ಮುದ್ದೆಬಿಹಾಲ್

ತೆರವುಗೊಂಡ ಪುರಸಭೆ ಸದಸ್ಯರ ಸ್ಥಾನಕ್ಕೆ ಏಳು ಜನರಿಂದ ನಾಮಪತ್ರ ಸಲ್ಲಿಕೆ

ತೆರವುಗೊಂಡ ಪುರಸಭೆ ಸದಸ್ಯರ ಸ್ಥಾನಕ್ಕೆ ಏಳು ಜನರಿಂದ ನಾಮಪತ್ರ ಸಲ್ಲಿಕೆ

ಮುದ್ದೇಬಿಹಾಳ 17: ಪಟ್ಟಣದ ನಂ 18ರ ಪುರಸಭೆ ಸದಸ್ಯ ಅಲ್ಲಾಭಕ್ಷ ಢವಳಗಿಯವರ ನಿಧನದಿಂದಾಗಿ ತೆರವುಗೊಂಡ ಪುರಸಭೆ ಸದಸ್ಯರ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಡಿ, 15 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದರಿಂದ ಕಾಂಗ್ರೇಸ್ ನಿಂದ ಶಾಹಿರಾಭಾನು ಅಲ್ಲಾಭಕ್ಷ ಢವಳಗಿ, ಜೆಡಿಎಸ್ ನಿಂದ ಲಾಳೆಮಶ್ಯಾಕ ಹುಸೇನಭಾಷಾ ನಾಯ್ಕವಾಡಿ, ನೂರಹಮ್ಮದ ಶಮಸುದ್ಧಿನ ಶಿವಣಗಿ(ಪಕ್ಷೇತರ) ಮಹಮ್ಮದ ಅಮೀರ ಅಹ್ಮಜಾ ಹುಣಸಗಿ(ಪಕ್ಷೇತರ) ಮಹಮ್ಮದ ಜುಬೇರ ದಾವಲಸಾಬ  ಸಾತಿಹಾಳ(ಎಸ್ ಡಿ ಪಿ ಐ) ದಯಾರಾಮಶಿಂಗ್ ತುಳಜಾರಾಮಸಿಂಗ್ ರಾಯಚೂರ(ಬಿಜೆಪಿ)ಅಬ್ದುಲಜೀಜ ಡೊಂಗರೀಸಾಬ ಢವಳಗಿ(ಪಕ್ಷೇತರ)  ಒಟ್ಟು ಏಳು ಜನ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಸ್ ಎಂ ಕಮತರ ತೀಳಿಸಿದ್ದಾರೆ. 

ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಅವರು ಸುದ್ದಿಗಾರರೊಂದಿಗೆ ಮಾತನಾಡಿ  ಪಟ್ಟಣದ ನಂ 18ರ ಪುರಸಭೆ ಸದಸ್ಯ ಅಲ್ಲಾಭಕ್ಷ ಢವಳಗಿಯವರು ಕಾಂಗ್ರೇಸ್ ಪಕ್ಷಕ್ಕೆ ಮಾತ್ರವಲ್ಲದೇ ಇಡೀ ತಾಲೂಕಿನ ಎಲ್ಲ ಮುಸ್ಲಿಂ ಸಮಾಜದ ಹಿರಿಯ ಮುಖಂಡರಾಗಿದ್ದರು. ಕಳೇದ ಐದು ಬಾರಿ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿ ಹಿರಿಯ ಅನುಭವಿ ರಾಜಕಾರಿಣಿಯಾಗಿದ್ದರು. ಇಷ್ಟು ಬೇಗ ಅವರಿಗೆ ಸಾವು ಸಂಭಿಸಬಾರದಿತ್ತು. ದುರ್ದೈವ ವಿಧಿಯಾಟದ ಮುಂದೆ ಯಾರು ದೊಡ್ಡವರಲ್ಲ. ಸಣ್ಣ ವಯಸ್ಸಿನಲ್ಲಿಯೇ ನಮ್ಮನ್ನು ಅಗಲಿದರು.  

ಈ ನಿಟ್ಟಿನಲ್ಲಿ ಮುಂದಿನ 18 ತಿಂಗಳ ಪುರಸಭೆ ಸದಸ್ಯರ ಸ್ಥಾನಕ್ಕಾಗಿ ವಾರ್ಡ ನಂ18 ಸೋಠೆ ಗಲ್ಲಿಯಲ್ಲಿನ ಕಾಂಗ್ರೇಸ್ ಮುಖಂಡರ ಮುಸ್ಲಿಂ ಮುಖಂಡರ ಸಭೆ ನಡೆಸಿ ಯಾರನ್ನು ಚುನಾವಣಾ ಕಣಕ್ಕಿಸಬೇಕು ಎಂಬುದನ್ನು ಕಾಂಗ್ರೇಸ್ ಪಕ್ಷದ ವರೀಷ್ಠರ ಹಾಗೂ ಶಾಸಕ ಸಿ ಎಸ್ ನಾಡಗೌಡ ಅವರ ನೇತೃತ್ವದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೇ ಶಾಸಕ ಸಿ ಎಸ್ ನಾಡಗೌಡ ಅವರು ಬೆಳಗಾಂವಿಯಲ್ಲಿನ ವಿಧಾನ ಸಭಾ ಅಧಿವೇಶನದಲ್ಲಿರುವ ಕಾರಣ ದೂರವಾಣಿ ಮೂಲಕವೇ ಚರ್ಚೆ ನಡೆಸಿ ಮತ್ತುಈ ವಾರ್ಡಿನ ಬಹುತೇಕ ಎಲ್ಲ ಮುಖಂಡರ ಅಭಿಪ್ರಾಯದಂತೆ ನಿಧನ ಹೊಂದಿದ ಅಲ್ಲಾಭಕ್ಷ ಢವಳಗಿಯವರ ಪತ್ನಿ ಶಾಹಿರಾಭಾನು ಢವಳಗಿಯವರನ್ನು ಚುನಾವಣಾ ಕಣಕ್ಕಿಳಿಸಿದರೇ ಅಲ್ಲಾಭಕ್ಷ ಢವಳಗಿಯವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಮಾತ್ರವಲ್ಲದೇ ಅವರ ಕುಟುಂಭಕ್ಕೆ ನ್ಯಾಯ ನೀಡಿದಂತಾಗುತ್ತದೆ ಎನ್ನುವ ಉದ್ದೇಶದಿಂದ ಕಾಂಗ್ರೇಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿ ಬಿ ಫಾರಂ ನೀಡುವ ಮೂಲಕ ಚುನಾವಣಾ ಕಣದಲ್ಲಿ ಉಳಿಯುವಂತೆ ನೋಡಿಕೊಳ್ಳಲಾಗಿದೆ. ಖಂಡಿತವಾಗಿಯೂ ಶಾಹಿರಾಭಾನು ಢವಳಗಿಯವರ ಗೆಲುವು ನಿಶ್ಚಿತ ಎಂದರು.  

ಈ ವೇಳೆ ಶಿವಾನಂದ ಹಿರೇಮಠ ಮುಸ್ಲಿಂ ಮುಖಂಡ ಕುತುಬುದ್ದೀನ ಸೋಠೆ ಅವರು ಮಾತನಾಡಿ ಅಲ್ಲಾಭಕ್ಷ ಢವಳಗಿಯವರ ಕುಟುಂಭ ಅತ್ಯಂತ ಸರಳ ಸಜ್ಜನಕೆ ವ್ಯಕ್ತಿತವಕ್ಕೆ ಸಾಕ್ಷಿಯಾಗಿದ್ದಾರೆ ಸಧ್ಯ ಅವರ ಧರ್ಮ ಪತ್ನಿ ಶಾಹಿರಾಭಾನು ಢವಳಗಿ ಅವರನ್ನು ಕಾಂಗ್ರೇಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದ್ದಾರೆ. ಈಗಾಗಲೇ ಬೇರೆ ಬೇರೆಯವರುಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ ಆದರೇ ಅವರನ್ನು ಸಂಪರ್ಕಿಸಿ ಚುನಾವಣಾ ಕಣದಿಂದ ಹಿಂಪಡೆಯುವಂತೆ ಮನೊಲಿಸಲಾಗುವುದು ಆದರೂ ಹಿಂದೆ ಸರಿಯದಿದ್ದಲ್ಲಿ ಚುನಾವಣೆ ನಡೆಸಿ ಗೆಲ್ಲಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು. ಪುರಸಭೆ ಸದಸ್ಯ ಮೈಬೂಬ ಗೊಳಸಂಗಿ, ರಜಾಕ ಢವಳಗಿ, ತಾಲೂಕಾ ಯೂಥ್ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದರಫೀಕ ಶಿರೋಳ, ಪುರಸಭೆ ಸದಸ್ಯ ರೀಯಾಜ ಢವಳಗಿ ಸಿಕಂದರ ಜಾನ್ವೇಕರ ಮುಖಂಡರಾದ ಮೈಬೂಬ ನಾಲತವಾಡ, ಅಬ್ದೂಲಗಫೂರ ಮಕಾಂದಾರ, ಬಾಪ್(ಡೊಂಗರಿಸಾ) ಢವಳಗಿ, ಪೀರಸಾಭ ನದಾಫ,ದಾದಾ ಎತ್ತಿನಮನಿ,ಲೇಡ್ಲೇಮಶ್ಯಾಕ ನಾಯ್ಕೋಡಿ,ಸಲೀಮ ಬೇಪಾರಿ,ಸೋಶಿಫ್ ನಾಯ್ಕೋಡಿ, ಜಾಖೀರ ಢವಳಗಿ, ಗೋಪ ಮಡಿವಾಳ, ರಹೀಮ್ ಮುಜಾವರ.ಜಾವಿಧ ಢವಳಗಿ,ಇಸ್ಮಾಯಿಲ್ ಢವಳಗಿ,ರಮಜಾನ್ ನದಾಫ್,ಸಿರಾಜ ಗಣಿ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ