ಸಿಂಧಗಿ

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ: ಬೀಳಗಿ

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ: ಬೀಳಗಿ

ಸಿಂದಗಿ 17: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಮೂಲಕ ವಿನೂತನ ಪ್ರಯೋಗಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಹೇಳಿದರು. 

ತಾಲೂಕಿನ ಕನ್ನೊಳ್ಳಿ ಗ್ರಾಮದ ಸರಸ್ವತಿ ವಿದ್ಯಾನಿಕೇತನ ಪೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ಹಮ್ಮಿಕೊಂಡ ವಿಜ್ಞಾನ ವಿಷಯಗಳ ಕುರಿತು ರಂಗೋಲಿ ಬಡಿಸುವ ಸ್ಪರ್ಧೆ ಕಾರ್ಯಕ್ರಮದಲ್ಲಿ ರಂಗೋಲಿಯಲ್ಲಿ ಬಿಡಿಸಿದ ವಿಜ್ಞಾನಕ್ಕೆ ಸಂಬಂಧಿಸಿದ ಚಿತ್ರಗಳನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು. 

ಶಾಲೆಯಲ್ಲಿ ಹವ್ಯಾಸಗಳನ್ನು ಮೆಟ್ಟಿಲಾಗಿಸಿ, ಪರೀಕ್ಷೆಗೆ ತಯಾರಾಗಿಸಬೇಕು. ಹೊಸ ಕಲಿಕೆಗೆ ಒತ್ತು ನೀಡಿರುವುದರಿಂದ ನಮ್ಮ ಮೇಲಿನ ಮಾನಸಿಕ ಹೊರೆ ಕಡಿಮೆಯಾಗುತ್ತದೆ. ಶಿಕ್ಷಕರು ನಮ್ಮ ಕಲಿಕಾ ಮಟ್ಟಕ್ಕೆ ಇಳಿದು ಕಲಿಸುವುದರಿಂದ, ಅವರು ಹೆಚ್ಚು ಆಪ್ತವಾಗುತ್ತಾರೆ. ಹೀಗಾಗಿಯೇ ರಂಗೋಲಿ ಕಲೆಯನ್ನೇ ಬಳಸಿಕೊಂಡು ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ಚಿತ್ರಗಳನ್ನು ಬಿಡಿಸಿದ್ದು ಮಕ್ಕಳಲ್ಲಿ ಕಲಿಕಾ ಸಾಮರ್ಥ ಹೆಚ್ಚಾಗುತ್ತದೆ ಎಂದು ಹೇಳಿದರು. 

ಮಕ್ಕಳ ಕಲಿಕೆ ಪ್ರದರ್ಶಕರಾಗಿ ಕೈಗೊಂಡ ಕಾರ್ಯ ಶ್ಲಾಘನೀಯ. ಇಂಥ ಚಟುವಟಿಕೆಗಳ ಮೂಲಕ ಮಕ್ಕಳ ಕಲಿಕೆ ಗಟ್ಟಿಗೊಂಡು ಮಕ್ಕಳ ಜ್ಞಾನಾರ್ಜನೆಗೆ ಸಹಾಯವಾಗುತ್ತದೆ. ಶಿಕ್ಷಕರು ಮಕ್ಕಳಿಗೆ ಪಾಠ ಬೋಧನೆ ಕಲಿಕೆಯ ಪ್ರಗತಿ ಪರೀಶೀಲನೆಗಾಗಿ ಪ್ರದರ್ಶನ ಚಟುವಟಿಕೆ ಕೈಗೊಂಡು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಮುಖಾಂತರ ಅವರಿಗೆ ಮಾರ್ಗದರ್ಶನ ನೀಡಬೇಕು. ಪ್ರತಿಯೊಂದು ಮಗು ತನ್ನ ಜ್ಞಾನಾರ್ಜನೆ ಗೋಸ್ಕರ ನಿರಂತರ ಅಧ್ಯಯನಶೀಲರಾಗಿ ಓದುವ ಹವ್ಯಾಸವನ್ನು ಬಳಸಿಕೊಳ್ಳಲು ಮತ್ತು ತಮ್ಮಲ್ಲಿರುವ ಕಲೆಯನ್ನು ಶಿಕ್ಷಕರ ಜತೆ ಚರ್ಚಿಸಲು ಸೂಚಿಸಿದರು. 

ಈ ಸಂದರ್ಭದಲ್ಲಿ ಮಕ್ಕಳ ಕಲಿಕೆ ಪ್ರದರ್ಶನಕ್ಕಾಗಿ ರಂಗೋಲಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮಾನವನ ಹೃದಯ, ಮಾನವನ ಜೀಣಾಂರ್ಗವ್ಯೂಹ, ಮೆದುಳು, ಕ್ರೇಂದ್ರ ನರಕೋಶ ಮುಂತಾದ ಚಿತ್ರಗಳನ್ನು ಬಿಡಿಸಿದರು. ರಂಗೋಲಿ ಬಳಸಿ ಚಿತ್ರ ಬಿಡಿಸಿದ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಪ್ರಥಮ ಬಹುಮಾನ ಸಿದ್ಧಾರ್ಥ ಗಂಗನಳ್ಳಿ, ದ್ವಿತೀಯ ಬಹುಮಾನ ಭಾಗ್ಯಶ್ರೀ ಪಾಟೀಲ, ತೃತೀಯ ಬಹುಮಾನ ಲಕ್ಷ್ಮೀ ಬಿರಾದಾರ ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. 

ಸುದ್ದಿ ಓದಿ