ನವದುರ್ಗೆಯರ ಅವತಾರದಲ್ಲಿ ಗಮನ ಸೆಳೆದ ವಿದ್ಯಾರ್ಥಿಗಳು
ಮಹಾಲಿಂಗಪುರ 10: ನವರಾತ್ರಿಯೆಂದರೆ ಊರ ದೇವಸ್ಥಾನದಲ್ಲಿ, ಮನೆ ಹತ್ತಿರದ ಮಂಟಪದಲ್ಲಿ ಪೂಜೆ, ಅಲಂಕಾರ, ಪ್ರಸಾದದೊಂದಿಗೆ ಆಚರಿಸುವ ಸಂಪ್ರದಾಯ ಹೆಚ್ಚಾಗಿ ಕಂಡು ಬರುತ್ತದೆ. ಆದರೆ ಮಹಾಲಿಂಗಪುರದ ಕೆಎಲ್ಇ ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ತರಗತಿಗಳ ಒತ್ತಡದ ಮಧ್ಯೆಯೂ ನಾಡ ಹಬ್ಬ ದಸರಾ ಉತ್ಸವದ ಉತ್ಸಾಹದಲ್ಲಿದ್ದಾರೆ.
ಕಾಲೇಜಿನಲ್ಲಿ ಏರಿ್ಡಸಿದ್ದ ನವದುರ್ಗಾ ಅವತಾರ ಸ್ಪರ್ಧೆಯಲ್ಲಿ ಹತ್ತಾರು ವಿದ್ಯಾರ್ಥಿನಿಯರು ದೇವಿಯ ನಾನಾ ಅವತಾರಗಳ ವೇಷಭೂಷಣಗಳಲ್ಲಿ ಭಾಗವಹಿಸಿ ಕಂಗೊಳಿಸಿದರು. ಅದರಲ್ಲಿ ಸುಪ್ರಿಯಾ ಶಿಕ್ಕಲಕಾರ ಮತ್ತು ಗೀತಾ ಪಚ್ಚಾಪೂರ ಪ್ರಥಮ, ಕೀರ್ತನಾ ಮಾಂಗ ದ್ವಿತೀಯ, ಶಿವಾನಿ ಕೊಂತಿ, ಅಪೂರ್ವ ಶಿಗ್ಗಾಂವಿ ತೃತೀಯ ಹಾಗೂ ವರ್ಷಿಣಿ ಬಿದರಿ, ಗಾಯತ್ರಿ ವಾಲಿ, ರಾಧಿಕಾ ಪಾತ್ರೋಟ ಸಮಾಧನಕರ ಬಹುಮಾನ ಪಡೆದರು.
ಆಭರಣ ತಯಾರಿಕೆ ಸ್ಪರ್ಧೆಯಲ್ಲಿ ಶ್ವೇತಾ ಧಡೂತಿ ಪ್ರಥಮ, ಗೀತಾ ಪಚ್ಚಾಪೂರ ದ್ವಿತೀಯ, ಸ್ಟೋರಿ ಟೆಲ್ಲಿಂಗ್ ಸ್ಪರ್ಧೆಯಲ್ಲಿ ಪ್ರಜ್ಞಾ ಬೆಳಗಾಂವಕರ, ಅಪೂರ್ವ ಶಿಗ್ಗಾಂವಿ ದ್ವಿತೀಯ, ಪ್ರಿಯಾ ಬಡಕುಂಬಿ ತೃತೀಯ, ಪೂಜಾ ಥಾಲಿ ಸ್ಪರ್ಧೆಯಲ್ಲಿ ಅಂಜಲಿ ಶಿರಗಾಂವಿ ಪ್ರಥಮ, ಕಾವೇರಿ ಪಟ್ಟಣಶೆಟ್ಟಿ ದ್ವಿತೀಯ, ಸಮೀಕ್ಷಾ ಹಳೆಮನಿ ತೃತೀಯ ಸ್ಥಾನ ಪಡೆದಿದ್ದಾರೆಂದು ಪ್ರಾಚಾರ್ಯ ಎಸ್.ಐ.ಕುಂದಗೋಳ ತಿಳಿಸಿದ್ದಾರೆ.