ಭಾರತೀಯ ನಾಗರೀಕ ಸೇವೆಯ ತರಬೇತಿಗೆ ವಿದ್ಯಾರ್ಥಿಗಳ ಹಣ ಭರಿಸುವೆ : ದುಂಡಿಗೌಡ್ರ
ಶಿಗ್ಗಾವಿ17: ಸಮಸ್ಯೆಗಳ ಬಗ್ಗೆನೇ ಚಿಂತಿಸುತ್ತಾ, ಸಾಧನೆಯ ಹಾದಿಯಿಂದ ವಿಮುಖರಾಗದೇ, ಸಮಸ್ಯೆಗಳನ್ನೇ ಸವಾಲುಗಳನ್ನಾಗಿ ತೆಗೆದುಕೊಂಡು ಸತತ ಪ್ರಯತ್ನದಿಂದ ಸಾಧನೆ ಹಾದಿಯಲ್ಲಿ ಮುನ್ನುಗ್ಗಿದಾಗ ಮಾತ್ರ ಸಾಧಕನಾಗಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.
ತಾಲೂಕಿನ ಬನ್ನೂರ ಗ್ರಾಮದಲ್ಲಿ ಎಜುಕೇಶನಲ್ ವೆಲ್ಫೇರ್ ಪೌಂಡೇಶನ್ ಶೈಕ್ಷಣಿಕ ಸಂಘಟನೆ ಉದ್ಘಾಟನಾ ಮತ್ತು ಪ್ರತಿಭಾ ಪ್ರೋತ್ಸಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮದ ಶೈಕ್ಷಣಿಕ ಸರ್ವತೋಮುಖ ಏಳಿಗೆಗಾಗಿ, ಊರಿನ ಸರ್ವ ಸಮುದಾಯದ ಸಮಾನ ಮನಸ್ಕ ಯುವಕರೆಲ್ಲರೂ ಸೇರಿ, ಬರೀ ಶೈಕ್ಷಣಿಕ ಉನ್ನತೀಕರಣದಂತಹ ಉದಾತ್ತ ವಿಚಾರಗಳನ್ನು ಇಟ್ಟುಕೊಂಡು, ಶೈಕ್ಷಣಿಕ ಸವಾಂರ್ಗೀಣ ಅಭಿವೃದ್ಧಿಗಾಗಿ ಅಳಿಲು ಸೇವೆ ಸಲ್ಲಿಸುವ ಈ ಸ್ವಯಂ ಸೇವಾ ತಂಡದ ಕಾರ್ಯ ರಾಜ್ಯಕ್ಕೆ ಮಾದರಿ ಆಗಲಿ ಎಂದು ಹಾರೈಸಿದರು.
ಭಾರತ್ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ದುಂಡಿಗೌಡ್ರ ಮಾತನಾಡಿ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಬರೀ ಪ್ರತಿಭಾವಂತರಾದರೆ ಮಾತ್ರ ಸಾಲದು, ಬಹುಮುಖ ಪ್ರತಿಭೆಗಳಾಗಿ ಹೊರಹೊಮ್ಮಿದಾಗ ಮಾತ್ರ ಅವಕಾಶಗಳು ಲಭಿಸಲು ಸಾಧ್ಯ, ಈ ನಿಟ್ಟಿನಲ್ಲಿ ಬನ್ನೂರು ಪಂಚಾಯಿತಿ ವ್ಯಾಪ್ತಿಯ ಯಾವುದೇ ವಿದ್ಯಾರ್ಥಿಯು, ಭಾರತೀಯ ನಾಗರೀಕ ಸೇವೆಗಾಗಿ ತರಬೇತಿ ಪಡೆಯಲು ಇಚ್ಛಿಸಿದರೆ, ಅಂತಹ ವಿದ್ಯಾರ್ಥಿಗಳ ಸಂಪೂರ್ಣ ಖರ್ಚನ್ನು ನಾನು ಸ್ವಂತ ಹಣದಿಂದ ಬರಿಸುವುದಾಗಿ ಪ್ರಕಟಿಸಿದರು, ಈ ನಿಟ್ಟಿನಲ್ಲಿ ಪುರಸ್ಕಾರ ಪಡೆದಂತ ವಿದ್ಯಾರ್ಥಿಗಳು ಪ್ರಯತ್ನಿಶೀಲರಾದಾಗ ಮಾತ್ರ, ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಿದ್ದಕ್ಕೂ ಸಾರ್ಥಕವಾಗುತ್ತದೆ, ಬರೀ ಶೈಕ್ಷಣಿಕ ಚಿಂತನೆಯನ್ನು ಒಳಗೊಂಡು ಪ್ರಾರಂಭವಾಗುತ್ತಿರುವ ಈ ಪುಟ್ಟ ಸಸಿ, ನಮ್ಮೂರಿನ ಅನೇಕ ವಿದ್ಯಾರ್ಥಿಗಳ ಬಾಳಲ್ಲಿ ಬೆಳಕಾಗಿ, ನೆರಳಾಗಿ, ಬೇರೆ ವಿದ್ಯಾರ್ಥಿಗಳಿಗೂಪ್ರೇರಣೆಯಾಗುವಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸಂಘಟಿಸಲಿ, ನಿಮ್ಮ ಸಂಘಟನೆಯ ಸೇವಾಮನೋಭಾವದ ಸತ್ಕಾರ್ಯ ಸಾಗರೋಪಾದಿಯಲ್ಲಿ ಸಾಗಲಿ, ಶಿಕ್ಷಣಂ ಸರ್ವತ್ರ ಸಾಧನಂ ಎಂಬ ಧ್ಯೇಯವನ್ನು ಇಟ್ಟುಕೊಂಡ, ನಿಮ್ಮ ಮೂಲ ಮಂತ್ರ ಈಡೇರುವಂತಾಗಲಿ ಎಂದು ಶುಭ ಹಾರೈಸಿದರು.
ಬಸವರಾಜ ಮಾಯಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ್ಯೆ ಗಿರಿಜವ್ವ ದೊಡ್ಮನಿ, ವ್ಹಿ ಡಿ ಹೊಸಗೌಡ್ರ ಬಿ.ಶ್ರೀನಿವಾಸ್,ಬಿ.ಆರ್.ಅಂಗಡಿ, ಎಂ.ಬಿ. ಬ್ಯಾಡಗಿ, ಪಿಡಿಒ ಬಿ.ಪಿ.ಪೂಜಾರ್, ಭೀಮಪ್ಪ ಹುಕ್ಕೇರಿ, ಎಜುಕೇಶನಲ್ ವೆಲ್ಫೇರ್ ಪೌಂಡೇಶನ್ ನ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಪ್ರೌಢಶಾಲೆಯ ಸರ್ವ ಗುರು ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವೀರಭದ್ರ್ಪ ಅಗಡಿಯವರು ಸ್ವಾಗತಿಸಿದರು, ಪ್ರವೀಣ್ ಸಿದ್ದಣ್ಣವರ ನಿರೂಪಿಸಿದರು. ಜಾಫರ್ ಇಸುಮಿಯಾನವರ ವಂದಿಸಿದರು.