ಮುದ್ದೆಬಿಹಾಲ್

ಒಳಮೀಸಲಾತಿಗಾಗಿ ಹೋರಾಟ: ಡಿ.10,11 ರಂದು ಬೈಕ್ ಜಾಥಾ ಜನಾಂದೋಲನ

ಒಳಮೀಸಲಾತಿಗಾಗಿ ಹೋರಾಟ: ಡಿ.10,11 ರಂದು ಬೈಕ್ ಜಾಥಾ ಜನಾಂದೋಲನ

ಮುದ್ದೇಬಿಹಾಳ : ಕರ್ನಾಟಕದ 101 ಅನುಸೂಚಿತ ಜಾತಿ ಜನಸಂಖ್ಯಾವಾರು ಒಳಮೀಸಲಾತಿ ಜಾರಿಗೆ ಆಘ್ರಹಿಸಿ ಪ್ರಸ್ತುತ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಒಳಮೀಸಲು ವಿಧೇಯಕ್ ಮಂಡನೆಗಾಗಿ ಆಗ್ರಹಿಸಿ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟ ಬೈಕ್ ಜಾಥಾ ಜನಾಂದೋಲನ ಹಮ್ಮಿಕೊಂಡಿದೆ ಎಂದು ವಕೀಲ ಎಸ್‌.ಎಸ್‌.ಲೊಟಗೇರಿ ಹೇಳಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ತುಳಿತಕ್ಕೊಳಗಾದ ಸಮುದಾಯಗಳಿಗೆ ಸಂವಿಧಾನ ಬದ್ಧ ಹಕ್ಕು ಕೊಡಿ ಎಂದು ಆಗ್ರಹಿಸಿ ಹೋರಾಟ ಮಾಡುತ್ತಿದ್ದರೂ ಜೆಡಿಎಸ್,ಕಾಂಗ್ರೆಸ್,ಬಿಜೆಪಿ ಸರಕಾರಗಳು ಸ್ಪಂದಿಸುತ್ತಿಲ್ಲ ಎಂದು ಹರಿಹಾಯ್ದರು. 

ಮಾದಿಗ ದಂಡೋರ ಕ್ಷೇಮಾಭಿವೃದ್ಧಿ ಹೋರಾಟ ಸಮಿತಿ ತಾಲೂಕಾಧ್ಯಕ್ಷ ತಿಪ್ಪಣ್ಣ ದೊಡಮನಿ(ಮಾದರ),ನ್ಯಾಯವಾದಿ ಕೆ.ಬಿ.ದೊಡಮನಿ ಮಾತನಾಡಿ,ಮುದ್ದೇಬಿಹಾಳ ತಾಲೂಕಿನ ನಾಲತವಾಡಕ್ಕೆ ಡಿ.10 ರಂದು ಮದ್ಯಾಹ್ನ 3ಕ್ಕೆ ಆಗಮಿಸಲಿದ್ದು ಅಲ್ಲಿ 101 ಕುಂಭಕಳಶಗಳೊಂದಿಗೆ ಸ್ವಾಗತಿಸಲಾಗುತ್ತದೆ.ಬಳಿಕ ಬಹಿರಂಗ ಸಭೆ ನಾಲತವಾಡದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.ಡಿ.11 ರಂದು ನಾಗರಬೆಟ್ಟದಿಂದ ಮಲಗಲದಿನ್ನಿ ಕ್ರಾಸ್‌ನಿಂದ ಅಡವಿ ಹುಲಗಬಾಳ ,ಗೋನಳ ಎಸ್‌.ಎಚ್‌.,ವಣಕಿಹಾಳ,ಜಲಪೂರ,ಕವಡಿಮಟ್ಟಿ ಗ್ರಾಮದಿಂದ ಮುದ್ದೇಬಿಹಾಳಕ್ಕೆ 11.30ಕ್ಕೆ ಆಗಮಿಸಲಿದೆ.ಮುದ್ದೇಬಿಹಾಳದ ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದು ಹೇಳಿದರು. 

ಮುಖಂಡ ಡಿ.ಬಿ.ಮುದೂರ ಮಾತನಾಡಿ,ಮೀಸಲಾತಿ ಕೇಳುತ್ತಿರುವ ಜಾತಿಗಳಿಗೆ ನಾವು ಯಾವುದೇ ವಿರೋಧ ಮಾಡುವುದಿಲ್ಲ.ಸಂವಿಧಾನ ಬದ್ಧ ಹಕ್ಕು ಏನಿದೆಯೋ ಅದನ್ನು ನಿಜವಾಗಲೂ ಶೋಷಣೆಗೆ,ತುಳಿತಕ್ಕೆ ಒಳಪಟ್ಟಿದ್ದಾರೆಯೋ ಅವರಿಗೆ ನೀಡಬೇಕು.ಅವರನ್ನು ಮೇಲೆತ್ತಲು ಪ್ರಯತ್ನ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದ್ದು ಅದಕ್ಕಾಗಿ ಈ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮೌನೇಶ ಮಾದರ,ಎಂ.ಸಿ.ಪೂಜಾರಿ,ಜಿ.ಎಚ್‌.ಕಟ್ಟೀಮನಿ,ಆರ್‌.ಬಿ.ಬಸರಕೋಡ,ಯಮನೂರಿ ಮಾದರ ಮೊದಲಾದವರು ಇದ್ದರು. 


ಸುದ್ದಿ ಓದಿ