ್ಯಾಂಕ್ ಗ್ರಾಹಕಸ್ನೇಹಿ ಸೇವೆಯನ್ನು ನೀಡುವಲ್ಲಿ ಸದಾ ಮುಂದಿದೆ. ಬ್ಯಾಂಕ್‌ನ ಯಶಸ್ಸು ಸಿಬ್ಬಂದಿಯ ಸೇವಾಮನೋಭಾವ, ಅಭಿವೃದ್ಧಿಪರ ಚಿಂತನೆ, ಪಾಲ್ಗೊಳ್ಳುವಿಕೆಗಳನ್ನು ಅವಲಂಭಿಸಿದೆ ಎಂದರು. 

ಸುಕೋ ಬ್ಯಾಂಕ್‌ನ ಆಡಳಿತ ಮಂಡಲಿಯ ಕಾರ್ಯದರ್ಶಿ ವೆಂಕಟೇಶರಾವ್ ಅವರು, ಪ್ರಾಸ್ತಾವಿಕವಾಗಿ ಮಾತನಾಡಿ, ‘ಕೋವಿಡ್‌-19'ರ ನಂತರ ಎಲ್ಲಾ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಮರಳುತ್ತಿವೆ. ಕಾರಣ ಬ್ಯಾಂಕ್ ಹಮ್ಮಿಕೊಂಡಿರುವ ಎರೆಡು ದಿನಗಳ ತರಬೇತಿ ಕಾರ್ಯಾಗಾರವು ಸಿಬ್ಬಂದಿಗೆ ಜ್ಞಾನಾರ್ಜನೆಯನ್ನು ಹೆಚ್ಚಿಸಲಿದೆ ಎಂದು ಹೇಳಿದರು. 


ಸುದ್ದಿ ಓದಿ