ಮುದ್ದೆಬಿಹಾಲ್

ತಾಲೂಕಾ ಮಟ್ಟದ 30 ಸದಸ್ಯರ ಆಯ್ಕೆಗೆ ಚುನಾವಣೆಗೆ ನಾಮಪತ್ರ ಸಲ್ಲಿಕೆ

ತಾಲೂಕಾ ಮಟ್ಟದ 30 ಸದಸ್ಯರ ಆಯ್ಕೆಗೆ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಮುದ್ದೇಬಿಹಾಳ 18: ಪಟ್ಟಣದ ಮುಖ್ಯ ಬಜಾರದಲ್ಲಿರುವ ಹಳೆ ತಹಶಿಲ್ದಾರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ 2024-2029 ಸಾಲಿನ ಅವಧಿಗೆ ತಾಲೂಕಾ ಮಟ್ಟದ 30 ಸದಸ್ಯರ ಆಯ್ಕೆಗೆ ಗುರುವಾರ ಚುನಾವಣೆಗೆ ನಾಮಪತ್ರ ಸಲ್ಲಿಕೆ  ನಡೆಯಿತು.  

ಈ ವೇಳೆ ಮುದ್ದೇಬಿಹಾಳ ಹಾಗೂ ತಾಳಿಕೋಟಿ ಭಾಗದ ಸಮಸ್ತ ಆರೋಗ್ಯ ಇಲಾಖೆಯ ಅಧಿಕಾರಿ ನೌಕರರು ತಾಲೂಕಿನ ಎಲ್ಲ ಸಂಸ್ಥೆಗಳ ಒಮ್ಮತದ ಅಭ್ಯರ್ಥಿಗಳಾಗಿ ಆನಂದಗೌಡ .ಎನ್ ಬಿರಾದಾರ, ಯಲ್ಲಪ್ಪ ಎಂ ಚಲವಾದಿ, ಸತೀಶ ಕುಲಕರ್ಣಿ, ವಿಠ್ಠಲ ಕಿಲಾರಟ್ಟಿ  ಸೇರಿದಂತೆ ಒಟ್ಟು 4 ಜನರ  ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.  

ಈ ವೇಳೆ ಅಭ್ಯರ್ಥಿ ಆನಂದಗೌಡ ಬಿರಾದಾರ ಅವರು ಮಾತನಾಡಿ ಸರಕಾರಿ ನೌಕರರ ಶ್ರೇಯೋಭಿವೃದ್ಧಿಗಾಗಿ ಮತ್ತು ಅವರ ಕಷ್ಟಗಳ ಬಗ್ಗೆ ಧ್ವನಿಯಾಗಿ ನಿಲ್ಲಲು ಒಬ್ಬ ಮುಖಂಡನಾಗಿ ಸರಕಾರದ ಗಮನಕ್ಕೆ ತರುವ ಮೂಲಕ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಉದ್ದೇಶವಾಗಿದೆ.  ಚುನಾವಣೆಗಳು ಎಂದಾಗ ಮನುಷ್ಯನ ಭಾವನೆಗಳು ಬೇರೆಯಾಗಿರುತ್ತವೆ, ವೈಷಮ್ಯಗಳು ಸೃಷ್ಠಿಯಾಗುತ್ತವೆ ಕಾರಣ ನಮ್ಮಲ್ಲಿ ಯಾವೂದೇ ವೈಷಮ್ಯಗಳು, ತಾರತಮ್ಯಗಳು ಉದ್ಭವಿಸಬಾರದು ಎಂಬ ಕಾರಣಕ್ಕೆ ತಾಲೂಕಾ ಆರೋಗ್ಯ ಇಲಾಖೆ ಎಲ್ಲ ಸಿಬ್ಬಂದಿಗಳು ಒಗ್ಗಟ್ಟಾಗಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಾಲ್ಕು ಜನರನ್ನು ಆಯ್ಕೆ ಮಾಡಿ ಇಂದು ನಾಮಪತ್ರ ಸಲ್ಲಿಸುವ ಅವಕಾಶ ನೀಡಿದ್ದಾರೆ ನಮಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು. 

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಈರಣ್ಣ ಚಿನಿವಾರ, ಮೈಬೂಬಪಟೇಲ ನಡುವಿನಮನಿ,ಮುತ್ತು ದೇಸಾಯಿ, ಹಣಮಗೌಡ ಬಿರಾದಾರ, ಈರಣ್ಣ ಕಸಬೇಗೌಡರ, ಎಂ ಎಸ್ ಗೌಡರ, ವ್ಹಿ ವ್ಹಿ ಪವಾಡಶೇಟ್ಟಿ, ಸಂಜಯ ಭೋಸಲೆ,ಶಿವಕುಮಾರ ಬಂದ್ರೋಳಿ, ಸುಭಾಷ ಕುಂಬಾರ, ಕಾಶೀನಾಥ ವಗದುರ್ಗಿ, ಎಂ.ಬಿ ಬಾಗವಾನ, ಶಕೀಲ ನಾಯ್ಕೋಡಿ, ಸರ್ಫ್ರಾಜ್ ನಾಯ್ಕೋಡಿ , ಮಹಮ್ಮದರಫೀಕ ಮುದ್ನಾಳ,ಸಂತೋಷ  ಅಂಗಡಗೇರಿ, ಯಲಗೂರೇಶ ತೋನಶ್ಯಾಳ ಚೇತನ  ಕಲ್ಲುಠ, ಎಸ್ ಐ ಕಮಲಪ್ಪನವರ, ಸಿ ಜಿ ಬಿದರೆಕುಂದಿ, ಐ ಬಿ ಹೂಗಾರ್ ಎಫ್‌. ಎ.ಅತ್ತಾರ, ಸಂತೋಷ ನಾಗರಾಬೆಟ್ಟ, ಬಸಮ್ಮ ಸಾರವಾಡ, ಎ ಎಸ್ ತೇರದಾಳ, ಐ ಸಿ ಮಾನಕರ್, ಬಸಮ್ಮ ಕೊಣ್ಣೂರ್, ಬಸಮ್ಮ ಹಳ್ಳಿ, ಲಕ್ಷ್ಮೀ ಎ,ರಫೀಕ್ ರಂಜನಗಿ,ರಶೀದ್ ಕೊಡಗಾನೂರು,, ಸಚಿನ ರಾಠೋಡ, ರಾಜಶ್ರೀ ಅಲಗುಂಡಿ ಹಾಗೂ ಇಲಾಖೆಯ ಸರ್ವ ಸಿಬ್ಬಂದಿ ವರ್ಗ ಮುಂತಾದವರು ಹಾಜರಿದ್ದರು.ವಿವಿದ ಸರಕಾರಿ ಇಲಾಖೆಗಳ ನೌಕರ ಮತದಾರರು ಹಾಗೂ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ತಮ್ಮ ಹಿಂಬಾಲಕ ಮತದಾರರೊಂದಿಗೆ ತೆರಳಿದರು. 


ಸುದ್ದಿ ಓದಿ