ಕೋವಿಡ್-19 ಬೃಹತ್ ಲಸಿಕಾ ಅಭಿಯಾನದ ಯಶಸ್ಸು
ಸಿರುಗುಪ್ಪ 25: ಒಮಿಕ್ರೋನ್ ರೂಪಾಂತರಿ ಭೀತಿಯ ನಡುವೆಯೇ ರಾಜ್ಯಾದ್ಯಂತ ಕೋವಿಡ್-19 ಕೊರೊನಾ ವೈರಸ್ನ ಲಸಿಕೆ ನೀಡುವ ಕಾರ್ಯಯಶಸ್ವಿಯಾಗಿ ಸಾಗಿರುವದು ಹರ್ಷದಾಯಕ ಸುದ್ದಿ ಎಂದು ಭಾರತ ಸರಕಾರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಜನಾಭಿಪ್ರಾಯದ ಮುಖಂಡರು ಸಾಮಾಜಿಕ ಕಾರ್ಯಕರ್ತ ಎ. ಅಬ್ದುಲ್ ನಬಿ ಹೇಳಿದರು.
ಗ್ರಾಮೀಣ ಭಾಗದಲ್ಲಿ ಮನೆ ಮನೆ ತೆರಳಿ ಮತ್ತು ಕೃಷಿ ಚಟುವಟಿಕೆ ನಡೆಯುವ ನೆಲೆಗಳಿಗೆ ಹೋಗಿ ಆರೋಗ್ಯ ಕಾರ್ಯಕರ್ತರು ಲಸಿಕೆ ನೀಡುತ್ತಿರುವದು ಜನ ಕೂಡ ಅದನ್ನು ಸ್ವೀಕರಿಸುತ್ತಿರುವುದು ಈ ಶತಮಾನದ ಬೃಹತ್ ಲಸಿಕಾ ಅಭಿಯಾನದ ಯಶಸ್ಸನ್ನು ಸಾರುತ್ತದೆ ಎಂದು ಸಾಕ್ಷರತಾ ಅಬ್ದುಲ್ ನಬಿ ತಿಳಿಸಿದರು. ಸಮಾಜದ ಗಣ್ಯ ಮುಖಂಡ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ, ಸೈಯದ್ ಮೊಹಿಯುದ್ದೀನ್ ಖಾದ್ರಿ, ಹಂಡಿ ಹಾಜಿ ಹುಸೇನ್ ಬಾಷಾ, ಹಂಡಿ ಹಾಶಿಮ್, ಡಾ ಮೊಹಮ್ಮದ್ ಅಲಿ, ಬಿ. ಕೆ .ಅಲ್ಲಾಭಕ್ಷಿ ,ಮೊಹಮ್ಮದ್ ಖಲೀಲ್, ಹಾಜಿ ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ರಫಿ, ಮೊಹಮ್ಮದ್ ನೌಶಾದ್ ಅಲಿ, ಖತೀಬ್ ಜಹಿರುದ್ದೀನ್ ಬಾಬು, ಖತೀಬ್ ಅಬುಲ್ ಹಸನ್ ಅವರು ಮಾತನಾಡುತ್ತಾ ಎರಡನೇ ಡೋಸ್ ಕರೋನಾ ವೈರಸ್ ಲಸಿಕೆ ವಿತರಣೆಯಲ್ಲಿ ಆರೋಗ್ಯ ಸೇವೆ ಸುಧಾರಣೆಯ ಸಾಧನೆ ಮಾಡುತ್ತಿರುವುದು ನಿದರ್ಶನದಂತಿದೆ. ಜಿಲ್ಲಾಧಿಕಾರಿಗಳು ತಾಲ್ಲೂಕು ಆಡಳಿತ ಆರೋಗ್ಯ ಕಾರ್ಯಕರ್ತರು ಅವರ ಶ್ರಮ ಶ್ಲಾಘನೀಯ ರಾಜ್ಯದೆಲ್ಲೆಡೆ ಎರಡನೇ ಡೋಸ್ ಕೋವಿಡ್-19 ಈ ಲಸಿಕೆ ವಿತರಣೆ ಪೂರ್ಣ ಗೊಳಿಸಲು ಪ್ರತಿಯೊಬ್ಬರು ಶ್ರಮ ವಹಿಸೋಣ ಎಂದರು.