ಶ್ರೀರಾಮ ಹೊಸಯುಗಕ್ಕೆ ನಾಂದಿ ಹಾಡಿದೆ: ಸಂಗನಬಸವ ಶ್ರೀಗಳು
ಶಿಗ್ಗಾವಿ 22: ಅಯೋದ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ಭಾರತೀಯ ಸಂಸ್ಕೃತಿಯ ಮತ್ತು ನಾಗರಿಕತೆಯ ಪ್ರತೀಕ ಇದು ಹೊಸಯುಗಕ್ಕೆ ನಾಂದಿ ಹಾಡಿದೆ ಎಂದು ವಿರಕ್ತಮಠದ ಸಂಗನಬಸವ ಶ್ರೀಗಳು ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ನಡೆದ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಶ್ರೀಗಳು ವಿಶ್ವದಲ್ಲಿ ಇರುವ ಹಿಂದೂಗಳಿಗೆ ಶತಮಾನದ ನಂಬಿಕೆಯ ಶ್ರೀರಾಮಲಲ್ಲಾವಾಗಿದೆ ಅಲ್ಲದೇ ಎಲ್ಲರ ಸಾಮರಸ್ಯ, ಏಕತೆ, ಶಾಂತಿ, ಪ್ರಗತಿಯ ಮತ್ತು ಹಿಂದೂ ಸಮಾಜ ನಡೆಸಿದ ನಿರಂತರ ಹೋರಾಟದ ಮೈಲ್ಲುಗಲ್ಲಾಗಿದೆ ಎಂದರು.
ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಇದು ಐತಿಹಾಸಿಕ ವರ್ಷ ಹಾಗೂ ಅಯೋದ್ಯೆಯಲ್ಲೆ ನೆಡೆಯುವ ದೀಪೋತ್ಸವ ಐತಿಹಾಸಿಕ ದೀಪಾವಳಿಗೆಗೆ ಸಾಕ್ಷಿಯಾಗಲಿದೆ ಹಾಗೂ ಅನೇಕ ವರ್ಷಗಳ ಹೋರಾಟದ ಫಲವಾಗಿ ಶ್ರೀರಾಮನು ತನ್ನ ಮೂಲಸ್ಥಳದಲ್ಲಿ ಕುಳಿತುಕೊಳ್ಳುವುದೇ ಇಂದಿನ ವಿಶೇಷವಾಗಿದೆ ಹಾಗೂ ದೇಶದ ಯುವಕರು ಇದರ ಹಿನ್ನಲೆಯಲ್ಲಿ ಆದ್ಯಾತ್ತದತ್ತ ವಾಲುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ರಮೇಶ ವನಹಳ್ಳಿ, ಮಂಜುನಾಥ ಬ್ಯಾಹಟ್ಟಿ, ಮುಖಂಡರಾದ ಶಿವಪ್ರಸಾದ ಸುರಗೀಮಠ, ಹನುಮರೆಡ್ಡಿ ನಡುವಿನಮನಿ, ವಿಶ್ವನಾಥ ಗಾಣಿಗೇರ, ಚೇತನ ಕಲಾಲ, ಶ್ರೀಕಾಂತ ಶಿವಲೋಚನಮಠ, ಶಿವು ಪಾಣಿಗಟ್ಟಿ, ಷಣ್ಮುಖ ಪಾಟೀಲ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು. ನವೀನ ಸಾಸನೂರ ಕಾರ್ಯಕ್ರಮ ನಿರ್ವಹಿಸಿದರು.