ಶಿಗ್ಗಾವ್

ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ಬಹಳ ದಿನದ ಕನಸ್ಸು ಇಂದು ನನಸ್ಸಾಗಿದೆ: ನರಹರಿ

ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ಬಹಳ ದಿನದ ಕನಸ್ಸು ಇಂದು ನನಸ್ಸಾಗಿದೆ: ನರಹರಿ

ಶಿಗ್ಗಾವಿ 22: ದೇಶದ ಪ್ರತಿಯೊಬ್ಬ ಭಾರತೀಯ ಭಾರತದ ಸಂಸ್ಕೃತಿಯನ್ನು ಮತ್ತು  ಭಾವೈಕ್ಯತೆಯ ಸಂದೇಶವನ್ನು ಸಾರುವ ಮೂಲಕ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿದೆ ಎಂದು ಯುವ ಮೋರ್ಚಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ನರಹರಿ ಕಟ್ಟಿ ಹೇಳಿದರು. 

ಪಟ್ಟಣದ ಹಳೇ ಬಸ ನಿಲ್ದಾಣದ ಹತ್ತಿರ ಪ್ರಭಂಜನ ಟ್ರೇಂಡ್ಸ ಹೊರಾಂಗಣದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಹಾಗೂ ಅಯೋದ್ಯೆಯಲ್ಲಿ ನಡೆದ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು 110 ಟಿ.ವ್ಹಿಯಲ್ಲಿ ನೇರ ಕಾರ್ಯಕ್ರಮವನ್ನು ಸಾರ್ವಜನಿಕರು ವೀಕ್ಷಿಸಲು ಬೃಹತ ಪರದೆ ವ್ಯವಸ್ಥೆಯನ್ನು ಮಾಡಿ ಮಾತನಾಡಿದ ಅವರು ಶ್ರೀರಾಮಲಲ್ಲಾ ಪ್ರತಿಷ್ಠಾಪನೆ ಆಗುತ್ತಿರುವುದು ಬಹಳ ದಿನದ ಕನಸ್ಸಾಗಿತ್ತು ಇಂದು ನನಸ್ಸಾಗಿದೆ ಎಂದರು.  

ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ ಇಡಿ ವಿಶ್ವವೇ ಭಾರತವನ್ನು ನೋಡುವ ಮೈಲ್ಲುಗಲ್ಲಿಗೆ ಈ ವೇದಿಕೆ ಸಾಕ್ಷಿಯಾಗಿದೆ ಅಲ್ಲದೇ ಬಹು ದಿನದ ಶ್ರೀರಾಮ ರಾಜ್ಯದ ಬೇಡಿಕೆ ಇಂದಿಗೆ ನನಸ್ಸಾಯಿತು ಅದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದೀಜೀಯವರ ಶ್ರಮ ಬಹಳವಿದೆ ಎಂದರು.  

ಈ ಸಂದರ್ಭದಲ್ಲಿ ಮಕ್ಕಳು ಶ್ರೀರಾಮನ ವೇಷ ಭೂಷಣ ಧರಿಸಿದ್ದು ವಿಶೇಷವಾಗಿತ್ತು. ಸಾರ್ವಜನಿಕರಿಗೆ ಲಿಂಬು ಶರಭತ್ತ ಹಾಗೂ ಕೋಸಂಬರಿ ಗೊಜ್ಜು ನೀಡಲಾಯಿತು. ಡಾ.ಎಂ.ಎಂ.ತಿರ್ಲಾಪೂರ, ಡಾ.ರಾಣಿ ತಿರ್ಲಾಪೂರ, ಪ್ರಭಂಜನ ವ್ಯವಸ್ಥಾಪಕ ಆನಂದ ಮೇಲಗೇರಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ