ರಾಷ್ಟ್ರೀಯ

ಈಶಾನ್ಯ ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ: 8 ಮಂದಿ ಸಾವು

ಕಾಬೂಲ್: ಸೆಪ್ಟೆಂಬರ್ 05 : ಈಶಾನ್ಯ ಅಫ್ಘಾನಿಸ್ತಾನ (Afghanistan) ದಲ್ಲಿ ಸಂಭವಿಸಿದ ಭೂಕಂಪ (Earthquake) ದಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಭಾನುವಾರ ರಾತ್ರಿಯ ಭೂಕಂಪವು ಕುನಾರ್ ಪ್ರಾಂತ್ಯದಲ್ಲಿ ಆರ್ಥಿಕ ಮತ್ತು ಮಾನವ ನಷ್ಟವನ್ನು ಉಂಟುಮಾಡಿದೆ. ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಕುನಾರ್‌ನ ಮಾಹಿತಿ ಮತ್ತು ಸಂಸ್ಕೃತಿಯ ನಿರ್ದೇಶಕ ಮತ್ತು ರಾಜ್ಯಪಾಲರ ವಕ್ತಾರ ಮೌಲಾವಿ ನಜಿಬುಲ್ಲಾ ಹನೀಫ್ ಬಖ್ತರ್ ಸುದ್ದಿ ಸಂಸ್ಥೆಗೆ ತಿಳಿಸಿದರು.

ಈ ಸುದ್ದಿ ಓದಿ: 4,600ಕ್ಕೂ ಹೆಚ್ಚು ಜನ ಶಾಖಹವೆ ಕಾರಣ ಸಾವು

ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಸೋಮವಾರ ಮುಂಜಾನೆ ಪೂರ್ವ ಅಫ್ಘಾನಿಸ್ತಾನದ ಜಲಾಲಾಬಾದ್ ನಗರದ ಬಳಿ 5.3 ತೀವ್ರತೆಯ ಭೂಕಂಪ ದಾಖಲಿಸಿದೆ. ಜೂನ್‌ನಲ್ಲಿ ಪೂರ್ವ ಅಫ್ಘಾನಿಸ್ತಾನದಲ್ಲಿ 1,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಪ್ರಬಲ ಭೂಕಂಪದಿಂದ ಅಫ್ಘಾನಿಸ್ತಾನ ಇನ್ನೂ ತತ್ತರಿಸುತ್ತಿದೆ.

ಸುದ್ದಿ ಓದಿ