ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ
ಬಳ್ಳಾರಿ,26: ನಗರದ ಶಿವಶಾಂತವೀರ ಪಬ್ಲಿಕ್ ಶಾಲೆ (ಸಿಬಿಎಸ್ಇ) ಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಆ.26 2024 ರಂದು ಆಚರಿಸಲಾಯಿತು.
ವಿಶೇಷವಾಗಿ ನರ್ಸರಿ, ಎಲ್.ಕೆ.ಜಿ ಮತ್ತು ಯು.ಕೆ.ಜಿ ವಿದ್ಯಾರ್ಥಿಗಳು ರಾಧಾ-ಕೃಷ್ಣನ ಛದ್ಮವೇಷ ಧರಿಸಿ ಬಂದಿದ್ದು ಆಕರ್ಷಕವಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಾಧಾ ಕೃಷ್ಣನ ವೇಷದಲ್ಲಿದ್ದು ಶಾಲಾ ಅಂಗಳದಲ್ಲಿ ನಂದ ಗೋಕುಲವೇ ನಿರ್ಮಾಣವಾದಂತೆ ತೋರುತ್ತಿತ್ತು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರು ಮಾತನಾಡಿ ಶ್ರೀಕೃಷ್ಣನ ಬಾಲಲೀಲೆ ಮತ್ತು ಪವಾಡಗಳನ್ನು ನೆನಪಿಸಿಕೊಟ್ಟರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಕುಮಾರಿ ಮೃಣಾಲಿ ಸ್ವಾಗತಿಸಿದರು. ಪಾಲಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.