ಮಹಲಿಂಗಪುರ

ಸಾಮಾಜಿಕ ಜಾಲತಾಣಗಳಿಂದ ದೂರವಿರಿ : ಪ್ರವೀಣ ಬೀಳಗಿ

ಸಾಮಾಜಿಕ ಜಾಲತಾಣಗಳಿಂದ ದೂರವಿರಿ : ಪ್ರವೀಣ ಬೀಳಗಿ

ಮಹಾಲಿಂಗಪುರ 04: ಸಾಮಾಜಿಕ ಜಾಲತಾಣಗಳು ಅತ್ಯುಪಯುಕ್ತ ನಿಜ ಆದರೆ ಅಷ್ಟೇ ಅಪಾಯಕಾರಿ ಎಂಬುದನ್ನು ಯಾರೂ ಮರೆಯಬಾರದು ಎಂದು ಪಿ ಎಸ್ ಐ ಪ್ರವೀಣ ಬೀಳಗಿ ಹೇಳಿದರು.  

ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎಮರ್ಜೆನ್ಸಿ ಸಹಾಯ ವಾಣಿ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ವಿದ್ಯಾರ್ಥಿ ಜೀವನ ಬಂಗಾರವಿದ್ದ ಹಾಗೆ ಎಂಬದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೆಣಟಿಜಜಜಿಟಿಜಜಳ್ಳಬೇಕು, ಚೆನ್ನಾಗಿ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಓದಿನಿಂದ ದೂರವಾಗಿ ವಾಟ್ಸ್‌ ಆಪ್, ಫೇಸ್ಬುಕ್, ಇನ್ಸ್ಟಾ ಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಇಡೀ ಬದುಕನ್ನೇ ಕಳೆದುಕೊಳ್ಳುತ್ತಿರುವುದು ದೊಡ್ಡ ದುರಂತ.  ಅದರಲ್ಲಿಯೂ ವಿದ್ಯಾರ್ಥಿನಿಯರು ಈ ಸಾಮಾಜಿಕ ಜಾಲತಾಣಗಳ ಸುಳಿಯಲ್ಲಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಂಡ ಸಾಕಷ್ಟು ಉದಾಹರಣೆ ನಮ್ಮ ಮುಂದಿವೆ ಹಾಗಾಗಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ದೂರವಿದ್ದು ನಿರಂತರ ಓದಿನಲ್ಲಿ ತಲ್ಲೀನರಾಗಿರಬೇಕು. ವಿದ್ಯಾರ್ಥಿನಿಯರು ಯಾವುದೇ ಅಪಾಯಕಾರಿ ತುರ್ತು ಸಂದರ್ಭದಲ್ಲಿ 112 ಮತ್ತು 1930 ಸಂಖ್ಯೆಗೆ ಕರೆ ಮಾಡಿ ತಕ್ಷಣ ಸಹಾಯ ಪಡೆಯಬಹುದು ಎಂದು ಸಲಹೆ ನೀಡಿದರು. 

ಪ್ರಾಂಶುಪಾಲರಾದ ಎಸ್ .ಆರ್ .ನಾಯಕೊಡಿ, ಉಪನ್ಯಾಸಕರಾದ ಎಸ್‌.ಸಿ.ಬೊಮ್ಮಣ್ಣವರ,  ಘಂಟಿಮಠ, ಪೊಲೀಸ್ ಸಿಬ್ಬಂದಿಗಳಾದ ಜೆ,ಜೆ ಪಾಟೀಲ, ಬಸವರಾಜ ದೇಸಾಯಿ, ವಿದ್ಯಾರ್ಥಿಗಳು ಇದ್ದರು. 

ಸುದ್ದಿ ಓದಿ