ಸಾಧನೆಗೆ ಬಡತನದ ಪಿಡಗು ಅಡ್ಡಲಾದರೂ ಅದನ್ನೇ ಸೇತುವೆ ಮಾಡಿಕೊಂಡ ಸಾಧಕಿ : ತಂದೆ ತೀರಿಹೋದರು ಆ ಸ್ಥಾನದಲ್ಲಿ ನಿಂತು ಸಾಥ್ ನೀಡಿದ ತಾಯಿ

ಸಾಧನೆಗೆ ಬಡತನದ ಪಿಡಗು ಅಡ್ಡಲಾದರೂ ಅದನ್ನೇ ಸೇತುವೆ ಮಾಡಿಕೊಂಡ ಸಾಧಕಿ : ತಂದೆ ತೀರಿಹೋದರು ಆ ಸ್ಥಾನದಲ್ಲಿ ನಿಂತು ಸಾಥ್ ನೀಡಿದ ತಾಯಿ

ಬಡತನದಲ್ಲಿ ನೊಂದು ಬೆಂದರೂ ಸಾಧನೆಯ ಛಲ ಬಿಡದ ಸವದತ್ತಿಯ ಸಾಧಕಿ : ತಂದೆ ಇಲ್ಲದೆ ಅನಾಥಳಾಗಿ ಆರ್ಥಿಕ ಸಂಕಷ್ಟದಲ್ಲೂ ಸಾಧನೆ

ಪಾರೇಶ ಭೋಸಲೆ

ಬೆಳಗಾವಿ : ಬಡತನ ಎಂಬ ಪಿಡುಗು ಅಡ್ಡಲಾಗಿ ನಿಂತರೂ ಅದನ್ನೆ ಸೇತುವೆಯನ್ನಾಗಿಸಿಕೊಂಡು, ರಾಜ್ಯವೇ ತನ್ನತ್ತ ತಿರುಗಿ ನೋಡುವ ಹಾಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿ ತನ್ನ ತಂದೆ ತೀರಿಕೊಂಡರು ತಾಯಿಯ ಆಸರೆಯಲ್ಲಿ ಉತ್ತಮ ಪ್ರತಿಭೆಯಾಗಿ ಹೊರಹೊಮ್ಮಿರುವ ವಿದ್ಯಾರ್ಥಿನಿಯು ಆರ್ಥಿಕ ತೊಂದರೆ ಎದುರಾಗಿ ಶಿಕ್ಷಣ ಕಲೆಯುವದನ್ನು ನಿಲ್ಲಿಸುವ ಹಂತ ಎದುರಾದರು ತನ್ನ ವಿದ್ಯಾಭ್ಯಾಸ ಮುಂದು ವರೆಸಿ ಸಾಧನೆ ಮಾಡಿದ್ದಾಳೆ.

   ಶಿಕ್ಷಣ ಪಡೆಯಲು ಎಲ್ಲ ವ್ಯವಸ್ಥೆ ಇದ್ದರೂ ಕೆಲವು ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಸಾಧ್ಯವಾಗದ ಇಂದಿನ ಸಂದರ್ಭದಲ್ಲಿ ತಂದೆ ತೀರಿಹೋಗಿ ತಾಯಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುವವರ ಪುತ್ರಿಯೋರ್ವಳು ರಾಜ್ಯದಲ್ಲಿಯೇ ಕೀರ್ತಿ ಪತಾಕೆ ಹಾರಿಸುವ ಮೂಲಕ ಬೆಳಗಾವಿ ಜಿಲ್ಲೆಗೆ ಕಿರ್ತಿ ತಂದಿರುವದು ಜಿಲ್ಲೆಯ ಜನತೆ ಸಂತಸ ಪಡುವಂತಾಗಿದೆ.

  ಹೌದು ಓದುಗರೇ  ಜಿಲ್ಲೆಯ ಸವದತ್ತಿಯ ಶ್ರೀ ಕುಮಾರೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಸವದತ್ತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಕು. ಅನುಪಮಾ ಹಿರೇಹೊಳಿ ಇವಳು ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 625 ಪೈಕಿ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮಸ್ಥಾನ ಪಡೆದಿದ್ದಾಳೆ. ಅಲ್ಲದೆ ಬೆಳಗಾವಿ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹಾರಿಸುವ ಮೂಲಕ ಬೆಳಗಾವಿ ಯಾವದರಲ್ಲೂ ಕಡಿಮೆ ಇಲ್ಲ ಎನ್ನುವದನ್ನು ಸಾಬೀತು ಮಾಡಿದ್ದಾಳೆ. 

  ಕರ್ನಾಟಕ ರಾಜ್ಯಕ್ಕೆ ಪಥಮ ಸ್ಥಾನ ಪಡೆದ ನಾಲ್ಕು ವಿದ್ಯಾರ್ಥಿಗಳಿದ್ದು, ಅವರಲ್ಲಿ ಬೆಳಗಾವಿ ವಿಭಾಗದ ಇಬ್ಬರೂ ವಿದ್ಯಾರ್ಥಿಗಳು ಇದ್ದು, ಇವಳೂ ಸಹ ಒಬ್ಬ ವಿದ್ಯಾರ್ಥಿನಿಯಾಗಿದ್ದಾಳೆ. ರಾಜ್ಯದಲ್ಲಿಯೇ ಸಾಧನೆ ಮಾಡಿರುವ ಕು. ಅನುಪಮಾಳ ತಂದೆ ಶ್ರೀಶೈಲ್ ಅವರು ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಮನೆಯ ಜವಬ್ದಾರಿ ಹೊತ್ತು ತನ್ನ ಕೆಲಸದಿಂದ ಬರುತ್ತಿದ್ದ ಸಂಬಳದಲ್ಲಿ ಕುಟುಂಬ ನಿರ್ವಹಣೆ ಮಾಡಿ ಆರ್ಥಿಕ ಸಂಕಷ್ಟದಲ್ಲಿ ತನ್ನ ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದರು. 

  ಆದರೆ ದುರಾದೃಷ್ಟವಶಾತ್ ಕಳೆದ ಒಂದು ವರೆ ವರ್ಷದ ಹಿಂದೆ ತಂದೆ ಶ್ರೀಶೈಲ ಅವರು ಕೊರೊನಾ ಸಂದರ್ಭದಲ್ಲಿ ಅನಾರೋಗ್ಯ ಹಿನ್ನೆಲೆಯಲ್ಲಿ ತೀರಿಕೊಂಡಿದ್ದಾರೆ. ಆದರೆ ತಂದೆ ತೀರಿಕೊಂಡರು ದೃತಿಗೇಡದ ತಾಯಿ ತಾನು ಖಾಸಗಿ ಆಸ್ಪತ್ರೆ ಒಂದರಲ್ಲಿ ಕೆಲಸ ಮಾಡುತ್ತ ತನ್ನ ಕುಟುಂಬ ನಿರ್ವಹಣೆ ಜೊತೆ ತನ್ನ ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. 

   ತನ್ನ ತಾಯಿಯ ಹಾಗೂ ಮನೆಯ ಪರಿಸ್ಥಿತಿ ಅರಿತ ವಿದ್ಯಾರ್ಥಿನಿ ಅನುಪಮಾ ಇವಳು ತನ್ನ ತಾಯಿಯ ಮನೆಗೆಲಸದ ಜೊತೆಗೆ ತನ್ನನ್ನು ತೊಡಿಗಿಸಿಕೊಂಡು ಅಭ್ಯಾಸ ಮಾಡುತ್ತ ರಾಜ್ಯವೇ ತನ್ನತ್ತ ನೋಡುವ ಹಾಗೆ ಸಾಧನೆ ಮಾಡಿರುವದು ಹೆಮ್ಮೆಯ ಸಂಗತಿಯಾಗಿದೆ.

  ತಂದೆ ಮರಣ ಹೊಂದಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿ ಇದ್ದರೂ ತಾಯಿಯ ದುಡಿಮೆಯ ಮೇಲೆ ಅವಲಂಬಿತವಾದ ಈ ವಿದ್ಯಾರ್ಥಿನಿ ಮದ್ಯದಲ್ಲಿ ಶಾಲೆ ಬಿಡುವ ಪ್ರಸಂಗ ಬಂದರೂ ದೃತಿಗೆಡದೆ ಶಿಕಕರು ಹಾಗೂ ತಾಯಿಯು ಬೆನ್ನಲುಬಾಗಿ ನಿಂತಿದ್ದು, ವಿದ್ಯಾರ್ಥಿಯ ಸಾಧನೆಗೆ ಕಾರಣವಾಗಿದೆ.

   ಸದ್ಯ ಕು. ಅನುಪಮಾಳ ಮುಂದಿನ ಗುರಿ ಆಯ್ ಆಯ್ ಟಿ ಯಲ್ಲಿ ಪದವಿ ಪಡೆದು ನಂತರ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗಿ ಉತ್ತಮ ಸೇವೆ ಸಲ್ಲಿಸುವ ಬಯಕೆ ಹೊಂದಿದ್ದಾಳೆ. 

ಅನುಪಮಾ ಬೆನ್ನು ತಟ್ಟಿದ ಅಧಿಕಾರಿಗಳು : 

     ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯನ್ನು ತಮ್ಮ ಕಾರ್ಯಾಲಯದಲ್ಲಿ ಅಪರ ಆಯುಕ್ತರು ಧಾರವಾಡದ ಶ್ರೀಮತಿ ಜಯಶ್ರೀ ಶಿಂತ್ರಿ ಹಾಗೂ ಉಪ ನಿರ್ದೇಶಕ ಬೆಳಗಾವಿ ಬಸವರಾಜ್ ನಾಲವತವಾಡ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ್  ಕರಿಕಟ್ಟಿ, ಶಿಕ್ಷಕವೃಂದ ದವರು ವಿದ್ಯಾರ್ಥಿನಿಯನ್ನ ಸನ್ಮಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿ ಓದಿ