ಬೆಳಗಾವಿ

ಹುಟ್ಟುಹಬ್ಬದಂದು ವನ್ಯಜೀವಿ ಸಂರಕ್ಷಣೆಗೆ ದಿಟ್ಟ ಹೆಜ್ಜೆ

ಹುಟ್ಟುಹಬ್ಬದಂದು ವನ್ಯಜೀವಿ ಸಂರಕ್ಷಣೆಗೆ ದಿಟ್ಟ ಹೆಜ್ಜೆ

ಲೋಕದರ್ಶನ ವರದಿ 


ಯಮಕನಮರಡಿ 05: ಇವತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳು ಹಾಗೂ ಅಪೇಕ್ಸ ಮತ್ತು ಡಿಸಿಸ ಬ್ಯಾಂಕಿನ ನಿರ್ದೇಶಕರಾದ ರಾಹುಲ್ ಅಣ್ಣಾ ಜಾರಕಿಹೊಳಿ ಅವರು ತಮ್ಮ 27ನೇ ಜನ್ಮದಿನದ ಅಂಗವಾಗಿ, ಪರಿಸರ ಮತ್ತು ಸಮಾಜಮುಖಿ ಕಳಕಳಿಯೊಂದಿಗೆ ವನ್ಯಜೀವಿಗಳ ಪೋಷಣೆಗೆ ನೆರವಾಗುವ ಸಂಕಲ್ಪ ಮಾಡಿದ್ದೇನೆ. ಈ ನಿಟ್ಟಿನಲ್ಲಿ, ಯಮಕನಮರಡಿ ವಿಧಾನಸಭಾ ಕ್ಷೇತ್ರದ ಭೂತರಾಮನಹಟ್ಟಿಯಲ್ಲಿರುವ ಉತ್ತರ ಕರ್ನಾಟಕದ ಏಕೈಕ ’ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯ’ ದಲ್ಲಿ ಎರಡು ಚಿರತೆಗಳು ಹಾಗೂ ಒಂದು ಸಿಂಹವನ್ನು ಓಪಚಾರಿಕವಾಗಿ ದತ್ತು ಪಡೆದು, ಅವುಗಳ ವಾರ್ಷಿಕ ನಿರ್ವಹಣೆ ಮತ್ತು ಆರೈಕೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಈ ಹಿಂದೆ, ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಜನ್ಮದಿನದ ಸಂದರ್ಭದಲ್ಲೂ ಇದೇ ಮೃಗಾಲಯದ ಸಿಂಹವೊಂದನ್ನು ದತ್ತು ಪಡೆದು ಪೋಷಿಸಲಾಗುತ್ತಿದ್ದು, ಆ ಪರಂಪರೆಯನ್ನು ಮುಂದುವರಿಸುತ್ತಿರುವುದು ಹೆಮ್ಮೆಯ ಸಂಗತಿ.  ಪರಿಸರ ಸಮತೋಲನ ಕಾಯ್ದುಕೊಳ್ಳುವುದು ಹಾಗೂ ವನ್ಯಜೀವಿ ಸಂಕುಲವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಇಂತಹ ವನ್ಯಜೀವಿ ದತ್ತು ಯೋಜನೆಗಳು ಸಾರ್ವಜನಿಕರಲ್ಲಿ ಪರಿಸರ ಜಾಗೃತಿಯನ್ನು ವೃದ್ಧಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ಸಾರಲಿವೆ ಎಂಬುದು ನನ್ನ ಆಶಯ. ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ ಮಾರುತಿ ಗುಟ್ಟಗುದ್ದಿ ಮಲಗೌಡ ಪಾಟೀಲ್ ಲಗಮಣ್ಣಾ ಪನಗುದ್ದಿ ಆರಿಫ್ ಪಿರಜಾದೆ ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದೀಕ್ ಅಂಕಲಗಿ ವಿಜಯ ತಳವಾರ ಕೆ ಇ.ಬಿ ಮಾಜಿ ಡೈರೆಕ್ಟರಾದ ಈರ​‍್ಪ ಬಂಜೀರಾಮ್ ಶಿವು ಪಾಟೀಲ ಮೃಗಾಲಯದ ಹಿರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಪ್ರಮುಖ ಮುಖಂಡರು ಹಾಗೂ ಯುವ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ