ವಿದ್ಯಾರ್ಥಿಗಳು ಶ್ರೇಷ್ಠ ವ್ಯಕ್ತಿಗಳಾಗಿ ಜೀವನ ಸಾಗಿಸಿ: ಸಾಹಿತಿ ಸಿದ್ಧರಾಜ ಪೂಜಾರಿ
ಮಹಾಲಿಂಗಪುರ : ಪ್ರಾಣವಾಯು, ನೆರಳು, ಹೂವು, ಹಣ್ಣು ಇತ್ಯಾದಿ ವಸ್ತುಗಳನ್ನು ನೀಡಿ ಜೀವಿಗಳಿಗೆ ಮರ-ಗಿಡಗಳು ಹೇಗೆ ಪ್ರೇರಣಾ ಶೀಲತೆಯನ್ನು ಹೊಂದಿ ಪರೋಪಕಾರಿ ಆಗಿವೆಯೋ ವಿದ್ಯಾರ್ಥಿಗಳು ಕೂಡ ದೇಶಕ್ಕೆ, ನಾಡಿಗೆ, ಊರಿಗೆ ಉಪಕಾರಿಗಳಾಗಿ ಶ್ರೇಷ್ಠ ವ್ಯಕ್ತಿಗಳಾಗಿ ಜೀವನ ಸಾಗಿಸಬೇಕೆಂದು ಸಾಹಿತಿ ಸಿದ್ಧರಾಜ ಪೂಜಾರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶನಿವಾರ ಸಮೀಪದ ರನ್ನ ಬೆಳಗಲಿಯಲ್ಲಿ ಕಳೆದ 2021ನೇ ಸಾಲಿನ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಾಲೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಹಾಗೂ ಇನ್ನಿತರೆ ವಿಭಾಗಗಳ ಸಾಧಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ನೀಡುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಜಗತ್ತು ಮುಗ್ಧತೆಯನ್ನು ಕಳೆದುಕೊಂಡು ಭಯೋತ್ಪಾದನೆಯಿಂದ ನಲಗುತ್ತಿದೆ. ಪರಸ್ಪರ ಹೊಂದಾಣಿಕ ಕಳೆದು ಸುಗಮ ಆಡಳಿತ ನಡೆಸುವಲ್ಲಿ ದಾರಿ ತಪ್ಪಿವೆ, ಈಗಿನಿಂದಲೇ ವಿದ್ಯಾರ್ಥಿಗಳು ಅಸೂಯೆ ಪಡದೆ ಸಮಾಜದಲ್ಲಿ ಸೌಹಾರ್ದತೆ ಬೆಳೆಸಿಕೊಳ್ಳಬೇಕು. ಒಳ್ಳೆಯ ಸಂಸ್ಕಾರ ನೀಡುವ ತಾಯಿ ಶ್ರೇಷ್ಠ ಗುರುವಾಗುತ್ತಾಳೆ.
ವಿದ್ಯಾರ್ಥಿಗಳು ಬೇಗ ಮಲಗಿ, ಬೇಗ ಏಳಬೇಕು, ನಸುಕಿನ ಜಾವ ಬ್ರಾಹ್ಮಿ ವಾತಾವರಣವಿದ್ದು ಮಕ್ಕಳು ಓದುವ ಪ್ರತಿಯೊಂದು ಪಠ್ಯವು ನೆನಪಿನಲ್ಲಿ ಉಳಿಯುತ್ತದೆ ಮತ್ತು ಇಡೀ ದಿನ ಚಟುವಟಿಕೆಗಳೊಂದಿಗೆ ಲವಲವಿಕೆ ಹೆಚ್ಚುತ್ತದೆ. ಹಂತಹಂತವಾಗಿ ಮನೋ ವಿಕಾಸ ಹೊಂದಿ ಬುದ್ಧಿ ಮತ್ತು ಪ್ರತಿಭೆ ಅನಾವರಣಗೊಂಡು ಆತ ಶ್ರೇಷ್ಠ ವ್ಯಕ್ತಿಯಾಗುತ್ತಾನೆ.ಇದಕ್ಕೆ ನಿದರ್ಶನ ದೇಶಕ್ಕೆ ಪ್ರಥಮ ಸ್ಥಾನ ಪಡೆದ ಡಾ. ಚಿದಾನಂದ ಕುಂಬಾರ, ರನ್ನನ ಬೀಡಾಗಿರುವ ಈ ಮಣ್ಣಿನಲ್ಲಿ ಅಂತಹ ಸತ್ವ ಅಡಗಿದೆ ಮತ್ತು ಪ್ರತಿಭೆಗಳಿಗೆ ಈ ಸಂಸ್ಥೆ ಮತ್ತು ಊರಿನ ಜನ ನೀಡುತ್ತಿರುವ ಬೆಂಬಲ ಸ್ವಾಗತಾರ್ಹವಾಗಿದೆ ಇನ್ನು ಹೆಚ್ಚೆಚ್ಚು ಪ್ರತಿಭೆಗಳು ನಾಡಿನಾದ್ಯಂತ ಬೆಳಗಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಪಂಡಿತ ಪೂಜಾರ, ನಿಸ್ವಾರ್ಥ ಭಾವನೆಯಿಂದ ಕಾರ್ಯ ಮಾಡಿದರೆ ಯಶಸ್ಸು ದೊರೆಯುತ್ತದೆ ಎನ್ನುವುದಕ್ಕೆ ನಮ್ಮ ಸಂಸ್ಥೆಯೇ ಮಾದರಿ . 28 ವರ್ಷಗಳ ಸುದೀರ್ಘ ಪಯಣದ ವರದಿಯನ್ನು ವಾಚಿಸಿ ಪದವಿಪೂರ್ವ ಕಾಲೇಜುವರೆಗೆ ಪಟ್ಟಣದಲ್ಲಿ ಶಿಕ್ಷಣಮಟ್ಟ ಬೆಳೆದಿದೆ, ಮುಂದೆ ಬರುವ ದಿನಗಳಲ್ಲಿ ಪದವಿ ಕಾಲೇಜನ್ನು ಕೂಡ ಆರಂಭಿಸಲಾಗುವುದು ಊರಿನ ಗಣ್ಯರಿಂದ ಇದಕ್ಕೆ ಪ್ರಯತ್ನವೂ ಮುಂದುವರೆದಿದೆ ಎಂದರು.
ವಿದ್ಯಾರ್ಥಿಗಳಾದ ಗಜಾನಂದ ಚವಲಿ, ಮಲ್ಲಿಕಾರ್ಜುನ ಪೂಜಾರ, ಶ್ರೀಶೈಲ ದಲಾಲ, ಸಂಗಮೇಶ ಜೈನಾಪುರ, ಪೂಜಾ ಅವರಾದಿ, ವಿಶ್ವನಾಥ ದರೂರ, ಅಭಿಷೇಕ ಚಿಮ್ಮಡ, ಪ್ರಜ್ವಲ್ ಜೈನಾಪುರ, ಪ್ರಿಯಾಂಕಾ ಸಿದ್ದಾಪುರ, ಪ್ರಿಯಾಂಕಾ ದೊಡಹಟ್ಟಿ, ಹಣಮಂತ ಪೂಜೇರಿ, ಮುತ್ತುರಾಜ ಪೂಜಾರ, ಪ್ರೇಮಾ ಸಿದ್ದಾಪುರ, ಆನಂದ ಬಿರಾಜನವರ, ದೀಪಾ ಹೊಸಪೇಟಿ, ಲಕ್ಷಿ?? ಗುರುಸಿದ್ದನವರ, ಮುರುಘೇಂದ್ರ ಮೆಣಸಿನಕಾಯಿ, ಪದ್ಮಾವತಿ ಕುಂಬಾಳಿ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ವೇದಿಕೆ ಮೇಲೆ ಕಾಡಯ್ಯ ಗನಾಚಾರಿ, ಎಲ್. ಪಿ. ಪೆಟ್ಲೂರ್, ಧರೆಪ್ಪ ಸಾಂಗ್ಲಿಕರ, ಎಸ್.ಬಿ. ಕೊಣ್ಣೂರ, ಶ್ರೀಮಂತ ಒಂಟಗೋಡಿ, ಗುರುನಾಥ ಹಿಪ್ಪರಗಿ, ಸಿದ್ದು. ಸಿ. ಕೊಣ್ಣೂರ, ಸಿ.ಜಿ.ನಾಯಕ, ಮಹಾಲಿಂಗಯ್ಯ ಗಣಾಚಾರಿ, ಅಶೋಕ ಸಿದ್ದಾಪುರ, ಆರ್. ಎಸ್. ಮಂಟೂರ, ಆಯ್. ಬಿ. ಲೋಕಾಪುರ, ಎಂ. ಡಿ. ಹೊಸಪೇಟಿ, ಎಸ್.ಎಲ್. ಧರೆಪ್ಪನವರ, ಪಿ.ಜಿ.ಸಣಹಟ್ಟಿ, ಎಸ್.ಆಯ್.ಭದ್ ಶೆಟ್ಟಿ, ಸಿಆರ್ಿ ಮಲ್ಲಿಕಾರ್ಜುನ ಅರಬಿ ಮತ್ತು ಶಾಲೆಯ ನಾಗರಿಕ ಮಂಡಳಿ ಹಾಗೂ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಿಕ್ಷಕ ಕೆ.ಎಂ.ದಢೂತಿ ನಿರೂಪಿಸಿ, ಕೆ.ಬಿ.ಕುಂಬಳೆ ಸ್ವಾಗತಿಸಿ,