ಪಂಚಮಸಾಲಿ ಹೋರಾಟ ವೇಳೆ ಕಲ್ಲು ತೂರಾಟ : ಲಾಠಿ ಚಾರ್ಜ್, ಸೌಧಕ್ಕೆ ನುಗ್ಗಲು ಯತ್ನ ಹಲವು ನಾಯಕರ ಬಂಧನ
ಬೆಳಗಾವಿ : ಬೆಳಗಾವಿಯಲ್ಲಿ ಮಂಗಳವಾರ ನಡೆದ ಪಂಚಮಸಾಲಿ ಮೀಸಲಾತಿ 2ಎ ಹೋರಾಟದ ವೇಳೆ ಪೊಲೀಸರ ವಾಹನಗಳ ಮೇಲೆ ಕಲ್ಲು ತೂರಾಟ ನಡೆದು ಹೋರಾಟಗಾರರು ಸುವರ್ಣ ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿದ ಹೋರಾಟಗಾರ ಮೇಲೆ ಪೊಲೀಸರು ಲಾಠಿ ಚಾರ್ಜ ಮಾಡಿದ್ದು, ಹಲವಾರು ಪೊಲೀಸರು ಮತ್ತು ಹೋರಾಟಗಾರರು ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ ಕೂಡಲಸಂಗಮ ಶ್ರೀ, ಯತ್ನಾಳ, ಬೆಲ್ಲದ ಸೇರಿದಂತೆ ಕೆಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ಮಧ್ಯಾಹ್ನ ವೇಳೆ ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, ಬಸವರಾಜ ಪಾಟೀಲ ಯತ್ನಾಳ, ಲಕ್ಷಿö್ಮÃ ಹೆಬ್ಬಾಳಕರ ನೇತೃತ್ವದಲ್ಲಿ ಸುವರ್ಣ ಸೌಧ ಮುತ್ತಿಗೆ ಕರ‍್ಯಕ್ರಮ ನಡೆಯಿತು. ಪಂಚಮಸಾಲಿ ಹೋರಾಟಗಾರರು ವಿಧಾನಸೌಧ ಮುತ್ತಿಗೆ ಹಾಕಲು ಹೊರಟಾಗ ಈ ಘಟನೆ ನಡೆದಿದೆ. 10 ಸಾವಿರಕ್ಕೂ ಅಧಿಕ ಪಂಚಮಸಾಲಿ ಹೋರಾಟಗಾರರು ಹೋರಾಟದಲ್ಲಿ ಭಾಗಿಯಾಗಿದ್ದರು.
ಸುವರ್ಣ ಸೌಧಕ್ಕೆ ಸಾವಿರಾರು ಪಂಚಮಸಾಲಿ ಹೋರಾಟಗಾರರು ನುಗ್ಗಲು ಯತ್ನಿಸಿದಾಗ ಪೊಲೀಸರು ಹೋರಾಟಗಾರರನ್ನು ತಡೆಹಿಡಿದರು. ಬಳಿಕ ಕೆಲವು ಪೊಲೀಸ ಸೇರಿದಂತೆ ಕೆಲವು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವಾಗ ಪೊಲೀಸರು ಪ್ರತಿಭಟನಾರರ ಮೆಲೆ ಲಾಠಿ ಚಾರ್ಜ ಮಾಡಿದ್ದಾರೆ.
ಕೊಂಡಸಕೊಪ್ಪದಿAದ ಹೊರಟ ಪ್ರತಿಭಟನಾ ರ‍್ಯಾಲಿಯು ರಾಷ್ಟಿöçÃಯ ಹೆದ್ದಾರಿ ಸಂಪೂರ್ಣ ಸ್ಥಗಿತ ಮಾಡಲಾಗಿತ್ತು. ಸದ್ಯ ಸುವರ್ಣ ಸೌಧದ ಎದುರು ಪೋಲಿಸ್ ಬಿಗಿ ಬಂದೂಬಸ್ತ ಮಾಡಲಾಗಿದೆ. ಜಯ ಮೃತುಂಜಯ ಸ್ವಾಮೀಜಿ, ಬಸವನಗೌಡ ಯತ್ನಾಳ, ಈರಣ ಕಡಾಡಿ, ಅರವಿಂದ ಬೆಲ್ಲದ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಸರ್ಕಾರದ ವಿರುದ್ದ ಧಿಕಾರ ಕೂಗಿ ಪಂಚಮಸಾಲಿ ಮುಖಂಡರು ಪ್ರತಿಭಟನೆ ಮುಂದೆ ವರೆಸಿದ್ದಾರೆ.