ಸಂಕೇಶ್ವರ ಪುರಸಭೆಯ ಉಪಚುನಾವಣೆಗೆ ನಾಲ್ಕು ನಾಮಪತ್ರಗಳ ಸಲ್ಲಿಕೆ

ಸಂಕೇಶ್ವರ ಪುರಸಭೆಯ ಉಪಚುನಾವಣೆಗೆ ನಾಲ್ಕು ನಾಮಪತ್ರಗಳ ಸಲ್ಲಿಕೆ

ಸಂಕೇಶ್ವರ : ಇದೇ ನ. 21 ನಡೆಯಲಿರುವ ಸಂಕೇಶ್ವರದ ಪುರಸಭೆಯ ವಾರ್ಡ್ ನಂಬರ. 21ರ ಉಪಚುನಾವಣೆಗೆ ಶುಕ್ರವಾರ ಒಟ್ಟು ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿವೆ. 

   ಪುರಸಭೆ ವಾರ್ಡ್ ನಂಬರ 21ರ ಸದಸ್ಯರಾಗಿದ್ದ ಅಪ್ಪಾಜಿ ( ಜಿತೇಂದ್ರ) ಮರಡಿ ಅವರು ನಿಧನರಾಗಿದ್ದರು. ಈ  ಹಿನ್ನೆಲೆಯಲ್ಲಿ ತೆರವಾಗಿದ್ದ 21ನೇ ವಾರ್ಡಿನ ಉಪಚುನಾವಣೆಗೆ ದಿನಾಂಕ ನಿಗಧಿಪಡಿಸಿರುವ ನಿಟ್ಟಿನಲ್ಲಿ ಶುಕ್ರವಾರ ಸಂಜೆ ವರೆಗೆ ಒಟ್ಟು ನಾಲ್ಕು ನಾಮಪತ್ರಗಳು ಸಲ್ಲಿಕೆಯಾಗಿವೆ.

    ಮೃತ ಸದಸ್ಯರಾಗಿದ್ದ ಅಪ್ಪಾಜಿ ( ಜಿತೇಂದ್ರ) ಮರಡಿ ಅವರ ಧರ್ಮಪತ್ನಿ ಶ್ರೀಮತಿ ಭಾರತಿ‌ ಮರಡಿ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಒಂದು ಹಾಗೂ ಪಕ್ಷೇತರರಾಗಿ ಒಂದು ಹೀಗೆ ಎರಡು‌ ನಾಮಪತ್ರಗಳನ್ನು ಸಲ್ಲಿಕೆ ಮಾಡಿದರು. 

    ಬಳಿಕ ಬಂದ ನ್ಯಾಯವಾದಿ ವಿಕ್ರಮ ಕರನಿಂಗ ಅವರು ಕೂಡಾ ಇದೇ ವಾರ್ಡನ್ ಚುನಾವಣೆಗೆಗಾಗಿ ಶುಕ್ರವಾರ ಮಧ್ಯಾಹ್ನ ರಾಹುಕಾಲದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

   ಆದರೆ ಈ ಇಬ್ಬರು ಅಭ್ಯರ್ಥಿಗಳು ಕಾಂಗ್ರೆಸ್ ಪರ ನಾಮಪತ್ರಗಳನ್ನು ಸಲ್ಲಿಸಿದ್ದು ಕಾಂಗ್ರೆಸ್ ಪಕ್ಷವು ಯಾರಿಗೆ ಬಿ ಫಾರ್ಮ್ ನೀಡಲಿದೆ ಎನ್ನುವದನ್ನು ಕಾದು ನೋಡಬೇಕಿದೆ. 

   ಇನ್ನು ಬಿಜೆಪಿ ಅಭ್ಯರ್ಥಿಯಾಗಿ ಗಂಗಾರಾಮ್ ಭೂಸಗೋಳ ಅವರು ಸೋಮವಾರ ಬಿಜೆಪಿಯ ಮುಖಂಡರೊಡನೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. 

ಸುದ್ದಿ ಓದಿ