ಮಹಲಿಂಗಪುರ

ಸ್ಟೇಟ್ ಬ್ಯಾಂಕ್ ಜಗತ್ತಿಗೆ ಮಾದರಿ ಹಿ ರಮೇಶ ಪವಾರ

ಸ್ಟೇಟ್ ಬ್ಯಾಂಕ್ ಜಗತ್ತಿಗೆ ಮಾದರಿ ಹಿ ರಮೇಶ ಪವಾರ
ಮಹಾಲಿಂಗಪುರ : ಸ್ಥಳೀಯ ಎಸ್‌ಬಿಐ ನಲ್ಲಿ ನಡೆದ ಬ್ಯಾಂಕಿನ 66ನೇ ವಾರ್ಷಿಕೋತ್ಸವವನ್ನು ಗುತ್ತಿಗೆದಾರ ಶಶಿಧರ ನಕಾತಿ ಅವರು

ಮಹಾಲಿಂಗಪುರ 04: ಭಾರತೀಯ ಸ್ಟೇಟ್ ಬ್ಯಾಂಕ್ ಸಾರ್ವಜನಿಕರೊಂದಿಗೆ ಉತ್ತಮವಾಗಿ ವ್ಯವಹರಿಸಿ, ಜಗತ್ತಿನ ಜನರ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬಾಗಲಕೋಟ್ ಸ್ಟೇಟ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ರಮೇಶ ಪವಾರ ಹೇಳಿದರು.  

ನಗರದಲ್ಲಿ ನಡೆದ ಬ್ಯಾಂಕಿನ 66ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದರು. ಭಾರತ ಸೇರಿದಂತೆ ವಿದೇಶಗಳಲ್ಲಿ ಒಟ್ಟು 24ಸಾವಿರ ಶಾಖೆಗಳನ್ನು ಹೊಂದಿ ಉತ್ತಮ ವ್ಯವಹಾರ ನಡೆಸುತ್ತಿದೆ. ಆದ್ದರಿಂದ ಸ್ಥಳೀಯ ಶಾಖೆ ಸಾರ್ವಜನಿಕರೊಂದಿಗೆ ಉತ್ತಮವಾಗಿ ವ್ಯವರಿಸುತ್ತಿದ್ದು, ಎಲ್ಲರಿಗೂ ಶೀಘ್ರ ಸೇವೆ ದೊರಕುವಂತಾಗಲು ಬ್ಯಾಂಕಿಗೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಿಸಲಾಗುವುದು ಎಂದು ಗ್ರಾಹಕರಿಗೆ ಭರವಸೆ ನೀಡಿದರು.ಆದ್ದರಿಂದ ಪ್ರತಿಯೊಬ್ಬ ಭಾರತೀಯನೂ ಈ ಬ್ಯಾಂಕಿನ ಸದಸ್ಯನಾಗಿ ತಂತ್ರಜ್ಞಾನದ ಸದ್ಬಳಕೆಯೊಂದಿಗೆ, ಸದುಪಯೋಗ ಪಡೆದುಕೊಳ್ಳುವಂತೆಯೂ ಕರೆ ನೀಡಿದರು.  

ಶಾಖೆಯ ವ್ಯವಸ್ಥಾಪಕರಾದ ಕಮಲಸಿಂಗ್ ಕಿಚ್ಚಿ ಅವರು, ಸ್ವಾಗತಿಸಿ, ಎಸ್‌ಬಿಐ ದೇಶದ ಆರ್ಥಿಕ ವ್ಯವಸ್ಥೆಯ ಪ್ರತಿಬಿಂಬವಾಗಿದೆ. ಈ ಕಾರಣದಿಂದ ತಾವೂ ಕೂಡ ನಮ್ಮ ಬ್ಯಾಂಕಿನ ಸಕ್ರೀಯ ಸದಸ್ಯರಾಗಿ ಅನೇಕ ಸೌಲಭ್ಯ ಪಡೆಯಲು ಅವರು ಕರೆ ನೀಡಿದರು. ಗ್ರಾಹಕರಾದ ರಾಜು ತಾಳಿಕೋಟಿ, ವೈ.ಬಿ.ತಿರಕಣ್ಣವರ, ಹೀರಾರಾಮ ಝಾಠ, ಶಂಕರ ಪಾತ್ರೋಟ, ಸಿಬ್ಬಂದಿಯವರಾದ ಪ್ರಕಾಶ ನಂದಗಾಂವಕರ, ಆನಂದ ಚಿಟಗುಬ್ಬಿ, ಶಿವಯ್ಯ ಮಠದ, ಯಶವಂತ ಕರಾಡೆ, ನಾಗಪ್ಪ ಹರಿಜನ, ಸಾಗರ ಹಲಸಪ್ಪಗೋಳ, ತುಕಾರಾಮ ರಾಠೋಡ, ಪತ್ರಕರ್ತರು ಹಾಗೂ ರೈತರು ಉಪಸ್ಥಿತರಿದ್ದರು. 

ಸುದ್ದಿ ಓದಿ