ಸಂಕೇಶ್ವರ ಪುರಸಭೆ ಉಪ ಚುನಾವಣೆ ಒಂದು ಸ್ಥಾನಕ್ಕೆ 9 ನಾಮಪತ್ರಗಳ ಸಲ್ಲಿಕೆ
ಸಂಕೇಶ್ವರ : ಇಲ್ಲಿನ ಪುರಸಭೆಯ ವಾರ್ಡ್ ನಂಬರ 21ರ ಉಪಚುನಾವಣೆಯ 1 ಸ್ಥಾನಕ್ಕೆ 9 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಯಾರು ಕಣದಲ್ಲಿ ಉಳಿಯುತ್ತಾರೆ ಎನ್ನುವದು ಕೂತುಹಲ ಮೂಡಿಸಿದೆ.
ಸಂಕೇಶ್ವರದ ಪುರಸಭೆಯ ವಾರ್ಡ್ ನಂಬರ 21ರ ಸದಸ್ಯರಾಗಿದ್ದ ಅಪ್ಪಾಜಿ ಉರ್ಫ್ ಜಿತೇಂದ್ರ ಮರಡಿ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ಬರುವ 23ರಂದು ಚುನಾವಣೆ ನಡೆಯಲಿದೆ.
ಆದರೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಸೋಮವಾರ ಗಂಗಾರಾಮ ಭೂಸಗೋಳ ಅವರು ಬಿಜೆಪಿ ಮುಖಂಡರ ಜೊತೆಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು ಹಾಗೂ ನ್ಯಾಯವಾದಿ ವಿಕ್ರಮ ಕರನಿಂಗ ಅವರು ಬಂಡಾಯ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿದರು. ರವೀಂದ್ರ ಕಾಂಬಳೆ, ಉದಯ ಕರನಿಂಗ ಇವರುಗಳು ಕೂಡಾ ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ.
21ರ ವಾರ್ಡಿನ ಉಪಚುನಾವಣೆಗೆ ಮೃತ ಸದಸ್ಯ ಜಿತೇಂದ್ರ ಮರಡಿ ಅವರ ಪತ್ನಿ ಭಾರತಿ ಮರಡಿ ಸೇರಿದಂತೆ ಒಟ್ಟು 9 ನಾಮಪತ್ರಗಳು ಸಲ್ಲಿಕೆಯಾಗಿವೆ.