ಗಬ್ಬೇದ್ದು ನಾರುತ್ತಿರುವ ಸಂಕೇಶ್ವರದ ಬೀದಿ, ಗಟಾರಗಳು : ಕಣ್ಮುಚ್ವಿ ಕುಳಿತ ಪುರಸಭೆ ಅಧಿಕಾರಿಗಳಿಗೆ ಜನರ ಹಿಡಿಶಾಪ : ಕುಡಿಯುವ ನೀರಿನ ನಳಗಳಲ್ಲಿ ಬರುತ್ತಿದೆ ಕೊಳಚೆ ನೀರು
ಸಂಕೇಶ್ವರ : ಪಟ್ಟಣದ ಕೆಲವು ಭಾಗಗಳಲ್ಲಿ ರಸ್ತೆಗಳ ಬದಿಯಲ್ಲಿ ಬಿದ್ದಿರುವ ತ್ಯಾಜ್ಯ ಹಾಗೂ ಕೊಳಚೆ ನೀರಿನಿಂದ ತುಂಬಿಕೊಂಡ ಗಟಾರುಗಳ ದುರ್ನಾತದಿಂದ ಬೇಸತ್ತು ಹೋಗಿರುವ ಜನ ಸಂಕೇಶ್ವರದ ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾ ಪರಿಸ್ಥಿತಿ ಎದುರಾಗಿದೆ.

ಹೌದು ಓದುಗರೆ ಸಂಕೇಶ್ವರ ಪಟ್ಟಣ ಎಲ್ಲ ಸೌಕರ್ಯ ಹೊಂದಿದ್ದರೂ ಇಲ್ಲಿನ ಪುರಸಭೆ ಅಧಿಕಾರಿಗಳ ಅಂದಾದುಂದಿ ಕಾರುಬಾರಗಳಿಂದ ಪಟ್ಟಣವು ಗಬ್ಬೆದ್ದು ನಾರುವಂತಾಗಿದೆ. ಪಟ್ಟಣ ಕೆಲ ಪ್ರದೇಶಗಳಲ್ಲಿ ಕೊಳಚೆ ನೀರಿನಿಂದ ತುಂಬಿಕೊಂಡಿರುವ ಗಟಾರಗಳು ದಾರಿ ಹೊಕ್ಕರು ಮುಗುಮಚ್ವಿಕೊಂಡು ಸಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೆ ರಸ್ತೆ ಪಕ್ಕದಲ್ಲಿ ತ್ಯಾಜ್ಯ ಬಿದ್ದು ಸೊಳ್ಳೆಗಳ ಸಾಮ್ರಾಜ್ಯ ನಿರ್ಮಾಣವಾಗಿದ್ದರೂ ಪುರಸಭೆ ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ತಮ್ಮ ಪ್ರದೇಶದ ನಾಗರಿಕರು ಗಟಾರು ಸ್ವಚ್ಚತೆ ಮಾಡುವಂತೆ ಹಾಗೂ ರಸ್ತೆಗಳನ್ನು ಸ್ವಚ್ಚತ ಮಾಡುವಂತೆ ಪುರಸಭೆಯವರಿಗೆ ವಿನಂತಿಸಿಕೊಂಡರು ಅಧಿಕಾರಿಗಳು ಮಾತ್ರ ಇದರ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ.
ಪಟ್ಟಣದ ಕೆಲವು ಪ್ರದೇಶದ ಕುಡಿಯುವ ನೀರಿನ ನಳಗಳಿಗೆ ಕಳೆದ 15 ದಿನಗಳಿಂದ ಕೊಳಚೆ ನೀರು ಬರುತ್ತಿದ್ದು, ಇದರ ಕುರಿತು ಎಚ್ವರಿಕೆ ವಹಿಸದೆ ಪುರಸಭೆ ಅಧಿಕಾರಿಗಳ ವಿರುದ್ದ ಅಲ್ಲಿನ ನಾಗರಿಕರು ಹಿಡಿಶಾಪ ಹಾಕುವಂತಾಗಿದೆ.
ಪಟ್ಟಣದಲ್ಲಿ ಜನರಿಗೆ ಇಷ್ಟೇಲ್ಲಾ ಸಮಸ್ಯೆಗಳು ಆಗುತ್ತಿದ್ದರೂ ಇದರ ಬಗ್ಗೆ ಕಿಂಚಿತ್ತೂ ಎಚ್ವರಿಕೆ ವಹಿಸದ ಅಧಿಕಾರಿಗಳು ಈ ಸಮಸ್ಯೆಗಳಿಗೆ ಹಾಗೂ ತಮಗು ಯಾವ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವದು ನಾಗರಿಕೆ ಕೆಂಗಣ್ಣಿಗೆ ಗುರಿ ಮಾಡಿದೆ.
ತ್ಯಾಜ್ಯ ವಿಲೇವಾರಿಗೆ ವಾಹನಗಳು ಮನೆ ಮನೆಗೆ ಸರಿಯಾಗಿ ಸಂಚರಿಸದ ಹಿನ್ನೆಲೆಯಲ್ಲಿ ತ್ಯಾಜ್ಯ ತಂದು ಒಂದು ಕಡೆ ಹಾಕಿದ ಸಾಮಾನ್ಯ ಜನರ ಮೇಲೆ ಪುರಸಭೆ ಅಧಿಕಾರಿಗಳು ಕೇಸು ದಾಖಲಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಅಸ್ವಸ್ಥತೆಯ ಅಗರವಾಗಿರುವ ಸಂಕೇಶ್ವರ ಪಟ್ಟಣದಲ್ಲಿ ಯಾವದನ್ನು ಸರಿಯಾಗಿ ನಿಭಾಹಿಸದ ಅಧಿಕಾರಿಗಳು ಪಟ್ಟಣದಲ್ಲಿನ ಸಮಸ್ಯೆಗಳನ್ನು ಆಲಿಸದೆ ಆಫೀಸನಲ್ಲಿ ಕುಳಿತು ಕಾಲಹರಣ ಮಾಡುತ್ತಿರುವದು ಎಷ್ಟು ಸರಿ ಎಂದು ಜನ ಪ್ರಶ್ನಿಸುವಂತಾಗಿದೆ.
ಪಟ್ಟಣದಲ್ಲಿ ಸ್ವಚ್ಚತಾ ಕಾರ್ಯವಾಗುತ್ತಿಲ್ಲ, ಪುರಸಭೆ ಅಧಿಕಾರಿಗಳು ಸರಿಯಾಗಿ ವ್ಯವಸ್ಥೆ ಮಾಡುತ್ತಿಲ್ಲ ಎಂದು ಈ ಹಿಂದೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರು ಶಾಸಕ ನಿಖಿಲ್ ಕತ್ತಿ ಅವರ ಸಮ್ಮುಖದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆಯನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ.