ರಾಯಬಾಗ

ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಿ ಉನ್ನತ ಸಾಧನೆ ಮಾಡಬೇಕು: ಎಚ್‌.ಕೆ. ಗುರುವ ಅವರ ಕರೆ

ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಿ ಉನ್ನತ ಸಾಧನೆ ಮಾಡಬೇಕು: ಎಚ್‌.ಕೆ. ಗುರುವ ಅವರ ಕರೆ

     ರಾಯಬಾಗ 03 : ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಭ್ಯಾಸ ಮಾಡಿ ಒಳ್ಳೆಯ ಅಂಕಗಳನ್ನು ಗಳಿಸಿ ಉನ್ನತ ಸಾಧನೆ ಮಾಡಬೇಕೆಂದು ಧಾರವಾಡದ ನಿವೃತ್ತ ಪ್ರಾಧ್ಯಾಪಕ ಎಚ್‌.ಕೆ.ಗುರವ ಹೇಳಿದರು.  ಪಟ್ಟಣದ ಕೆಎಲ್‌ಇ ಸಂಸ್ಥೆಯ ಮಲಗೌಡಾ ಪಾಟೀಲ ಪದವಿ ಪೂರ್ವ ಕಾಲೇಜಿನ 2026-27 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ತ್ಯಾಗ, ನ್ಯಾಯ, ನೀತಿ, ಧರ್ಮ, ಪ್ರೀತಿ, ವಿಶ್ವಾಸ ಈ ಮಾನವೀಯ ಮೌಲ್ಯಗಳನ್ನು ಅನುಸರಿಸಿಕೊಂಡು ಸಮಾಜದ ಹಿತವನ್ನು ಕಾಪಾಡುವಂತಾಗಬೇಕೆಂದು ಅವರು ಕೆ.ಎಲ್‌.ಇ ಸಂಸ್ಥೆಯ ಗೌರವಾಧ್ಯಕ್ಷರಾದ ಪದ್ಮಶ್ರೀ ಪುರಸ್ಕೃತ ಡಾ. ಪ್ರಭಾಕರ ಕೋರೆಯವರ ಸಾಧನೆ ಅಪರಿಮಿತ ಎಂದು ಹೇಳಿದರು.           

   ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಆರ್‌.ಕೆ.ಪಾಟೀಲ ಮಾತನಾಡಿ ಬಡ ಹಾಗೂ ಪ್ತಭಾವಂತ ವಿದ್ಯಾರ್ಥಿಗಳಿಗೆ ಕಾಲೇಜಿನ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದ್ದು, ಪ್ರಥಮ ವರ್ಷದ 27, ದ್ವಿತೀಯ ವರ್ಷದ 16 ವಿದ್ಯಾರ್ಥಿಗಳಿಗೆ 3 ಲಕ್ಷದವರೆಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ 2025-26 ನೇ ಸಾಲಿನಲ್ಲಿ ವಿಷಯವಾರು ಪ್ರತಿಶತ 100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನುಸತ್ಕರಿಸಲಾಯಿತು.  

    ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ, ಡಿ.ಎಲ್‌.ಮಿರ್ಜೆ, ಎಮ್‌.ಎಮ್‌.ನಿಶಾನದಾರ, ವಿ.ಪಿ.ಪಾಟೀಲ, ಎಲ್‌.ಬಿ.ಪಾಟೀಲ, ಎಸ್‌.ಬಿ.ಗಸ್ತಿ, ಎ.ಜಿ.ಹಂಜಿ, ಪಿ.ಬಿ.ಪಾಟೀಲ, ಎಮ್‌.ಆರ್‌.ಹೊಸಮನಿ, ಆರ್‌.ಎಸ್‌.ಬುಗಡಿಕಟ್ಟಿ, ಪಿ.ಆರಿ​‍್ಬರಡಿ, ಎಮ್‌.ಎಸ್‌.ಜಾಧವ, ಎ.ಎ.ಶೆಟ್ಟಿ, ಪಿ.ಪಿ.ಪವಾರ, ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 3ರಾಯಬಾಗ1-ಪಟ್ಟಣದ ಕೆ.ಎಲ್‌.ಇ ಸಂಸ್ಥೆಯ ಮಲಗೌಡಾ ಪಾಟೀಲ ಪದವಿ ಪೂರ್ವ ಕಾಲೇಜಿನ 2026-27 ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡಾ ಮತ್ತುಸಾಂಸ್ಕೃತಿಕ ವಿಭಾಗದ ಉದ್ಘಾಟನಾ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. 


ಸುದ್ದಿ ಓದಿ