ಹಾರೂಗೇರಿಯಲ್ಲಿ ಬಿಆರ್‌ಸಿ, ಬಿಆರ್‌ಪಿ, ಸಿಆರ್‌ಪಿಗಳ ಶೈಕ್ಷಣಿಕ ಪ್ರಗತಿ ಪರೀಶೀಲನಾ ಸಭೆ ಹಾಗೂ ಶೈಕ್ಷಣಿಕ ಸಮಾವೇಶ
ಲೋಕದರ್ಶನ ವರದಿ
ಹಾರೂಗೇರಿ 05 : ಶಿಕ್ಷಣ ಇಲಾಖೆಯ ಯೋಜನೆಗಳು ಶಾಲಾ ಹಂತದಲ್ಲಿ ಕೇವಲ ಆಡಳಿತಾತ್ಮಕವಾಗಿ ಜಾರಿಯಾಗುವುದಕ್ಕಿಂತ, ಅವು ವಿದ್ಯಾರ್ಥಿಗಳ ಕಲಿಕೆಯಲ್ಲಿ ತೋರಬೇಕು. ತರಬೇತಿ, ಕಾರ್ಯಾಗಾರಗಳು ಶಾಲಾ ಕೊಣೆಯಲ್ಲಿ ಜಾರಿಯಾಗಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ಸುಧಾರಣೆ ತಂದಾಗಲೇ ಶೈಕ್ಷಣಿಕ ಪ್ರಗತಿಯ ನಿಜವಾದ ಯಶಸ್ಸು ಎಂದು ಚಿಕ್ಕೋಡಿ ಡಯಟ್ ಪ್ರಾಚಾರ್ಯ ಜೆ.ಪಿ.ತಂಗಡಿ ಹೇಳಿದರು.
ಪಟ್ಟಣದ ಜನತಾ ಶಿಕ್ಷಣ ಸಂಸ್ಥೆಯ ಪ್ರಗತಿ ಪ್ರೌಢಶಾಲೆ ಸಭಾಭವನದಲ್ಲಿ ಸೋಮವಾರ ಉಪನಿರ್ದೇಶಕರು ಆಡಳಿತ, ಸಮಗ್ರ ಶಿಕ್ಷಣ ಚಿಕ್ಕೋಡಿ ಹಾಗೂ ಜಿಲ್ಲಾ ಮತ್ತು ಶಿಕ್ಷಣ ತರಬೇತಿ ಸಂಸ್ಥೆ ಚಿಕ್ಕೋಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಥಣಿ, ಕಾಗವಾಡ ಮತ್ತು ರಾಯಬಾಗ ವಲಯಗಳ ಬಿಆರ್‌ಸಿ, ಬಿಆರ್‌ಪಿ, ಸಿಆರ್‌ಪಿಗಳ ಶೈಕ್ಷಣಿಕ ಪ್ರಗತಿ ಪರೀಶೀಲನಾ ಸಭೆ ಹಾಗೂ ಶೈಕ್ಷಣಿಕ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.