ಸತತ ಪರಿಶ್ರಮದಿಂದ ಯಶಸ್ಸು ಶತಸಿದ್ಧ : ಡಾ. ಸೊರಗಾಂವಿ
ಮಹಾಲಿಂಗಪುರ : ಮಹಾಲಿಂಗಪುರದ ಸ್ಥಳೀಯ ಬಸವಾನಂದ ಶಾಲೆಯಲ್ಲಿ ೨೦೨೨-೨೩ನೇ ಸಾಲಿನ ೭ ಮತ್ತು ೧೦ನೇ ತರಗತಿಯ ಮಕ್ಕಳ ಬೀಳ್ಕೊಡುವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು.
ಎಸ್ ಕೆ ಗಿಂಡೆ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆ ನಡೆದು ಬಂದ ದಾರಿ ಹಾಗೂ ವಿದ್ಯಾರ್ಥಿಗಳ ಸಾಧನೆಯ ಕುರಿತು ವಿವರವಾಗಿ ವರದಿ ವಾಚನ ಮಾಡಿದರು. ಸಂಸ್ಥೆಯ ಸದಸ್ಯ ಡಾ. ಬಿ ಡಿ ಸೋರಗಾಂವಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ ಮಕ್ಕಳು ಮೊಬೈಲ್ ಗೀಳನ್ನು ಬಿಟ್ಟು ಓದಿನ ಕಡೆ ಹೆಚ್ಚು ಗಮನ ಹರಿಸಿ ಅಭ್ಯಾಸ ಮಾಡಿದರೆ ಯಶಸ್ಸು ಶತಸಿದ್ದ ಎಂದು ಕಿವಿ ಮಾತನ್ನು ವಿದ್ಯಾರ್ಥಿಗಳಿಗೆ ಹೇಳಿದರು. ಕಾರ್ಯದರ್ಶಿ ಎಮ್ ಎಮ್ ಕಟಗಿ ಮಾತನಾಡಿ ಶ್ರೀ ಬಸವಾನಂದ ಮಹಾಸ್ವಾಮಿಗಳ ಹೆಸರಿನಿಂದ ಪ್ರಾರಂಭವಾದ ನಮ್ಮ ಶಾಲೆಯು ಹಲವಾರು ವರ್ಷಗಳಿಂದ ಮಹಾಲಿಂಗಪುರದಲ್ಲಿ ಉನ್ನತ ಶಿಕ್ಷಣವನ್ನು ನೀಡುತ್ತಾ ಬಂದಿದ್ದು ಅದಕ್ಕೆ ಮಹಾತ್ಮರ ಆಶೀರ್ವಾದ ಮತ್ತು ಶಿಕ್ಷಕರ ಶ್ರಮ ಕಾರಣ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುರಸಭೆಯ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಮಾತನಾಡಿ ಬಸವಾನಂದ ಶಾಲೆಯು ಮಹಾಲಿಂಗಪುರದ ಅತ್ಯಂತ ಹೆಮ್ಮೆಯ ಶಾಲೆಯಾಗಿದ್ದು ಇದು ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದು ಹೇಳಿದರು. ಸಾಯಂಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಿ ಬಿ ಪಟ್ಟಣಶೆಟ್ಟಿ ಶಾಲೆಯ ಮಕ್ಕಳು ಪ್ರತಿ ವರ್ಷ ನಿರಂತರವಾಗಿ ಉನ್ನತ ಹಂತದ ಸಾಧನೆಯನ್ನು ಮಾಡುತ್ತಾ ಬರುತ್ತಿದ್ದಾರೆ ಅದಕ್ಕೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಮಹಾಲಿಂಗಪುರ ವಲಯದ ಸಿ ಆರ್ ಪಿ ಗಳಾದ ಎಸ್ ಎನ್ ಬ್ಯಾಳಿ ಗುರುಗಳು ಮಾತನಾಡಿ ಮಹಾಲಿಂಗಪುರದ ಶ್ರೀ ಬಸವಾನಂದ ಶಾಲೆಯ ಮಹಾಲಿಂಗಪುರದ ಹೆಮ್ಮೆ ಶಾಲೆಯು ನಿರಂತರವಾಗಿ ಶೈಕ್ಷಣಿಕ ಕ್ರೀಡೆ ಹಾಗೂ ಇನ್ನಿತರ ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿದೆ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಈ ಸಾಧನೆ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.
ನಂತರ ಶಾಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಲವಾರು ಬಹುಮಾನಗಳನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎಮ್ ಎಮ್ ಕೊಣ್ಣೂರ ಸ್ವಾಗತಿಸಿದರು ವಾಯ ಎ ಮಗದುಮ ಹೆಚ್ ಎಲ್ ತಳವಾರ ಸಿ ವಿ ಹುಣಶ್ಯಾಳ ಸಿ ಕೆ ಮುರಗೋಡ ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು ಸಿ ಎ ಫಡತಾರೆ ವಂದಿಸಿದರು ಹೆಚ್ ಆಯ್ ಸುತಾರ ಮತ್ತು ಎಸ್ ಎಮ್ ಮುಗಳಖೋಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಸಿಬ್ಬಂದಿಗಳು ಪಾಲಕರು ಉಪಸ್ಥಿತರಿದ್ದರು.