ಶಿಗ್ಗಾವ್

ಗುಂಪುಗಾರಿಕೆ ಮಾಡಿದರೇ ನಿದ್ರಾಕ್ಷಿಣ್ಯ ಕ್ರಮ : ಜಿಲ್ಲಾಧ್ಯಕ್ಷ ಅರುಣಕುಮಾರ

ಗುಂಪುಗಾರಿಕೆ ಮಾಡಿದರೇ ನಿದ್ರಾಕ್ಷಿಣ್ಯ ಕ್ರಮ : ಜಿಲ್ಲಾಧ್ಯಕ್ಷ ಅರುಣಕುಮಾರ

ಶಿಗ್ಗಾವಿ17 : ಶಿಗ್ಗಾವಿ ಸವಣೂರ ವಿಧಾನಸಭಾ ಮತ ಕ್ಷೇತ್ರದ ಉಪ ಚುನಾವಣೆಗೆ ಆಕಾಂಕ್ಷಿ ಅಭ್ಯರ್ಥಿಗಳು ನನಗೆ ಇನ್ನೂ ಯಾವ ಆಕಾಂಕ್ಷಿಯು ಅರ್ಜಿ ಸಲ್ಲಿಸಿಲ್ಲ ಎಂದು ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು. 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಉಪ ಚುನಾವಣೆಯ ಹಿನ್ನಲೆಯಲ್ಲಿ ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಘಟನೆ ಆಗಬೇಕಾಗಿದೆ ಗುಂಪುಗಾರಿಕೆ ಮಾಡಿದರೇ ನಿದ್ರಾಕ್ಷಿಣ್ಯ ಕ್ರಮ ಕೈಗೊಳ್ಳತ್ತೇನೆ ಹಾಗೂ ಮಂಡಲ ಅಧ್ಯಕ್ಷರ ನೇತೃತ್ವದಲ್ಲಿಯೇ ಪಕ್ಷದ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಬೇಕು ಇನ್ನೂ ಯಾವ ಅಭ್ಯರ್ಥಿಯು ಎಂದು ಅಂತಿಮವಾಗಿಲ್ಲ ಯಾರೇ ಅಭ್ಯರ್ಥಿಯಾದರು ಅವರನ್ನು ವಿಜಯಶಾಲಿ ಮಾಡುವುದು ನಮ್ಮ ಕರ್ತವ್ಯ ಅಲ್ಲದೇ ನಮ್ಮ ಭಾಜಪ ಪಕ್ಷದಲ್ಲಿ ನಾವು ನಾವೇ ಏನು ನಿರ್ಣಯ ತೆಗೆದುಕೊಳ್ಳಲು ಬರುವುದಿಲ್ಲ ನಮಗೆ ರಾಜ್ಯ ಮಟ್ಟದ ಹಾಗೂ ದೇಶ ಮಟ್ಟದಲ್ಲಿ ವರಿಷ್ಠರ ತಿರ್ಮಾನ ಅಂತಿಮವಾಗಿರುತ್ತದೆ ಎಂದರು.  

ಉಪ ಚುನಾವಣೆ ನಿಮಿತ್ಯ ಶಿಗ್ಗಾವಿ ತಾಲೂಕ ಅಧ್ಯಕ್ಷರ ಹುದ್ದೆಯಲ್ಲಿ ಅವರನ್ನೇ ಮುಂದುವರಿಸಿಕೊಂಡು ಹೋಗಬೇಕೋ ಅಥವಾ ಚುನಾವಣೆ ಮುಖಾಂತರ ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ನಮ್ಮ ರಾಜ್ಯಾಧ್ಯಕ್ಷರ ಗಮನಕ್ಕೆ ತರುತ್ತೇನೆ ಹಾಗೂ ಯುವ ಮೋರ್ಚಾ ಅಧ್ಯಕ್ಷರ ಹುದ್ದೆಯು ಕಳೆದ 2 ವರ್ಷಗಳಿಂದ ತೆರವಾಗಿದ್ದು ಅದಕ್ಕೂ ಸಹಿತ ಹೊಸದಾಗಿ ಆಯ್ಕೆ ಮಾಡುತ್ತೇನೆ ಎಂದು ಹೇಳಿದರು.  

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಬರಿ ಸಂಸದ ಬೊಮ್ಮಾಯಿಯವರು ಹೆಸರು ಹೇಳುತ್ತಿದ್ದದ್ದು ನೋಡಿದರೇ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರನ್ನು ಕಡೆಗಣಿಸಿದಂತೆ ಭಾಸವಾಗುತ್ತಿತ್ತು. 

ಈ ಸಂದರ್ಭದಲ್ಲಿ ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡಿಗೌಡ್ರ, ಡಾ.ಶೋಭಾ ನಿಸ್ಸೀಮಗೌಡ್ರ, ನಂಜುಡೇಶ ಕಳ್ಳೇರ, ಸಂತೋಷ ಆಲದಕಟ್ಟಿ, ಗಾಣಿಗೇರ, ಬಸವರಾಜ ನಾರಾಯಣಪೂರ, ರೇಣುಕನಗೌಡ ಪಾಟೀಲ ಸುಭಾಸ ಚವ್ಹಾಣ, ರಮೇಶ ವನಹಳ್ಳಿ ಸೇರಿದಂತೆ ಅನೇಕ ಮುಖಂಡರು, ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ