ಬೆಳಗಾವಿ

ಕೃಷಿ ಸಖಿಯರಿಂದ ರೈತರಿಗೆ ತಾಂತ್ರಿಕ ಮಾರ್ಗದರ್ಶನ ಅಗತ್ಯ

ಕೃಷಿ ಸಖಿಯರಿಂದ ರೈತರಿಗೆ ತಾಂತ್ರಿಕ ಮಾರ್ಗದರ್ಶನ ಅಗತ್ಯ

ಲೋಕದರ್ಶನ ವರದಿ 


ನೇಸರಗಿ 05 : ಸಂಜೀವಿನಿ-ಕರ್ನಾಟಕ ರಾಜ್ಯಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ, ಬೆಳಗಾವಿ ಮತ್ತು ಐಸಿಎಆರ್‌-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಇವರ ಸಂಯುಕ್ತಾಶ್ರಯದಲ್ಲಿ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಕೃಷಿ ಸಖಿಯರಿಗೆ ಪರಿಸರ ಕೃಷಿ ವಿಧಾನಗಳ ಕುರಿತುಆರು ದಿನಗಳ ಮಾಡ್ಯುಲ್ ಐದರ ತರಬೇತಿ ಕಾರ್ಯಕ್ರಮವನ್ನು ಮತ್ತಿಕೊಪ್ಪದ ಕೃಷಿ ವಿಜ್ಞಾನಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.   

ಖಾನಾಪುರ ಮತ್ತು ಸವದತ್ತಿ ತಾಲೂಕಿನ ಕೃಷಿ ಸಖಿಯರಿಗೆ ಆಯೋಜಿಸಿದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ತರಬೇತಿ ಸಂಯೋಜಕರು ಹಾಗೂ ಕೇಂದ್ರದ ಮಣ್ಣು ವಿಜ್ಞಾನಿ ಎಸ್‌. ಎಮ್‌. ವಾರದಅವರು ಮಾತನಾಡಿ, ಕೃಷಿ ಸಖಿ ಎಂದರೆ ವ್ಯವಸಾಯದಲ್ಲಿ ರೈತರಿಗೆ ಸಹಕಾರ ನೀಡಿಕೃಷಿಯನ್ನು ಲಾಭದಾಯಕವಾಗಿ ನಡೆಯುವಂತೆ ಮಾರ್ಗದರ್ಶನ ಮಾಡುವ ಜವಾಬ್ದಾರಿಯನ್ನು ಹೊಂದಿರುವ ಮಹಿಳೆಯರಿಗೆ ಕೃಷಿ ಸಖಿಯರುಎನ್ನಬಹುದು.  ಕೃಷಿಯನ್ನು ಲಾಭದಾಯಕವಾಗಿ ಮಾಡಲು ಹಾಗೂ ರೈತನ ಆದಾಯವನ್ನು ಹೆಚ್ಚಿಸಲು ರೈತರಿಗೆ ತಂತ್ರಜ್ಞಾನದ ಮಾರ್ಗದರ್ಶನ ಮಾಡುವುದು ಅವಶ್ಯಕವಾಗಿದೆ. 

ಕೃಷಿ ಸಖಿಯರು ರೈತರ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲು ಕೇಂದ್ರದ ವಿಜ್ಞಾನಿಗಳೊಂದಿಗೆ ನಿರಂತರ ಸಂಪರ್ಕಸಾಧಿಸಿ ರೈತರಿಗೆ ಸೇವೆ ಒದಗಿಸಬೇಕೆಂದು ಕರೆ ನೀಡಿದರು.  ಕೃಷಿ ಸಖಿಯರು ರೈತರು ಮತ್ತು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸುವರು ಎಂದು ವಿವರಿಸಿದರು.  


ಸುದ್ದಿ ಓದಿ