ವಿದ್ಯಾರ್ಥಿಗಳನ್ನು ಸ್ಯಾನಿಟೈಜರ್ ಮಾಡುವ ಮೂಲಕ ಶಾಲೆಗೆ ಸ್ವಾಗತ
ಲೋಕದರ್ಶನ ವರದಿ
ಕಂಪ್ಲಿ 23: ಪಾಲಕರು ಮಕ್ಕಳನ್ನು ಧೈರ್ಯದಿಂದ ಶಾಲೆಗೆ ಕಳುಸುತ್ತಿರುವುದು ತುಂಬ ಸಂತೋಷವಾಗಿದೆ ಎಂದು ಸಿಆರ್ಪಿ ಜೆ.ಕೆ.ಮಂಜುನಾಥ ಹೇಳಿದರು.
ಇಲ್ಲಿನ ಎಸ್ಜಿವಿಎಸ್ಎಸ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಮತ್ತು ಶಿಕ್ಷಕರು ಸೋಮವಾರ ವಿದ್ಯಾರ್ಥಿಗಳನ್ನು ಸ್ಯಾನಿಟೈಜರ್ ಮಾಡುವ ಮೂಲಕ ಸ್ವಾಗತದಿಂದ ಬರಮಾಡಿಕೊಂಡರು ನಂತರಎಸ್ಜಿವಿಎಸ್ಎಸ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಚಾರ್ಯ ಬಸವರಾಜ್ ಪಾಟೀಲ್ ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆಯಿರಿ ಶಾಲೆಯಲ್ಲಿ 9ನೇತರಗತಿಯ 182ಮಕ್ಕಳಲ್ಲಿ 53ಮಕ್ಕಳು ಹಾಗೂ 10ನೇತರಗತಿಯ 170ಮಕ್ಕಳಲ್ಲಿ 56ಮಕ್ಕಳು ಶಾಲೆಗೆ ಮೊದಲದಿನ ಆಗಮಿಸಿದ್ದಾರೆ. ಪಾಲಕ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಆಸಕ್ತಿತೋರುತ್ತಿದ್ದಾರೆ ಎಂದರು. ಸಹಶಿಕ್ಷಕರಾದ ಶ್ರೀನಿವಾಸ್, ಕೆ.ನಾಗೇಂದ್ರ್ಪ, ಕೆ.ಬಸವರಾಜ್, ಕೆ.ಎಂ.ಹೇಮಯ್ಯ, ರಾಜಕುಮಾರ್ ನಾಯಕ್, ಪ್ರಭಾವತಿ ಇಟಗಿ, ಜಬೀನಾ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ದೇವಸಮುದ್ರ: ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ದಾಖಲಾದ ಒಟ್ಟು 302ಮಕ್ಕಳಲ್ಲಿ ಮೊದಲ ದಿನ 206ಮಕ್ಕಳು ಹಾಜರಾಗಿದ್ದಾರೆ. ಶಿಕ್ಷಕರಾದ ಕೆ.ರಾಮಚಂದ್ರರಾವ್, ಯರಿ್ರಸ್ವಾಮಿ, ಈಶ್ವರನಾಯ್ಕ, ಮಂಜುನಾಥ, ಬಸವನಗೌಡ್ರು, ಮಲ್ಲಯ್ಯ, ಗಾಯತ್ರಿದೇವಿ, ಮಾಲನ್ಬೀ, ರಾಧಾ, ಹುಲಿಗೆಮ್ಮ ಶಿಕ್ಷಕ ಸಿಬ್ಬಂದಿಗಳಿದ್ದರು.