ಹಗರಿಬೊಮ್ಮನಹಳ್ಳಿ

ಯಶಸ್ವಿ ಪೋಲಿಸ ಕಾರ್ಯಾಚರಣೆ: ಮಗುವಿನ ಅಪಹರಿಸಿದ್ದವರ ಬಂಧನ

ಯಶಸ್ವಿ ಪೋಲಿಸ ಕಾರ್ಯಾಚರಣೆ: ಮಗುವಿನ ಅಪಹರಿಸಿದ್ದವರ ಬಂಧನ

ಹಗರಿಬೊಮ್ಮನಹಳ್ಳಿ 05: ಹಗರಿಬೊಮ್ಮನಹಳ್ಳಿ ನಿವಾಸಿ ನಿವೃತ್ತ ಪಿಡಿಒ ಈ. ಕೃಷ್ಣಮೂರ್ತಿರವರ ಮೊಮ್ಮಗನಾದ 5ವರ್ಷದ ಅದ್ವಿಕ್‌ನನ್ನು ಅಪಹರಿಸಿ 15ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಅಪಹರಣಕಾರರನ್ನು ವಿಜಯನಗರ ಜಿಲ್ಲಾ ಎಸ್‌ಪಿ ಡಾ. ಕೆ.ಅರುಣ್ ಮಾರ್ಗದರ್ಶನದಲ್ಲಿ ಹಗರಿಬೊಮ್ಮನಹಳ್ಳಿ ಪಟ್ಟಣದ ಪೋಲಿಸರು ಕೇವಲ ಮೂರು ಗಂಟೆಯೊಳಗೆ ಮಗುವನ್ನು ರಕ್ಷಿಸಿ, 24ಗಂಟೆಗಳಲ್ಲಿ ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಲೋಕೋಪಯೋಗಿ ಇಲಾಖೆಯ ಬಳಿಯ ಮನೆ ಮುಂದೆ ಆಟವಾಡುತ್ತಿರುವ 5ವರ್ಷದ ಬಾಲಕ ಅದ್ವಿಕ್ ನನ್ನು ದುಷ್ಕರ್ಮಿಗಳು ಹಣದಾಸೆಗೆ ಅಪಹರಿಸಿದ ಘಟನೆ ಕಳೆದ ಭಾನುವಾರ ನಡೆದಿದೆ, ಅಪಹರಣಕಾರರು ಬಾಲಕನ ತಂದೆಗೆ ದೂರವಾಣಿ ಕರೆ ಮಾಡಿ ತ್ವರಿತವಾಗಿ 15ಲಕ್ಷ ನೀಡುವಂತೆ ತಿಳಿಸಿದ್ದಾರೆ. ಆತಂಕಗೊಂಡ ಪೋಷಕರು ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೋಷಕರು ನೀಡಿದ ಮಾತಿಯನ್ನು ಆಧರಿಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ತಕ್ಷಣ ಪೋಲಿಸರು ಕಾರ್ಯಪ್ರವೃತ್ತರಾಗಿ ವಿಜಯನಗರ ಜಿಲ್ಲಾ ಎಸ್‌ಪಿ ಡಾ. ಕೆ.ಅರುಣ್ ಮಾರ್ಗದರ್ಶನದಲ್ಲಿ ಕೂಡ್ಲಗಿ ಡಿಎಸ್‌ವೈಪಿ ಜಿ.ಹರೀಷ್ ಹೆಚ್,ಬಿ.ಹಳ್ಳಿ ವೃತ್ತ ನೀರೀಕ್ಷಕ ಟಿ.ಮಂಜಣ್ಣ, ಪಿಎಸ್‌ಐ ಪಿ.ಸರಳ ನೇತೃತ್ವದ ಒಂದು ತಂಡ, ಕೂಡ್ಲಗಿ ಸಿಪಿಐ ವಸಂತ ಅಸೂದೇ, ತಂಬ್ರಹಳ್ಳಿ ಪಿಎಸೈ ನಾರಾಯಣ ನೇತೃತ್ವದ ಎರಡನೇ ತಂಡ ಮತ್ತು ಚಿತವಾಡ್ಗಿ ಪಿಐ ಜಯಪ್ರಕಾಶ್ ಕೆ, ಮರಿಯಮ್ಮನಹಳ್ಳಿ ಪಿಎಸೈಐ ಹನುಮಂತಪ್ಪ, ಜಾವೇದ್, ರಾಘವೇಂದ್ರ ನೇತೃತ್ವದ 3 ವಿಶೇಷ ತಂಡಗಳನ್ನು ರಚಿಸಿ ಅಪಹರಣಕಾರರ ಹಾಗೂ ಬಾಲಕನ ಪತ್ತೆ ಕಾರ್ಯಕ್ಕೆ ಇಳಿದಿದ್ದರು, ಬಾಲಕನ್ನು ಮೋರಗೇರೆ ರಸ್ತೆಯ ನಿರ್ಜನ ಪ್ರದೇಶದ ಕಗ್ಗತ್ತಲಲ್ಲಿ ಅಪಹರಣಕಾರರಿದಂದ ಮಗುವನ್ನು ರಕ್ಷಿಸುವಲ್ಲಿ ಪೋಲೀಸರು ಯಶಸ್ವಿಯಾದರು.  

ಅಪಹರಣಕಾರರು ಎರೆಡು ಬೈಕ್‌ಗಳನ್ನು ಬಿಟ್ಟು ಪರಾರಿಯಾಗಿದ್ದರು, ಮಗುವನ್ನು ಪೊಷಕರ ಸುಪರ್ದಿಗೆ ಒಪ್ಪಿಸಿ ತಪ್ಪಿಸಿಕೊಂಡ ಅಪಹರಣಕಾರರ ಪತ್ತೆ ಕಾರ್ಯ ಕುರಿತು ತನಿಖೆ ಕೈಗೊಂಡು 24ಗಂಟೆಗಳಲ್ಲಿ ಅಪರಹರಣಕಾರರನ್ನು ಬಂಧಿಸಲಾಗಿದೆ. 

ಹಗರಿಬೊಮ್ಮನಹಳ್ಳಿ ನಿವಾಸಿ ಅಲ್ಲಭಕ್ಷ್‌(25), ಹಲಗಾಪುರ ಗ್ರಾಮದ ಚನ್ನಬಸವ (26),ಕೊಟ್ರೇಶ(23), ಕೇಶವರಯನ ಬಂಡಿ ಗ್ರಾಮದ ರಮೇಶ (22), ಬಸವರಾಜ(22),  ಹಂಪಾಪಟ್ಟಣ ಗ್ರಾಮದ ರವಿ(38) ಎಂಬವವರನ್ನು ಬಂಧಿಸಿ ವಿಚಾರಣೆಗೊಳಿಪಡಿಸಿದಾಗ ಅಪಹರಣ ಕೃತ್ಯವನ್ನು ಒಪ್ಪಿಕೊಂಡಿದ್ದು ಕೃತ್ಯಕ್ಕೆ ಬಳಸಿದ 7ಮೊಬೈಲ್ ಸೇರಿದಂತೆ ಎರೆಡು ದ್ವಿಚಕ್ರವಾಹನ ವಶಪಡಿಸಿಕೊಂಡು ಅಪಹರಣ ಪ್ರಕರಣ ದಾಖಲಿಸಿಕೊಂಡು ಐವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ, ಪೋಲೀಸರ ಕಾರ್ಯವನ್ನು ವಿಜಯನಗರ ಜಿಲ್ಲಾ ಪೋಲೀಸ್ ಎಸ್‌.ಪಿ. ಡಾ. ಕೆ.ಆರುಣ್ ಶ್ಲಾಘಿಸಿದ್ದಾರೆ. 


ಸುದ್ದಿ ಓದಿ