ಮಹಲಿಂಗಪುರ

ಶ್ರೀರಾಮ ನವಮಿ ಆಚರಣೆ

ಶ್ರೀರಾಮ ನವಮಿ ಆಚರಣೆ

ಮಹಾಲಿಂಗಪುರ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ, ಹಿಂದೂ ಸಂಘಟನೆಗಳ ಒಕ್ಕೂಟ ವತಿಯಿಂದ ರಾಮನವಮಿ ಮತ್ತು ಹನುಮ ಜಯಂತಿ ಆಚರಿಸಲಾಯಿತು, ಸಾರ್ವಜನಿಕರಿಗೆ ಪಾನಕ ಹಂಚಲಾಯಿತು. 

ಪುರಸಭಾ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಪೂಜೆ ನೆರವೇರಿಸಿದರು. ಜಿಪಂ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಈರ​‍್ಪ ದಿನ್ನಿಮನಿ, ಮನೋಹರ ಶಿರೋಳ, ಜಿ. ಎಸ್‌. ಗೊಂಬಿ, ಪ್ರಹ್ಲಾದ ಸಣ್ಣಕ್ಕಿ, ಪ್ರಕಾಶ ಜೀರಗಾಳ,ಚನ್ನಬಸು ಹುರಕಡ್ಲಿ, ಶಂಕರಗೌಡ ಪಾಟೀಲ, ರಾಘು ಗರಗಟ್ಟಿ, ಗುರುಪಾದ ಅಂಬಿ, ಮಹಾಲಿಂಗ ಮುದ್ದಾಪುರ, ಚನ್ನಪ್ಪ ರಾಮೋಜಿ ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ