ಮಹಲಿಂಗಪುರ

ಕಸಾಪ ನಿಂದ ಕಥಾ ಸಂಕಲನ ಪುಸ್ತಕಾವಲೋಕನ ಕಾರ್ಯಕ್ರಮ ; ರೋಗಗಳಿಗಿಂತ ಮನುಷ್ಯನ ದ್ವೇಷ, ಅಸೂಯೆಗಳು ಅಪಾಯಕಾರಿ : ಕಲ್ಲೇಶ ಕುಂಬಾರ

ಕಸಾಪ ನಿಂದ ಕಥಾ ಸಂಕಲನ ಪುಸ್ತಕಾವಲೋಕನ ಕಾರ್ಯಕ್ರಮ ; ರೋಗಗಳಿಗಿಂತ ಮನುಷ್ಯನ ದ್ವೇಷ, ಅಸೂಯೆಗಳು ಅಪಾಯಕಾರಿ : ಕಲ್ಲೇಶ ಕುಂಬಾರ

ಲೋಕದರ್ಶನ ವರದಿ 

ಮಹಾಲಿಂಗಪುರ 10: ಕಥೆ ಇದು ಸೃಜನಶೀಲ ಪ್ರಕ್ರಿಯೆ. ಕಥೆ ಬರೆಯುವವರಿಗೆ ಸಂಯಮ, ತಾಳ್ಮೆ ಅವಶ್ಯಕ. ಕತೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ದೀಡೆಕರೆ ಜಮೀನ ಕೃತಿಯಲ್ಲಿ ಬರುವ ಕತೆಗಳು ವಿಶಿಷ್ಟವಾಗಿವೆ. ಗ್ರಾಮೀಣ ಸೊಗಡು, ಅಲ್ಲಿಯ ಜೀವನ, ತಲ್ಲಣ ಅಷ್ಟೇ ಅಲ್ಲ, ರೋಗಗಳಿಗಿಂತ ಮನುಷ್ಯನ ದ್ವೇಷ, ಅಸೂಯೆಗಳು ಅಪಾಯಕಾರಿ ಎಂಬ ಸತ್ಯವನ್ನು ಬಿಚ್ಚಿಡುತ್ತವೆ ಎಂದು ತೇರದಾಳದ ಕತೆಗಾರ ಕಲ್ಲೇಶ ಕುಂಬಾರ ಹೇಳಿದರು. 

     ಮಹಾಲಿಂಗಪುರದ ಹಿರಿಯ ಸಾಹಿತಿಗಳಾದ ಗುರುರಾಜ ಖಾಸನೀಸ ಅವರ ನಿವಾಸದಲ್ಲಿ ರವಿವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ತಾಲೂಕು ಘಟಕ ರಬಕವಿ-ಬನಹಟ್ಟಿ, ವಲಯಗಳು ತೇರದಾಳ ಮಹಾಲಿಂಗಪುರ ಇವರ ಸಂಯುಕ್ತಾಕ್ಷರದಲ್ಲಿ ನಡೆದ ಪುಸ್ತಕಾವಲೋಕನ. 16 ಕಾರ್ಯಕ್ರಮದಲ್ಲಿ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಸಿಎಓ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ದೀಡೆಕರೆ ಜಮೀನು ಕೃತಿ ಅವಲೋಕಿಸಿ ಮಾತನಾಡಿದರು. 

    ಹಿರಿಯ ಸಾಹಿತಿ ಗುರುರಾಜ ಖಾಸನೀಸ ಅಧ್ಯಕ್ಷತೆ ವಹಿಸಿ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೇಕು. ಶೆಲ್ಲಿಕೇರಿಯವರ ದೀಡೆಕರೆ ಜಮೀನು ಕೃತಿ ಗಮನಾರ್ಹ ಕಥೆಗಳಿಂದ ಓದುಗರನ್ನು ಸೆಳೆಯುತ್ತದೆ. ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಸದಾ ಸಹಕಾರ ನೀಡಲಾಗುವುದು ಎಂದರು. 

    ಕೃತಿಕಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ಮಾತನಾಡಿ, ದೀಡೆಕರೆ ಜಮೀನು ಇದು ನನ್ನ ಮೊದಲ ಕಥಾ ಸಂಕಲನವಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿಮರ್ಶಕರ, ಓದುಗರ ಮೆಚ್ಚುಗೆ ಗಳಿಸಿರುವುದಕ್ಕೆ ಸಂತಸವಾಗಿದೆ. ಕಾದಂಬರಿ ಬರೆಯಲು ತಾವು ನಿರ್ಧರಿಸಿರುವ ಬಗ್ಗೆ ಹೇಳಿದರು. 

    ಬನಹಟ್ಟಿಯ ವಿನೋದ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ, ಮಕ್ಕಳ ಸಾಹಿತಿ ಜಯವಂತ ಕಾಡದೇವರ, ಶಿವಾನಂದ ದಾಶಾಳ, ನಿವೃತ್ತ ಉಪನ್ಯಾಸಕ ಎಂ.ಎಸ್‌.ಬದಾಮಿ, ಜಿ.ಎಸ್‌. ವಡಗಾಂವಿ ಮಾತನಾಡಿದರು. 

    ಕಸಾಪ ತಾಲೂಕಾಧ್ಯಕ್ಷ ಮ.ಕೃ.ಮೇಗಾಡಿ ಪುಸ್ತಕಾವಲೋಕನ ಪ್ರತಿ ತಿಂಗಳು ಯಶಸ್ವಿಯಾಗಿ ನೆರವೇರುತ್ತಿದೆ. ಕಸಾಪ ಕಾರ್ಯಚಟುವಟಿಕೆಗಳು ನಿರಂತರ ನಡೆಯಲು ಪ್ರೋತ್ಸಾಹ, ಹಿರಿಯ ಸಾಹಿತಿಗಳು, ಕನ್ನಡ ಮನಸ್ಸುಗಳು ಭಾಗವಹಿಸುತ್ತಿರುವುದು ಕಾರ್ಯಕ್ರಮ ಆಯೋಜಿಸಲು ಸಹಕಾರಿಯಾಗಿದೆ ಎಂದರು. 

      ಕಸಾಪ ಮಹಾಲಿಂಗಪುರ ವಲಯಾಧ್ಯಕ್ಷ ಬಸವರಾಜ ಮೇಟಿ ಪ್ರಾರ್ಥಿಸಿದರು. ತೇರದಾಳ ಕಸಾಪ ವಲಯಾಧ್ಯಕ್ಷ ಗಂಗಾಧರ ಮೋಪಗಾರ ನಿರೂಪಿಸಿದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಮಹೇಶ ಮನ್ನಯ್ಯನವರಮಠ ವಂದಿಸಿದರು. 

     ಮಹಾಲಿಂಗಪುರ ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್‌. ಗೊಂಬಿ, ಶ್ರೀಶೈಲಪ್ಪಣ್ಣ ಉಳ್ಳಾಗಡ್ಡಿ, ರಬಕವಿ ವಿನೋದ ಸಾಹಿತಿ ಯಶವಂತ ವಾಜಂತ್ರಿ, ಮೃತ್ಯುಂಜಯ ರಾಮದುರ್ಗ, ಗೋಲೇಶ ಅಮ್ಮಣಗಿ, ಕಲ್ಲಪ್ಪಣ್ಣ ಚಿಂಚಲಿ, ಸದಾಶಿವ ದೊಡ್ಡಪ್ಪಗೋಳ, ಎಸ್‌.ಎಂ.ಅಣ್ಣಿಗೇರಿ, ಅನೀಲ ಗುನ್ನಾಪುರ, ಪತ್ರಕರ್ತ ರಾಮು ಕಾಡಾಪುರ, ಕೆ.ಎಸ್‌.ರಂಗಸ್ವಾಮಿ, ಎಸ್‌.ಆರ್‌.ರಾವಳ ಪಾಲ್ಗೊಂಡಿದ್ದರು. 


ಸುದ್ದಿ ಓದಿ