ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಸಾಧ್ಯ: ಪ್ರಭು ಶ್ರೀ
ಮಹಾಲಿಂಗಪುರ 02 : ಇಂದಿನ ಆಧುನಿಕ ಯುಗದಲ್ಲಿ ಪ್ರಯತ್ನಶಿಲರಿಗೆ ಗೆಲುವು ಯಾವತ್ತಿಗೂ ಕಟ್ಟಿಟ್ಟ ಬುತ್ತಿ ಇದ್ದಂತೆ, ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಪ್ರತಿಹಂತದಲ್ಲು ಗೆಲುವು ಸಾಧ್ಯವೆಂದು ಸ್ಥಳಿಯ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ಹೇಳಿದರು.
ಚಿಮ್ಮಡಗ್ರಾಮದ ಪಿಪಿ ಮಾಳಿಗಡ್ಡಿ ಮಠದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 'ಚಿನ್ನರ ಹೊನ್ನ ಕಿರಣೋತ್ಸವ' ಹಾಗೂ ಸನ್ಮಾನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲಿ ಸಂಸ್ಕಾರ, ಪ್ರಾಮಾಣಿಕತೆ, ವಿನಯತೆ ಪ್ರತಿಯೋಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕಲಿಸಿದ ಗುರುವ್ರಂದಕ್ಕೆ, ಹಾಗೂ ಶಾಲೆಗೆ ಕೀರ್ತಿ ತರಬೇಕು, ಈ ಶಾಲೆಯಲ್ಲಿ ವಿದ್ಯಾರ್ಜನೆ ಮಾಡಿದ ಹಲವಾರು ವಿದ್ಯಾರ್ಥಿಗಳು ಸರಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಿ ಶಾಲೆಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದು ಶ್ಲಾಘನೀಯವೆಂದರು.
ಶಾಲೆಯ ಮುಖ್ಯ ಗುರುಮಾತೆ ಎಸ್.ಡಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ರಾಮಣ್ಣ ಮುಗಳಖೋಡ, ಅಣ್ಣಪ್ಪಗೌಡ ಪಾಟೀಲ, ರಾಮಪ್ಪ ಬಗನಾಳ, ರಾಛಯ್ಯ ಮಠಪತಿ, ಉಮೇಶ ಪುಜಾರಿ, ಇಲಾಹಿ ಜಮಖಂಡಿ, ಮಹಾಲಿಂಗ ಬಳಗಾರ, ಬಾಳಪ್ಪ ಗಡೆಪ್ಪನವರ, ಪೀರಸಾಬ ನದಾಫ ವೇದಿಕೆಯಲ್ಲಿದ್ದರು,
ಇದೇ ಸಂಧರ್ಬದಲ್ಲಿ ಸಾಲೆಯಲ್ಲಿ ರಾ್ಯಂಕ್ ಪಡೆದ ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರ ಹಾಗೂ ಪಾರಿತೋಷಕ ನೀಡಿ ಗೌರವಿಸಲಾಯಿತು, ಹಾಗೂ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗನ್ನು ಹಮ್ಮಿಕೊಳ್ಳಲಾಗಿತ್ತು.