ಹಗರಿಬೊಮ್ಮನಹಳ್ಳಿ

ಚಕ್ರ ಎಸೆತದಲ್ಲಿ ಶ್ರೀನಿವಾಸ್ ತೃತೀಯ ಸ್ಥಾನ

ಚಕ್ರ ಎಸೆತದಲ್ಲಿ ಶ್ರೀನಿವಾಸ್ ತೃತೀಯ ಸ್ಥಾನ

ಹಗರಿಬೊಮ್ಮನಹಳ್ಳಿ 04: ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಹಗರಿಬೊಮ್ಮನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಟೈಪಿಸ್ಟ್‌ ಶ್ರೀನಿವಾಸ್ ಸಿಎಂ ಅವರು ಚಕ್ರ ಎಸೆತ(ಡಿಸ್ಕಸ್ ಥ್ರೋ)ದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. 

ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಪಾಟೀಲ್ ಸೇರಿದಂತೆ ಸಿಬ್ಬಂದಿ ವರ್ಗ ಕ್ರೀಡಾ ಕೂಟದಲ್ಲಿ ತೃತೀಯ ಸ್ಥಾನ ಪಡೆದ ಟೈಪಿಸ್ಟ್‌ ಶ್ರೀನಿವಾಸ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ