ಮಹಲಿಂಗಪುರ

ವಿದ್ಯಾರ್ಥಿಗಳು ಅಂಕಗಳಿಸುವ ಯಂತ್ರಗಳಾಗಬಾರದು: ಬ್ಯಾಳಿ

ವಿದ್ಯಾರ್ಥಿಗಳು ಅಂಕಗಳಿಸುವ ಯಂತ್ರಗಳಾಗಬಾರದು: ಬ್ಯಾಳಿ

ಮಹಾಲಿಂಗಪುರ : ವಿಧ್ಯಾರ್ಥಿಗಳು ಅಂಕ ಗಳಿಸುವ ಯಂತ್ರಗಳಾಗದೆ ಅಧ್ಯಯನ ಜೊತೆ ಸಾಮಾಜಿಕ, ಬೌದ್ಧಿಕ, ನೈತಿಕ ಮೌಲ್ಯಗಳನ್ನು ಬೆಳೆಸಿಕ್ಕೊಳ್ಳಬೇಕು ಆಗ ಬದುಕಿನಲ್ಲಿ ಮಾನವೀಯ ಮೌಲ್ಯಗಳ ಹರಿಕಾರರಾಗುತ್ತಿರಿ ಎಂದು ವಲಯ ಕೇಂದ್ರ ಸಂಪನ್ಮೂಲ ಅಧಿಕಾರಿ ಎಸ್ ಎನ್‌. ಬ್ಯಾಳಿ ಹೇಳಿದರು. 

ಜೇಸಿ ಆಂಗ್ಲ ಮಾಧ್ಯಮ ಹಾಗೂ ಪ್ರೌಢ ಶಾಲೆಯ 2022-23ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಮುಖ್ಯ ಅತಿಥಿ ಭಾಷಣದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಪ್ರತಿಭಾವಂತರೆ, ಅಭ್ಯಾಸದಲ್ಲಿ ವಿಫಲರಾಗಿದ್ದೇವೆ ಅಥವಾ ಸೋತಿದ್ದೇವೆ ಎಂದು ಮಾನಸಿಕ ಖಿನ್ನತೆಗೆ ಒಳಗಾಗದೇ ಮತ್ತೊಂದು ರಂಗದಲ್ಲಿ ಪ್ರಯತ್ನ ಮುಂದುವರೆಸಿದ್ದೇ ಆದರೆ ನಿಮಗೆ ಯಶಸ್ಸು ದೊರೆಯುತ್ತದೆ. ಮೂರು ದಶಕಗಳ ಈ ಆಂಗ್ಲ ಮಾಧ್ಯಮ ಶಾಲೆ, ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮೌಲ್ಯಯುತ ಶಿಕ್ಷಣ ನೀಡುತ್ತ ಅವರ ಬಾಳಿಗೆ ಬೆಳಕಾಗಿದೆ ಎಂದರು.  

ಭಾಜಪ ಜಿಲ್ಲಾ ಯುವ ಕಾರ್ಯದರ್ಶಿ ವಿದ್ಯಾಧರ ಸವದಿ ಮಾತನಾಡಿ, ವಿಧ್ಯಾರ್ಥಿಗಳಲ್ಲಿ ಹುದುಗಿರುವ ಕೌಶಲ್ಯ ಹೊರ ಹಾಕಲು ಈ ವಾರ್ಷಿಕ ಸ್ನೇಹ ಸಮ್ಮಿಲನ ಸಹಕಾರಿ ಆಗಿದೆ ಎಂದರು. 

ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಮಾತನಾಡಿ, ಪುರಸಭೆಯಿಂದ 5ಲಕ್ಷ ಮೊತ್ತದ ಫೀವರ್ ಬ್ಲಾಕ್ ಹಾಕಿಸಲು ಸ್ಥಳಕ್ಕೆ ಮುಖ್ಯಾಧಿಕಾರಿಗಳನ್ನು ಕರೆಯಿಸಿ ಆದೇಶ ಮಾಡಿದರು. ಪ್ರತಿಯಾಗಿ ಶಾಲಾಢಳಿತ ಪುರಸಭಾ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. 

ಇದೆ ಸಮಯದಲ್ಲಿ ಕ್ರಿಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಪ್ರಶಸ್ತಿ ಪತ್ರ, ಫಲಕಗಳನ್ನು ನೀಡಲಾಯಿತು. 2019-20,21,22 ಸೇ ಸಾಲಿನ ಎಸ್ಸೆಸ್ಸೆಲ್ಸಿ ಅಗ್ರಶ್ರೇಯಾಂಕಿತ ವಿಧ್ಯಾರ್ಥಿಗಳನ್ನು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಅಗ್ರಶ್ರೇಯಾಂಕಿತೆ ಕು. ಲಕ್ಷ್ಮಿ ಗೊಂದಿ ಶಾಲೆಗೆ ಕಂಪ್ಯೂಟರ್ ಕಾಣಿಕೆಯಾಗಿ ನೀಡಿದಳು. 

ವೇದಿಕೆ ಮೇಲೆ ಕಾನಿಪ ಅಧ್ಯಕ್ಷ ಮಹೇಶ್ ಆರಿ, ಸದಸ್ಯರಾದ ಆಯ್ ಬಿ. ಮುರಗೋಡ, ಗುರುರಾಜ ಅಂಬಿ, ರಮೇಶ್ ಮುಳವಾಡ, ಆರ್ ಎಂ.ಘಟ್ಟೆಪ್ಪನ್ನವರ, ಸುನೀಲ್ ಪಟೇಲ್ ಮತ್ತು ವಿಧ್ಯಾರ್ಥಿಗಳು, ಪಾಲಕರು, ಉಪಸ್ಥಿತರಿದ್ದರು.ಪ್ರಧಾನ ಗುರುಗಳಾದ ಎಸ್ ಜಿ. ಕೌಜಲಗಿ ಸ್ವಾಗತಿಸಿ, ಶಾಲಾಧ್ಯಕ್ಷ ಎಸ್ ಡಿ.ತಿಪ್ಪಾ ವಂದಿಸಿದರು. 


ಸುದ್ದಿ ಓದಿ