ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ: ಸೃಷ್ಟಿ ದುಂಡಪ್ಪ ತಿಗಡಿ ಪ್ರಥಮ
ಲೋಕದರ್ಶನ ವರದಿ
ಬೆಳಗಾವಿ 1: ಮಹಾತ್ಮ ಗಾಂಧೀಜಿ ಅವರ 157ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಬೆಳಗಾವಿಯ ಸರ್ಕಾರಿ ಪ್ರೌಢಶಾಲೆ ಕೆ.ಎಸ್.ಆರಿ್ಪ. ಮಚ್ಛೆ ಶಾಲೆಯ ವಿದ್ಯಾರ್ಥಿನಿ ಸೃಷ್ಟಿ ದುಂಡಪ್ಪ ತಿಗಡಿ ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಪದವಿ/ಸ್ನಾತಕೋತ್ತರ ಪದವಿ ವಿಭಾಗದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಸವರಾಜ ಹರಕಂಗಿ ತೃತೀಯ ಸ್ಥಾನ ಪಡೆದಿದ್ದಾರೆ. ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಸೃಷ್ಟಿ ದುಂಡಪ್ಪ ತಿಗಡಿ ಪ್ರಥಮ, ಎಸ್.ಆರ್.ಎಂ.ಆರ್.ಎಸ್. ನಂದಗಡದ ಅಪೂರ್ವ ಎಚ್.ಎ. ದ್ವಿತೀಯ ಹಾಗೂ ಕಾದರವಳ್ಳಿಯ ನಂದಿನಿ ಮಡ್ಡಿಮನಿ ತೃತೀಯ ಸ್ಥಾನ ಪಡೆದರು.
ಪದವಿಪೂರ್ವ ವಿಭಾಗದಲ್ಲಿ ಎಸ್.ಜಿ.ಎಸ್.ವಿ. ಪಿಯು ಕಾಲೇಜು ಬೈಲಹೊಂಗಲದ ಲಕ್ಷ್ಮೀ ಆರ್. ದಾಂಡೇಲಿ ಪ್ರಥಮ, ಸರ್ಕಾರಿ ಪಿಯು ಕಾಲೇಜು ವಡಗಾವಿಯ ಸಂಧ್ಯಾ ಕದಮ ದ್ವಿತೀಯ ಹಾಗೂ ಜ್ಯೋತಿ ಪಿಯು ಕಾಲೇಜು ಬೆಳಗಾವಿಯ ಸ್ನೇಹಲ್ ಎಂ. ಕಲಖಾಂಬ ತೃತೀಯ ಸ್ಥಾನ ಪಡೆದರು. ಶಾರದಾ ಕೋರೆ ಪಿಯು ಕಾಲೇಜು ಅಂಕಲಿಯ ಅಂಕಿತಾ ಕಮತೆ ಕೂಡ ಸ್ಥಾನ ಪಡೆದಿದ್ದಾರೆ.
ಪದವಿ/ಸ್ನಾತಕೋತ್ತರ ವಿಭಾಗದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಸವರಾಜ ಹರಕಂಗಿ ಪ್ರಥಮ, ಅದೇ ವಿಶ್ವವಿದ್ಯಾಲಯದ ಸೌಮ್ಯ ಹುಲಿಕವಿ ದ್ವಿತೀಯ ಹಾಗೂ ಮಲ್ಲಿಕಾರ್ಜುನ ಲಮಾಣಿ ತೃತೀಯ ಸ್ಥಾನ ಪಡೆದಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅ.2ರಂದು ಬೆಳಗಾವಿ ನಗರದ ಟಿಳಕವಾಡಿಯ ವೀರಸೌಧದಲ್ಲಿ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು.